ಭಾರತ & ಮೋದಿ ವಿಚಾರದಲ್ಲಿ ಯೂಟರ್ನ್ ತೆಗೆದುಕೊಂಡ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump U-turn: ಕಳೆದ ಎರಡು ತಿಂಗಳಿನಿಂದ ಭಾರತದ ವಿರುದ್ಧವಾಗಿ ಮಾತನಾಡುತ್ತಿದ್ದ ಹಾಗೂ ಭಾರತದ ಆರ್ಥಿಕತೆ ಸತ್ತು ಹೋಗಿದೆ ಎಂದು ಉಡಾಫೆಯ ಉತ್ತರ ಕೊಟ್ಟಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಯೂಟರ್ನ್ ತೆಗೆದುಕೊಳ್ಳುತ್ತಿದ್ದಾರೆ. ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ. ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ - ಅಮೆರಿಕಾ ಸಂಬಂಧದ ಕುರಿತು ಮಹತ್ವದ ಹೇಳಿಕೆಯನ್ನು ಕೊಟ್ಟಿದ್ದಾರೆ.
ನಾನು ಯಾವಾಗಲೂ ಮೋದಿ ಅವರೊಂದಿಗೆ ಸ್ನೇಹಿತನಾಗಿರುತ್ತೇನೆ, ಅವರು ಉತ್ತಮ ಪ್ರಧಾನಿ. ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ವಿಶೇಷ ಸಂಬಂಧವನ್ನು ಹೊಂದಿವೆ. ಚಿಂತಿಸಲು ಏನೂ ಇಲ್ಲ. ನಾವು ಭಾರತವನ್ನು ಕಳೆದುಕೊಂಡಿದ್ದೇವೆ ಎಂದು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ. ಈಚೆಗೆ ಭಾರತ - ರಷ್ಯಾ ಮತ್ತು ಚೀನಾದ ನಾಯಕರು ಒಂದಾಗಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಕಾರಣಕ್ಕೆ ಭಾರತವನ್ನು ನಾವು ಕಳೆದುಕೊಂಡಿರುವಂತೆ ಇದೆ ಎಂದು ಪೋಸ್ಟ್ ಮಾಡಿದ್ದರು.

ಇದೀಗ ನಾನು ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೇನೆ. ನಿಮಗೆ ತಿಳಿದಿರುವಂತೆ, ಅವರು ಎರಡು ತಿಂಗಳ ಹಿಂದೆ ಇಲ್ಲಿದ್ದರು, ನಾವು ರೋಸ್ ಗಾರ್ಡನ್‌ಗೆ ಹೋಗಿದ್ದೆವು ಎಂದಿದ್ದಾರೆ. ಚೀನಾದಿಂದ ಅಮೆರಿಕ ಮತ್ತು ರಷ್ಯಾವನ್ನು ಕಳೆದುಕೊಂಡಿದೆ ಎಂದು ಹೇಳುವ ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್‌ಗೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಭಾರತ - ರಷ್ಯಾವನ್ನು ನಾವು ಕಳೆದುಕೊಂಡಿದ್ದೇವೆ ಎಂದು ನಂಬುವುದಿಲ್ಲ ಎಂದಿದ್ದಾರೆ ಎಂದು ಎಎನ್‌ಐಗೆ ತಿಳಿಸಿದ್ದಾರೆ.
ಅಮೆರಿಕಾದ ಶ್ವೇತಭವನದಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಾರತದ ಮೇಲೆ ಅಮೆರಿಕ ವಿಧಿಸಿರುವ ಶೇಕಡಾ 50 ರಷ್ಟು ಸುಂಕದ ಬಗ್ಗೆಯೂ ಮಾತನಾಡಿದ್ದಾರೆ. ಭಾರತ ರಷ್ಯಾದಿಂದ ಇಷ್ಟೊಂದು ತೈಲವನ್ನು ಖರೀದಿಸುತ್ತಿದೆ ಎಂದು ನನಗೆ ತುಂಬಾ ನಿರಾಶೆಯಾಗಿದೆ.
ನಾನು ಅವರಿಗೆ ಅದನ್ನು ತಿಳಿಸಿದ್ದೇನೆ. ನಾವು ಭಾರತದ ಮೇಲೆ ಬಹಳ ದೊಡ್ಡ ಸುಂಕವನ್ನು ವಿಧಿಸಿದ್ದೇವೆ ಶೇ50%. ಇದು ತುಂಬಾ ಹೆಚ್ಚಿನ ಸುಂಕವಾಗಿದೆ. ನಿಮಗೆ ತಿಳಿದಿರುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೇನೆ. ಅವರು ಎರಡು ತಿಂಗಳ ಹಿಂದೆ ಇಲ್ಲಿದ್ದರು ಎಂದಿದ್ದಾರೆ.
ಟ್ರಂಪ್ ಯೂಟರ್ನ್: ಇನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆಯನ್ನು ಅವರು ಯೂರ್ಟನ್ ತೆಗೆದುಕೊಳ್ಳುತ್ತಿರುವ ಲಕ್ಷಣ ಎಂದೇ ವಿಶ್ಲೇಷಿಸಲಾಗಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಷ್ಟು ದಿನಗಳ ಕಾಲ ಭಾರತದ ಬಗ್ಗೆ ಕಟುವಾಗಿ ಟೀಕೆ ಮಾಡುತ್ತಿದ್ದರು. ಯಾವಾಗ ಭಾರತ - ರಷ್ಯಾ ಮತ್ತು ಚೀನಾ ದೇಶಗಳು ಒಂದಾಗಲು ಪ್ರಾರಂಭವಾಯಿತೋ ಆಗಲಿಂದಲೇ ಯೂರ್ಟನ್ ತೆಗೆದುಕೊಳ್ಳುತ್ತಿರುವಂತೆ ಇದೆ.












Click it and Unblock the Notifications