ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ: ಡೊನಾಲ್ಡ್‌ ಟ್ರಂಪ್‌ ಘೋಷಣೆ ಸಾಧ್ಯತೆ

|
Google Oneindia Kannada News

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆಸುತ್ತಿದ್ದಾರೆ. ಅಧೀಕೃತ ಹೇಳಿಕೆಯನ್ನು ಡೊನಾಲ್ಡ್ ಟ್ರಂಪ್ ಇದೇ ಮಂಗಳವಾರ ನವೆಂಬರ್ 15ರಂದು ಘೋಷಣೆ ಮಾಡಲಿದ್ದಾರೆ ಎಂದು ಟ್ರಂಪ್‌ ಮಾಜಿ ಸಹಾಯಕ ತಿಳಿಸಿದ್ದಾರೆ.

ಟ್ರಂಪ್ ಮರಳಿ ಮತ್ತೆ ಅಧ್ಯಕ್ಷರಾಗಲು ಸ್ಪರ್ಧಿಸುತ್ತಿದ್ದಾರೆ. ಇದನ್ನು ಮಂಗಳವಾರ ಘೋಷಿಸಲಿದ್ದಾರೆ ಎಂದು ಮಿಲ್ಲರ್ ತಮ್ಮ ಜನಪ್ರಿಯ 'ವಾರ್ ರೂಮ್' ಪಾಡ್‌ಕ್ಯಾಸ್ಟ್‌ನಲ್ಲಿ ಮಾಜಿ ಸಹಾಯಕರು ಹೇಳಿಕೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ 2024ರಲ್ಲಿ ಶ್ವೇತಭವನದ ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆಗೆ ಹೋಗಲಿದ್ದಾರೆ. ಇದನ್ನು ಟ್ರಂಪ್‌ ಮಂಗಳವಾರ ಘೋಷಿಸಲಿದ್ದಾರೆ ಎಂದು ಅವರ ದೀರ್ಘಕಾಲದ ಸಲಹೆಗಾರ ಜೇಸನ್ ಮಿಲ್ಲರ್ ಶುಕ್ರವಾರ ತಿಳಿಸಿದ್ದಾರೆ.

Donald Trump to announce 2024 presidential bid next week

ಅಮೆರಿಕದ ಮುಂದಿನ ಚುನಾವಣೆಗೆ 78 ವರ್ಷ ವಯಸ್ಸಿನ ಮಾಜಿ ಅಧ್ಯಕ್ಷ ಟ್ರಂಪ್ ಈ ವಾರದ ಮಧ್ಯಂತರ ಚುನಾವಣೆಗೆ ಮುಂಚಿತವಾಗಿ ರಿಪಬ್ಲಿಕನ್ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದಾಗಲೇ ಮತ್ತೊಂದು ಅಧ್ಯಕ್ಷೀಯ ಅಭ್ಯರ್ಥಿಯ ರೇಸ್ ಬಗ್ಗೆ ಸುಳಿವು ನೀಡಿದ್ದರು. ಈಗ ಮತ್ತೊಂದು ದೊಡ್ಡ ಘೋಷಣೆ ಮಾಡುವುದಾಗಿ ಹೇಳಿಕೊಂಡಿದ್ದ ಡೊನಾಲ್ಡ್ ಟ್ರಂಪ್, ಆಡಳಿತರೂಢ ಜೋ ಬೈಡನ್ ಸರ್ಕಾರವನ್ನು ಟೀಕಿಸಿದ್ದರು.

ಡೊನಾಲ್ಡ್ ಟ್ರಂಪ್ ನವೆಂಬರ್ 15ರಂದು ಫ್ಲೋರಿಡಾದಲ್ಲಿ ದೊಡ್ಡ ಘೋಷಣೆ ಮಾಡುವುದಾಗಿ ಘೋಷಿಸಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ಮಧ್ಯಂತರ ಚುನಾವಣೆಯ ಮತದಾನಕ್ಕೆ ಒಂದು ದಿನ ಮೊದಲು ಓಹಿಯೋದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್ ಅವರು ಮೂರನೇ ಬಾರಿಗೆ ಅಧ್ಯಕ್ಷೀಯ ರೇಸ್‌ಗೆ ಸೇರಕೊಳ್ಳಬಹುದೆಂದು ಸೂಚಿಸಿದ್ದರು. ಆದರೆ, ಇದೀಗ ಎಲ್ಲವೂ ಸ್ಪಷ್ಟವಾಗಿದ್ದು ಜೋ ಬೈಡನ್‌ ಮದ್ಯಂತರ ಚುನಾವಣೆಯಲ್ಲಿ ಹಿನ್ನೆಡೆ ಸಾಧಿಸಿರುವ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಟ್ರಂಪ್‌, ಅಧ್ಯಕ್ಷೀಯ ಚುನಾವಣೆಗೆ ತಯಾರಿ ನಡೆಸಿದ್ದಾರೆ. ತಮ್ಮ ಎಲ್ಲ ಈಗಾಗಲೇ ಅಭ್ಯರ್ಥಿಗಳಿಗೆ ಟ್ರಂಪ್ ಕರೆ ನೀಡಿದ್ದು ಚುನಾವಣೆಯ ಜನಪ್ರಿಯ ಪ್ರಚಾರ ಅಭಿಯಾನಗಳನ್ನು ಮುಂದುವರಿಸಲು ಟ್ರಂಪ್‌ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.

Donald Trump to announce 2024 presidential bid next week

ಮಧ್ಯಂತರ ಚುನಾವಣೆ ಸಂದರ್ಭದಲ್ಲಿ ಘೋಷಣೆ

ಸೋಮವಾರ ರಾತ್ರಿ ಓಹಿಯೋದ ವಂಡಾಲಿಯಾದಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಸೆನೆಟ್ ಅಭ್ಯರ್ಥಿ ಜೆಡಿ ವ್ಯಾನ್ಸ್ ಅವರನ್ನು ಬಲಪಡಿಸಲು ಮನವಿ ಮಾಡಿದರು. ನಾಳಿನ ಪ್ರಾಮುಖ್ಯತೆಗಿಂತ ಭಿನ್ನವಾಗಿರಬಾರದು ಎಂದು ಅವರು ಬಯಸುತ್ತಾರೆ ಎಂದು ಅವರು ಹೇಳಿದರು. ಇದಾದ ಬಳಿಕ ತಾವು ಅಧ್ಯಕ್ಷ ಸ್ಥಾನಕ್ಕೆ ವಾಪಸ್ ಬರುವ ಎಲ್ಲ ಸೂಚನೆಗಳನ್ನೂ ನೀಡಿದರು. 'ನವೆಂಬರ್ 15ರಂದು, ನಾನು ಮಾರ್-ಎ-ಲಾಗೋದಲ್ಲಿ ಬಹಳ ದೊಡ್ಡ ಘೋಷಣೆ ಮಾಡಲಿದ್ದೇನೆ ಎಂದು ತಿಳಿಸಿದರು.

ಮೂರನೇ ಅಧ್ಯಕ್ಷೀಯ ಪ್ರಚಾರವನ್ನು ಪ್ರಾರಂಭಿಸುವ ತನ್ನ ಯೋಜನೆಗಳ ಬಗ್ಗೆ ಟ್ರಂಪ್ ಹೆಚ್ಚು ಸ್ಪಷ್ಟವಾಗಿದ್ದಾರೆ. ಅವರು ರಾಜಕೀಯಕ್ಕೆ ಮರಳುವುದಾಗಿ ಮತ್ತು ಅಧ್ಯಕ್ಷೀಯ ರೇಸ್‌ಗೆ ಸೇರಬಹುದು ಎಂದು ಅವರು ಇತ್ತೀಚಿನ ದಿನಗಳಲ್ಲಿ ಹಲವಾರು ಬಾರಿ ಸೂಚಿಸಿದ್ದಾರೆ. ಭಾನುವಾರದಂದು ಮಿಯಾಮಿಯಲ್ಲಿ ಟ್ರಂಪ್, 'ನಾನು ನನ್ನ ಕೆಲಸವನ್ನು ಮತ್ತೆ ಮಾಡಬೇಕಾಗಬಹುದು, ನೀವು ಟ್ಯೂನ್ ಆಗಿರಿ. ನಾಳೆ ರಾತ್ರಿ ಓಹಿಯೋದ ಮಹಾನ್ ರಾಜ್ಯದಲ್ಲಿ ಟ್ಯೂನ್ ಮಾಡಿ' ಎಂದು ಟ್ರಂಪ್ ಹೇಳಿದ್ದರು.ಮೂಲಗಳ ಪ್ರಕಾರ, ರಿಪಬ್ಲಿಕನ್ ನಾಯಕರು ಮತ್ತು ಟ್ರಂಪ್ ಅವರ ಆಪ್ತರು ತಮ್ಮ ಪ್ರಚಾರವನ್ನು ಪ್ರಾರಂಭಿಸಲು ಮಧ್ಯಂತರ ಚುನಾವಣೆಯ ಅಂತ್ಯದವರೆಗೆ ಕಾಯುವಂತೆ ಒತ್ತಾಯಿಸಿದ್ದರು. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಟ್ರಂಪ್ ನವೆಂಬರ್ 15ರಂದು ದೊಡ್ಡ ಘೋಷಣೆ ಮಾಡಿದ್ದಾರೆ ಎನ್ನಲಾಗುತ್ತದೆ.

English summary
Trump was banking on a prospective 'red wave' to announce his candidacy for the 2024 presidential polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X