Donald Trump: ರಷ್ಯಾ ಮತ್ತು ಉಕ್ರೇನ್ ಕದನ ವಿರಾಮ ಘೋಷಣೆ ಬಗ್ಗೆ ಡೊನಾಲ್ಡ್ ಟ್ರಂಪ್ ಮಹತ್ವದ ಮಾಹಿತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವು ಅಂದುಕೊಂಡ ಕೆಲಸ ಸಾಧಿಸುವ ತನಕ ಕೂಡ ಪದೇ ಪದೇ ಅದೇ ವಿಚಾರ ಜಪ ಮಾಡುತ್ತಾ ಇರುತ್ತಾರೆ. ಇದರಿಂದ ಎಷ್ಟೋ ಕೆಲಸಗಳು ಆಗಿಯೂ ಹೋಗಿವೆ, ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ಕೂಡ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಮಾತನಾಡಿದ್ದರು. ಅದರಲ್ಲೂ, ಕದನ ವಿರಾಮ ಘೋಷಣೆ ಮಾಡಿಸಿಯೇ ತೀರುತ್ತೇನೆ ಎಂದು ಶಪಥ ಕೂಡ ಮಾಡಿದ್ದರು. ಇಂತಹ ಸ್ಥಿತಿಯಲ್ಲಿ ತಮ್ಮ ಚಾಲೆಂಜ್ ವಿಚಾರದಲ್ಲಿ ಭಾಗಶಃ ಗೆದ್ದು ಬೀಗಿರುವ ಟ್ರಂಪ್ ಅವರು, ರಷ್ಯಾ & ಉಕ್ರೇನ್ ಯುದ್ಧ ಬೆಂಕಿಗೆ ನೀರು ಹಾಕಲು ಸಜ್ಜಾಗಿದ್ದಾರೆ.

ರಷ್ಯಾ & ಉಕ್ರೇನ್ ಯುದ್ಧ ಅದೆಷ್ಟು ಡೇಂಜರಸ್ ಅನ್ನೋದು ಇಡೀ ಜಗತ್ತಿಗೆ ಗೊತ್ತಾಗಿ ಹೋಗಿದೆ. ಅದರಲ್ಲೂ ರಷ್ಯಾ & ಉಕ್ರೇನ್ ವಾರ್ ಶುರುವಾದ ನಂತರ ಜಗತ್ತಿನಲ್ಲಿ ಅದೆಷ್ಟೋ ದೇಶಗಳ ಮಧ್ಯೆ ಜಗಳ ಹಾಗೂ ಹಿಂಸಾಚಾರ ಆರಂಭ ಆಗಿತ್ತು. ಹೀಗಾಗಿ ಆಧುನಿಕ ಜಗತ್ತಿನಲ್ಲಿ ಮತ್ತೊಂದು ಘೋರ ಮಹಾಯುದ್ಧ ಸಂಭವಿಸಬಾರದು, ಎಂಬ ಕಾರಣಕ್ಕೆ ಇದೀಗ ಅಮೆರಿಕ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ದೇಶಗಳು ಯುದ್ಧಗಳನ್ನ ನಿಲ್ಲಿಸಲು ಸಜ್ಜಾಗಿದ್ದಾರೆ. ಈ ಪೈಕಿ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕುವ ಬಗ್ಗೆ ಟ್ರಂಪ್ ಮಹತ್ವದ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಸ್ವತಃ ರಷ್ಯಾ ಅಧ್ಯಕ್ಷ ಪುಟಿನ್ ಅವರ ಹೇಳಿಕೆಯನ್ನೂ ಉಲ್ಲೇಖಿಸಿದ್ದಾರೆ ಟ್ರಂಪ್ ಅವರು.

Donald Trump

1 ವಾರ ಕದನ ವಿರಾಮಕ್ಕೆ ಒಪ್ಪಿಗೆ

ಅಮೆರಿಕ ಸರ್ಕಾರದ ಕ್ಯಾಬಿನೆಟ್ ಸಭೆ ನಂತರ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು, ಇದೀಗ ರಷ್ಯಾ ಮತ್ತು ಉಕ್ರೇನ್ ನಡುವಿನ ಕದನ ವಿರಾಮದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡು ಸಂಚಲನ ಸೃಷ್ಟಿಸಿದ್ದಾರೆ. ಅಂದಹಾಗೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ 1 ವಾರ ಕದನ ವಿರಾಮಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಇದೀಗ ಸ್ಪಷ್ಟಪಡಿಸಿದ್ದಾರೆ. ಉಕ್ರೇನ್ ಈಗ ತೀವ್ರ ಚಳಿಯಲ್ಲಿ ನಡುಗಿ ಹೋಗುತ್ತಿದೆ, ಈ ಕಾರಣದಿಂದ ಕದನ ವಿರಾಮ ಘೋಷಣೆ ಮಾಡಲು ಪುಟಿನ್ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂಬುದು ಟ್ರಂಪ್ ಅವರು ನೀಡಿರುವ ಮಾಹಿತಿ.

ಚಳಿ ಕಾರಣಕ್ಕೆ ಕದನ ವಿರಾಮ?

ಉಕ್ರೇನ್ ಈಗ ಕಳೆದ 60 ವರ್ಷಗಳಲ್ಲಿ ಎಂದೂ ಕಂಡು ಕೇಳರಿಯದ ಭೀಕರ ಹಿಮಪಾತ ಹಾಗೂ ಚಳಿಗಾಳಿಗೆ ತತ್ತರಿಸಿ ಹೋಗಿದೆ. ವಿಪರೀತ ಚಳಿ ಕಾರಣಕ್ಕೆ ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಚೆರ್ನಿಹಿವ್, ಜೈಟೊಮಿರ್, ರಿವ್ನೆ, ಸುಮಿ, ಪೋಲ್ಟವಾ ಮತ್ತು ಖಾರ್ಕಿವ್ ಭಾಗದಲ್ಲಿ ಜನ ನಡುಗಿ ಹೋಗಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ಭಾಗದಲ್ಲಿ ಇದೀಗ ತಾಪಮಾನ, ಮೈನಸ್ 20 ರಿಂದ 25 ಡಿಗ್ರಿ ಸೆಲ್ಸಿಯಸ್ ತಲುಪುವ ಆತಂಕ ಆವರಿಸಿದೆ. ಹಗಲಿನ ಸಮಯದಲ್ಲೇ ಮೈನಸ್ 15 ರಿಂದ 25 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ ಕಾಣುವ ಸಾಧ್ಯತೆ ಇದೆ. ಹೀಗಾಗಿ ಮಾನವೀಯ ದೃಷ್ಟಿಯಿಂದ ಈ ಯುದ್ಧದಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಿದೆ, ಎಂಬುದು ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ.

ನಿಲ್ಲದ ದಾಳಿ & ನಲುಗಿದ ಉಕ್ರೇನ್

ಉಕ್ರೇನ್ ವಿರುದ್ಧ ರಷ್ಯಾ ಘೋರ ದಾಳಿ ನಿಲ್ಲಿಸಿಲ್ಲ, ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಉಕ್ರೇನ್ ನೆಲದಲ್ಲಿ ಭೀಕರ ಚಳಿ ಆರಂಭವಾಗಿ ಜನ ಬದುಕಲು ಆಗದ ಪರಿಸ್ಥಿತಿ ಎದುರಾಗಿದೆ. ವಿದ್ಯುತ್ ಇಲ್ಲದೇ ಜೀವನ ಮಾಡುವುದೇ ಕಷ್ಟದ ಕೆಲಸ, ಇಷ್ಟೆಲ್ಲದರ ಮಧ್ಯೆ ದಿಢೀರ್ ದಾಳಿ ಮಾಡಿರುವ ರಷ್ಯಾ ಸೇನೆ ಮತ್ತಷ್ಟು ಭಾಗದಲ್ಲಿ ವಿದ್ಯುತ್ ಕೈಕೊಡುವ ರೀತಿ ಮಾಡಿದೆ. ಉಕ್ರೇನ್ ರಾಜಧಾನಿ ಕೀವ್ ಭಾಗದಲ್ಲಿ ಸುಮಾರು 6,000 ಕಟ್ಟಡಗಳು ಹೀಟರ್ ಸಿಗದೆ ನರಳಿವೆ. ಇಷ್ಟೇ ಅಲ್ಲ ಇನ್ನೂ ಹಲವು ಸಮಸ್ಯೆ ಚಳಿಗಾಲದಲ್ಲೇ ಎದುರಾಗಿವೆ, ಹೀಗಾಗಿ ಒಂದು ವಾರ ಕದನ ವಿರಾಮಕ್ಕೆ ರಷ್ಯಾ ಒಪ್ಪಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+