European Union: ಯುರೋಪ್ ಒಕ್ಕೂಟದ ಮಾಸ್ಟರ್ ಪ್ಲಾನ್, ರಷ್ಯಾ ನಡೆಯ ಮೇಲೆ ನಿರ್ಧಾರ!

ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಒಂದೊಂದು ರೀತಿ ತಿರುವು ಪಡೆಯುತ್ತಿದ್ದು ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ದೊಡ್ಡ ಬದಲಾವಣೆ ಕಾಣುತ್ತಿದೆ. ಇನ್ನೇನು ರಷ್ಯಾ ಇಡೀ ಉಕ್ರೇನ್ ನೆಲವನ್ನು ತನ್ನ ವಶಕ್ಕೆ ಪಡೆಯಬಹುದು ಅನ್ನೋ ಕಿಚ್ಚು ಹೊತ್ತಿಕೊಂಡ ಸಮಯದಲ್ಲೇ ಈಗ ಯುರೋಪ್ ಒಕ್ಕೂಟ ಒಂದಾಗಿದೆ. ಅಲ್ಲದೆ ರಷ್ಯಾ ವಿರುದ್ಧ ರೊಚ್ಚಿಗೆದ್ದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಯುರೋಪ್ ನಾಯಕರು.

ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ಶುರು ಮಾಡಿಕೊಂಡ ನಂತರ ಇಡೀ ಯುರೋಪ್ ಒಂದೇ ಮಾತು ಹೇಳಿತ್ತು. ಕೂಡಲೇ ಯುದ್ಧ ನಿಲ್ಲಬೇಕು, ಅಥವಾ ಅಮೆರಿಕದ ಸಹಾಯ ಪಡೆದು ರಷ್ಯಾ ವಿರುದ್ಧ ಯುದ್ಧ ಸಾರಬೇಕು ಎಂದು. ಆದರೆ ಜೋ ಬೈಡನ್ ಸರ್ಕಾರ ಮಾತ್ರ ರಷ್ಯಾ ವಿರುದ್ಧ ದಾಳಿಗೆ ಧೈರ್ಯ ಮಾಡಲೇ ಇಲ್ಲ. ಇಂತಹ ಸಮಯದಲ್ಲೇ ಜೋ ಬೈಡನ್ ಸರ್ಕಾರ ಬಿದ್ದು ಹೋಗಿ, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಬಂದಿದೆ. ಟ್ರಂಪ್ ರಷ್ಯಾ ಪರ ಇದ್ದಾರೆ ಎಂಬ ಆರೋಪಗಳ ಮಧ್ಯೆ ಯುರೋಪ್ ಒಕ್ಕೂಟದ ನಾಯಕರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

European Union s Future Decision Based on Putin s Actions

ಯುರೋಪ್ ಒಕ್ಕೂಟದ ಮಹತ್ವದ ನಿರ್ಧಾರ!

2ನೇ ಮಹಾಯುದ್ಧದ ನಂತರ ಯುರೋಪ್ & ರಷ್ಯಾ ನಡುವೆ ದೊಡ್ಡ ತಿಕ್ಕಾಟ ಶುರುವಾಗಿದೆ. ಅದರಲ್ಲೂ ಭವಿಷ್ಯದಲ್ಲಿ ರಷ್ಯಾ ತಮ್ಮ ಮೇಲೆ ದಾಳಿ ಮಾಡಬಹುದು ಎಂಬ ಭಯದಲ್ಲಿಯೇ ಬದುಕುತ್ತಿವೆ ಯುರೋಪ್ ದೇಶಗಳು. ಹೀಗಿದ್ದಾಗ ಉಕ್ರೇನ್ ನೆಲವನ್ನು ರಷ್ಯಾ ಬಡಿದು ಬಾಯಿಗೆ ಹಾಕಿಕೊಂಡ ನಂತರ ಇನ್ನಷ್ಟು ತಲ್ಲಣ ಶುರುವಾಗಿದೆ. ಆದರೆ ಈ ಸಮಯದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನ ಲೆಕ್ಕಿಸದೆ ಉಕ್ರೇನ್ ಬೆನ್ನಿಗೆ ನಿಂತಿದ್ದಾರೆ ಯುರೋಪ್ ಒಕ್ಕೂಟದ ರಾಷ್ಟ್ರಗಳ ನಾಯಕರು.

ಅಕಸ್ಮಾತ್ ರಷ್ಯಾ ತನ್ನ ದಾಳಿಯನ್ನ ಇದೇ ರೀತಿ ಮುಂದುವರಿಸಿದರೆ, ಉಕ್ರೇನ್‌ಗೆ ಅಗತ್ಯವಾದ ಬೆಂಬಲ ನೀಡುವ ಜೊತೆಗೆ ರಷ್ಯಾ ಮೇಲೆ ನ್ಯಾಟೋ ಪಡೆಗಳಿಂದ ದಾಳಿ ಮಾಡುವ ವಾರ್ನಿಂಗ್ ಕೂಡ ನೀಡಲಾಗಿದೆ. ಆದರೆ ಇದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿರ್ಧಾರದ ಮೇಲೆ ಡಿಸೈಡ್ ಆಗಲಿದೆ. ಈ ಕುರಿತು ಮಹತ್ವದ ಸಭೆ ನಡೆಸಿರುವ ಯುರೋಪ್ ಒಕ್ಕೂಟದ ದೇಶಗಳು ಮುಂದಿನ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿವೆ. ಈ ಮೂಲಕ 3ನೇ ಮಹಾಯುದ್ಧ ನಡೆಯುವ ಆತಂಕ ಇನ್ನೂ ನಿಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+