ಇಲಿನಾಯ್ಸ್‌ನಲ್ಲಿ ಧೂಳಿನ ಚಂಡಮಾರುತ: ಭಯಾನಕ ಗಾಳಿಗೆ ಆರು ಮಂದಿ ಬಲಿ- ಹಲವರಿಗೆ ಗಾಯ!
ಇಲಿನಾಯ್ಸ್‌ನ ಸ್ಪ್ರಿಂಗ್‌ಫೀಲ್ಡ್‌ನ ದಕ್ಷಿಣಕ್ಕೆ ಸೋಮವಾರ ಧೂಳಿನ ಚಂಡಮಾರುತ ಬೀಸಿದ್ದು ಆರು ಮಂದಿಯ ಪ್ರಾಣವನ್ನು ಬಲಿ ಪಡೆದುಕೊಂಡಿದೆ. ಈ ಭಯಾನಕ ಧೂಳಿನ ಗಾಳಿಗೆ ಹಲವಾರು ಜನ ಗಾಯಗೊಂಡಿದ್ದಾರೆ. ಅಪಾರ ಹಾನಿ ಕೂಡ ಸಂಭವಿಸಿದೆ.
ಏಕಾಏಕಿ ಭೀಸಿದ ಧೂಳಿನ ಚಂಡಮಾರುತದಿಂದಾಗಿ ವಾಹನಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಧೂಳಿನ ಚಂಡಮಾರುತಕ್ಕೆ ಸಿಲುಕಿ ಕೆಲ ವಾಹನಗಳಿಗೆ ಬೆಂಕಿ ಹೊತ್ತು ಉರಿದಿದೆ. ಸೋಮವಾರ ಬೆಳಗ್ಗೆ ಸಂಭವಿಸಿದ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Massive pileup on I-55 south of Springfield, Illinois has closed the interstate for nearly 30 miles. Blowing dust off freshly plowed fields led to very low visibility#ilwx
— Nick Hausen (@NickHausenWx) May 1, 2023
🎥: Nathan Cormier pic.twitter.com/im7QLE8BTp
ಈ ಧೂಳಿನ ಗಾಳಿಯ ಪರಿಣಾಮದಿಂದಾಗಿ ಅಂತರರಾಜ್ಯ 55ರ ಸಂಚಾರವನ್ನು ಸುಮಾರು 30 ಮೈಲುಗಳವರೆಗೆ ಎರಡೂ ದಿಕ್ಕುಗಳಲ್ಲಿ ಸ್ಥಗಿತಗೊಳಿಸಲಾಯಿತು ಎಂದು ಗವರ್ನರ್ ಜೆಬಿ ಪ್ರಿಟ್ಜ್ಕರ್ ವಿವರಿಸಿದ್ದಾರೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊ ಹಾಗೂ ಫೋಟೋಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಹೊಗೆ ಮತ್ತು ಧೂಳಿನ ನಡುವೆ ಅಸ್ತವ್ಯಸ್ತವಾಗಿರುವ ಕಾರುಗಳು ಹಾಗೂ ಟ್ರಾಕ್ಟರ್-ಟ್ರೇಲರ್‌ಗಳನ್ನು ಕಾಣಬಹುದು.

ಹೆದ್ದಾರಿಯುದ್ದಕ್ಕೂ ಕೃಷಿ ಕ್ಷೇತ್ರಗಳಿಂದಾಗಿ ಬೀಸುವ ಅತಿಯಾದ ಗಾಳಿ ಶೂನ್ಯ ಗೋಚರತೆಗೆ ಕಾರಣ ಎಂದು ಹೇಳಲಾಗುತ್ತದೆ.
ಇಲಿನಾಯ್ಸ್ ಸಾರಿಗೆ ಇಲಾಖೆಯ ಪ್ರಕಾರ, ಈ ಘಟನೆ ದಕ್ಷಿಣ-ಮಧ್ಯ ಇಲಿನಾಯ್ಸ್‌ನ ಮೈಲಿಪೋಸ್ಟ್ 76ರ ಸಮೀಪ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಇದರಿಂದ ಗೋಚರತೆ ಕಡಿಮೆಯಾಗಿ ಮೈಲಿಪೋಸ್ಟ್ 52 ಮತ್ತು 80 ರ ನಡುವೆ ಟ್ರಾಫಿಕ್ ಹೆಚ್ಚಾಗಿರುವುದು ವಿಡಿಯೋದಲ್ಲಿ ಕಂಡು ಬಂದಿಂದೆ.
ಇದು 40 ರಿಂದ 60 ಪ್ರಯಾಣಿಕರ ಕಾರುಗಳು ಮತ್ತು ಬಹು ಟ್ರಾಕ್ಟರ್-ಟ್ರೇಲರ್‌ಗಳಿಗೆ ಹಾನಿಯನ್ನುಂಟು ಮಾಡಿದೆ. ಅವುಗಳಲ್ಲಿ ಎರಡು ಬೆಂಕಿ ಹೊತ್ತಿಕೊಂಡಿವೆ ಎಂದು ತಿಳಿದು ಬಂದಿದೆ. ಏಕಾಏಕಿ ಧೂಳಿನ ಚಂಡಮಾರುತದಿಂದಾಗಿ ವಾಹನಗಳು ತನ್ನಷ್ಟಕ್ಕೇ ತಾವೇ ತಾಗಿ ಅಪಘಾತಗಳು ಸಂಭವಿಸಿವೆ. ಕೆಲ ವಾಹನಗಳು ಗಾಳಿಗೆ ರಸ್ತೆ ಬದಿ ನಿಂತಿವೆ.
ಘಟನೆಯಿಂದಾಗಿ ಕನಿಷ್ಠ 30 ಜನರು ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸೆಮಿಟ್ರೇಲರ್‌ನಲ್ಲಿ ಪವರ್-ಟೂಲ್ ಬ್ಯಾಟರಿ ಬ್ಲೇಜ್ ಸೇರಿದಂತೆ ಬೆಂಕಿಯನ್ನು ನಿಗ್ರಹಿಸಲು ಅಪಾಯಕಾರಿ ವಸ್ತುಗಳ ತಂಡದ ಜೊತೆಗೆ 10 ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ಮಾಂಟ್‌ಗೊಮೆರಿ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ.

WSIL ಮುಖ್ಯ ಹವಾಮಾನಶಾಸ್ತ್ರಜ್ಞ ನಿಕ್ ಹೌಸೆನ್ ಪ್ರಕಾರ, ಹೊಸದಾಗಿ ಬೆಳೆಸಿದ ಹೊಲಗಳಿಂದಾಗಿ ಧೂಳಿನ ಚಂಡಮಾರುತ ಬೀಸುತ್ತದೆ. ಇದರಿಂದ ಏನೂ ಗೋಚರಿಸುವುದಿಲ್ಲ. ಹೀಗಾಗಿ ವಾಹನಗಳು ಅಪಘಾತಕ್ಕೀಡಾಗಿವೆ.
ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನಶಾಸ್ತ್ರಜ್ಞ ಚಕ್ ಶಾಫರ್ ಅಸೋಸಿಯೇಟೆಡ್ ಪ್ರೆಸ್‌ಗೆ ಈ ಪ್ರದೇಶವು ಕಡಿಮೆ ಮರಗಳೊಂದಿಗೆ ಸಮತಟ್ಟಾಗಿದೆ. ಕಳೆದ ಮೂರು ವಾರಗಳಿಂದ ಈ ಪ್ರದೇಶ ಒಣಗಿದೆ. ರೈತರು ತಮ್ಮ ಹೊಲಗಳನ್ನು ಉಳುಮೆ ಮಾಡಲು ಮತ್ತು ನಾಟಿ ಮಾಡಲು ಹೊರಟಿದ್ದಾರೆ. ಮಣ್ಣಿನ ಮೇಲಿನ ಪದರವು ಸಾಕಷ್ಟು ಸಡಿಲವಾಗಿದೆ. ಹೀಗಾಗಿ ಇದು ಸಂಭವಿಸಿದೆ ಎಂದಿದ್ದಾರೆ. h












Click it and Unblock the Notifications