ಪಿಎಸ್‌ಎಲ್ ಪಂದ್ಯ ನಡೆಯಬೇಕಿದ್ದ ಕ್ರೀಡಾಂಗಣದ ಮೇಲೆ ಭಾರತದ ಡ್ರೋನ್ ದಾಳಿ; ಪಂದ್ಯ ರದ್ದು?
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಕೆ ಪ್ರತ್ಯುತ್ತರವಾಗಿದೆ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ದಾಳಿ ಶುರು ಮಾಡಿದೆ. ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ವಾಯು ದಾಳಿ ಮಾಡಿದ್ದು 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದು ಹಾಕಿರುವುದಾಗಿ ತಿಳಿಸಿದೆ. ಗುರುವಾರ ಕೂಡ ಭಾರತ ಪಾಕಿಸ್ತಾನದ ಹಲವು ಕಡೆ ಡ್ರೋನ್ ದಾಳಿ ನಡೆಸುತ್ತಿದ್ದು ಪಾಕಿಸ್ತಾನ ತತ್ತರಿಸಿದೆ.
ಗುರುವಾರ ಮಧ್ಯಾಹ್ನ ರಾವಲ್ಪಿಂಡಿ ಕ್ರೀಡಾಂಗಣವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯಾವಳಿ ನಡೆಯುತ್ತಿರುವ ಸಮಯದಲ್ಲೇ ಕ್ರಿಕೆಟ್ ಮೈದಾನದ ಮೇಲೆ ಡ್ರೋನ್ ದಾಳಿಯಾಗಿರುವುದು ಇದೀಗ ಪಂದ್ಯಾವಳಿ ಮೇಲೆ ಪರಿಣಾಮ ಬೀರಿದೆ. ದಾಳಿಯ ಬಳಿಕ ಪಿಎಸ್‌ಎಲ್ ಪಂದ್ಯವನ್ನು ರದ್ದುಗೊಳಿಸಬಹುದೆಂಬ ಆತಂಕ ಎದುರಾಗಿದೆ.

ಭಾರತವು ತನ್ನ ಎಸ್ -400 ಸುದರ್ಶನ ಚಕ್ರ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಭಾರತದ ಭೂಪ್ರದೇಶದ ಕಡೆಗೆ ಚಲಿಸುತ್ತಿರುವ ಪಾಕಿಸ್ತಾನದ ಕ್ಷಿಪಣಿಗಳ ವಿರುದ್ಧ ಉಡಾಯಿಸಿದ ಬಳಿಕ ಈ ಡ್ರೋನ್ ದಾಳಿ ನಡೆದಿದೆ. ಈ ಡ್ರೋನ್ ದಾಳಿ ಬಳಿಕ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ವಿಡಿಯೋ ವೈರಲ್
ರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ಡ್ರೋನ್ ದಾಳಿಯುವ ಪಾಕಿಸ್ತಾನದಲ್ಲಿ ಭದ್ರತೆಯ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ. ಈಗಾಗಲೇ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ಈಗಾಗಲೇ ಆತಂಕಗೊಂಡಿದ್ದು ವಾಪಸ್ ತಮ್ಮ ದೇಶಗಳಿಗೆ ಮರಳಲು ಯೋಜಿಸುತ್ತಿದ್ದಾರೆ. ಈ ದಾಳಿಯ ಬಳಿಕ ಪಾಕಿಸ್ತಾನ ಪಿಎಸ್‌ಎಲ್ ಅನ್ನು ರದ್ದು ಮಾಡುವ ಅಥವಾ ಮುಂದೂಡವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications