Indonesia Earthquake: ಇಂಡೋನೇಷ್ಯಾದ ಬಾಲಿಯಲ್ಲಿ ಪ್ರಬಲ ಭೂಕಂಪನ
ಇಂಡೋನೇಷ್ಯಾದಲ್ಲಿ ಮಂಗಳವಾರ ಪ್ರಬಲ ಭೂಕಂಪನದ ಅನುಭವವಾಗಿದೆ. ಬಾಲಿ ಸಾಗರ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ. ಆದರೆ ಹಾನಿಯ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಇಂಡೋನೇಷ್ಯಾದ ಬಾಲಿ ಸಮುದ್ರ ಪ್ರದೇಶದಲ್ಲಿ ಇಂದು 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ಅನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಭೂಕಂಪದ ಕೇಂದ್ರ ಬಿಂದು ಇಂಡೋನೇಷ್ಯಾದ ಮಾತರಂನಿಂದ ಉತ್ತರಕ್ಕೆ 203 ಕಿಮೀ (126 ಮೈಲಿಗಳು) ಮತ್ತು ಭೂಮಿಯ ಮೇಲ್ಮೈಯಿಂದ 516 ಕಿಮೀ (320.63 ಮೈಲಿಗಳು) ಆಳದಲ್ಲಿದೆ ಎಂದು EMSC ಹೇಳಿದೆ.
A magnitude 7.0 earthquake struck the Bali Sea region of Indonesia today, reports Reuters quoting European-Mediterranean Seismological Centre (EMSC)
— ANI (@ANI) August 28, 2023
ಇಂಡೋನೇಷ್ಯಾದ ಭೂಕಂಪದ ತೀವ್ರತೆಯನ್ನು 7.1 ಎಂದು ಅಮೇರಿಕನ್ ಜಿಯೋಲಾಜಿಕಲ್ ಸರ್ವೆ ಅಂದಾಜಿಸಿದೆ. ಆಳ ಸಮುದ್ರದ ಭೂಕಂಪದ ಪರಿಣಾಮವಾಗಿ ಸುನಾಮಿ ಅಪಾಯವಿಲ್ಲ ಎಂದು ಯುಎಸ್ ಸುನಾಮಿ ಎಚ್ಚರಿಕೆ ಇಲಾಖೆ ಹೇಳಿದೆ.
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ (ಟ್ವಿಟರ್) ನಲ್ಲಿ ಕೆಲವರು ಭೂಕಂಪದ ನಂತರ ಬಲವಾದ ನಡುಕಗಳ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ, ಆದರೆ ಈವರೆಗೆ ಹಾನಿ ಅಥವಾ ಸಾವುನೋವಿನ ಬಗ್ಗೆ ತಕ್ಷಣದ ವರದಿಗಳಿಲ್ಲ.
ಆಗಸ್ಟ್ 25ರಂದು ಕೂಡ ಭೂಕಂಪ ಸಂಭವಿಸಿತ್ತು
ಇದಕ್ಕೂ ಮುನ್ನ ಆಗಸ್ಟ್ 25 ರಂದು ಇಂಡೋನೇಷ್ಯಾದಲ್ಲಿ ಭೂಕಂಪನದ ಅನುಭವವಾಗಿತ್ತು. ಭೂಕಂಪವು ಟುಯಲ್ ನಗರದ ಪಶ್ಚಿಮಕ್ಕೆ 253 ಕಿಲೋಮೀಟರ್ ದೂರದಲ್ಲಿ ಸಂಭವಿಸಿತ್ತು. ಇದರ ತೀವ್ರತೆಯನ್ನು 4.9 ಎಂದು ಹೇಳಲಾಗಿದೆ.












Click it and Unblock the Notifications