Donald Trump: ಟ್ರಂಪ್ ಹೇಳಿಕೆಯಿಂದ ಮಧ್ಯಪ್ರಾಚ್ಯ ಭಾಗದಲ್ಲಿ ಬಿರುಗಾಳಿ!
ಡೊನಾಲ್ಡ್ ಟ್ರಂಪ್ ಇದೀಗ ಗಾಜಾ ಪಟ್ಟಿ ಪ್ರದೇಶದ ಮೇಲೆ ಅಮೆರಿಕದ ಹಕ್ಕು ಪ್ರತಿಪಾದಿಸಿ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಇಸ್ರೇಲ್ & ಗಾಜಾ ನಡುವೆ ನಡೆಯುತ್ತಿದ್ದ ಯುದ್ಧ ನಿಂತು ಹೋದ ಖುಷಿಯಲ್ಲಿ ಮಧ್ಯಪ್ರಾಚ್ಯದ ಜನರು ಇರುವಾಗಲೇ ಹೊಸ ಬಿರುಗಾಳಿ ಎದ್ದಿದೆ. ಈ ಮೂಲಕ ಮತ್ತೊಂದು ಕಲಹದ ಮುನ್ಸೂಚನೆ ಕೂಡ ಸಿಗುತ್ತಿದೆ. ಹಾಗೇ ಅಮೆರಿಕದ ದೋಸ್ತಿ ದೇಶಗಳು ಕೂಡ ಈ ವಿಚಾರದಲ್ಲಿ ಉಲ್ಟಾ ಹೊಡೆಯುತ್ತಿವೆ.
ದೊಡ್ಡಣ್ಣ ಅಮೆರಿಕದ ನಾಡಿಗೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾದ ನಂತರ ಒಂದಲ್ಲ ಒಂದು ವಿವಾದ ಸೃಷ್ಟಿಯಾಗುತ್ತಲೇ ಇದೆ. ಹಾಗೇ ಮಧ್ಯಪ್ರಾಚ್ಯ ಭಾಗದ ಜನರು ಗಾಜಾ ಯುದ್ಧ ನಿಂತ ನೆಮ್ಮದಿಯಲ್ಲಿ ಇದ್ದರು, ಆದರೆ ಯುದ್ಧ ನಿಂತ ಬೆನ್ನಲ್ಲೇ ಈ ಭಾಗದ ಮೇಲೆ ಹಕ್ಕು ಸಾಧಿಸಲು ಅಮೆರಿಕ ಮುಂದಾಗಿದೆಯಾ? ಎಂಬ ಅನುಮಾನ ಕೂಡ ಮೂಡಿದೆ. ಇದಕ್ಕೆ ತಕ್ಕನಾಗಿ ಡೊನಾಲ್ಡ್ ಟ್ರಂಪ್ ಕೂಡ ಹೇಳಿಕೆ ನೀಡುತ್ತಿದ್ದಾರೆ.

ಮುಂದಿನ ಪರಿಸ್ಥಿತಿ ಮತ್ತಷ್ಟು ಭಯಾನಕ?
ಪ್ರಪಂಚ ಈಗಾಗಲೇ ಬೂದಿ ಮುಚ್ಚಿದ ಕೆಂಡವಾಗಿದ್ದು, ರಷ್ಯಾ & ಉಕ್ರೇನ್ ಯುದ್ಧ ಶುರು ಆದ ನಂತರ ಎಲ್ಲವೂ ಸರಿಯಾಗಿಲ್ಲ. ಇಂತಹ ಸಮಯದಲ್ಲೇ ಅಮೆರಿಕ ನೇರವಾಗಿ ಗಾಜಾ ಮೇಲೆ ಹಕ್ಕು ಸಾಧಿಸಲು ಮುಂದೆ ಬಂದರೆ ಪರಿಸ್ಥಿತಿ ಹೇಗೆ ಆಗಬೇಡ? ಎಂಬ ಚರ್ಚೆ ಈಗ ನಡೆಯುತ್ತಿದೆ. ಮತ್ತೊಂದು ಕಡೆ ಮಧ್ಯಪ್ರಾಚ್ಯ ದೇಶಗಳು ಒಗ್ಗಟ್ಟಿನಿಂದ ಈ ನಿರ್ಧಾರವನ್ನು ವಿರೋಧ ಮಾಡಿವೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಕೆರಳಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಎಲ್ಲಾ ಕಡೆಯೂ ಹೆಸರು ಕೆಡಿಸಿಕೊಂಡು ಪರದಾಡುತ್ತಿರುವ ಅಮೆರಿಕ ಮಧ್ಯಪ್ರಾಚ್ಯ ದೇಶಗಳ ಜೊತೆಗೂ ಫೈಟಿಂಗ್ ಮಾಡಿಕೊಂಡರೆ ಪರಿಸ್ಥಿತಿ ಕೈಮೀರುವುದು ಗ್ಯಾರಂಟಿ. ಈ ಕಾರಣದಿಂದ ರಷ್ಯಾಗೆ ಲಾಭ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಯಾಕಂದ್ರೆ ಮಧ್ಯಪ್ರಾಚ್ಯ ದೇಶಗಳ ಪೈಕಿ ಬಹುತೇಕ ವಹಿವಾಟು ಅಮೆರಿಕ ಮೂಲಕವೇ ನಡೆಯುತ್ತಿದೆ, ಆದರೆ ಅಮೆರಿಕ ಅಧ್ಯಕ್ಷರ ಈ ರೀತಿಯ ಹೇಳಿಕೆಗಳು ಭವಿಷ್ಯದ ಬಗ್ಗೆ ಚಿಂತೆ ಮೂಡವಂತೆ ಮಾಡಿದೆ. ಅಲ್ಲದೆ, ರಷ್ಯಾಗೆ ಇದರಿಂದ ಲಾಭ ಆಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದೆ. ಹಾಗೇ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ವಿಚಾರ ಕೂಡ ಇದೀಗ ಚರ್ಚೆಗೆ ಬಂದಿದೆ. ಹೀಗಾಗಿ ಅಮೆರಿಕ ಅಧ್ಯಕ್ಷರ ನಡೆ ಬಗ್ಗೆ ಕುತೂಹಲ ಡಬಲ್ ಆಗುತ್ತಿದೆ.












Click it and Unblock the Notifications