Donald Trump: ಉಕ್ರೇನ್ & ರಷ್ಯಾ ಯುದ್ಧಕ್ಕೆ ಕೊನೆಯ ಮೊಳೆ ಹೊಡೆಯಲು ಸಜ್ಜಾದ ಅಮೆರಿಕ, ಪುಟಿನ್ ಜೊತೆ ನೇರ ಚರ್ಚೆ!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಚರ್ಚೆಗಾಗಿ ಡೊನಾಲ್ಡ್ ಟ್ರಂಪ್ ರಾಯಭಾರಿ ಇದೀಗ ಮಾಸ್ಕೋಗೆ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ 4 ವರ್ಷ ಮುಗಿಸುವ ಹಂತಕ್ಕೆ ಬಂದಿರುವ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೃಢ ನಿಶ್ಚಯ ಮಾಡಿದ್ದು, ಹೇಗಾದರೂ ಮಾಡಿ ಕಬ್ಬಿಣ ಕಾದಿರುವಾಗಲೇ ತಟ್ಟಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದೇ ಕಾರಣಕ್ಕೆ, ರಷ್ಯಾ ತಮ್ಮ ಶತ್ರು ದೇಶವಾಗಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇರವಾಗಿಯೇ ಚರ್ಚೆ ನಡೆಸಲು ತಮ್ಮ ರಾಯಭಾರಿಯನ್ನು ಕಳಿಸಿದ್ದಾರೆ.
ಯುರೋಪ್ ಸೇರಿದಂತೆ ಇಡೀ ಜಗತ್ತಿನ ನಿದ್ದೆ ಹಾರಿ ಹೋಗುವಂತೆ ಮಾಡಿರುವ ರಷ್ಯಾ & ಉಕ್ರೇನ್ ವಾರ್ ಸೈಲೆಂಟ್ ಆಗುವ ಬದಲು, ಕ್ಷಣಕ್ಷಣಕ್ಕೂ ತಿಕ್ಕಾಟ ಹೆಚ್ಚಿಸಿಕೊಳ್ಳುತ್ತಿದೆ. ಇನ್ನೊಂದು ಕಡೆ ಈ ಯುದ್ಧ ಪರಿಣಾಮ ಆರ್ಥಿಕ ನಷ್ಟ ಕೂಡ ಹೆಚ್ಚಾಗುತ್ತಿದೆ. ಎಲ್ಲಾ ಕಾರಣಗಳನ್ನು ಅಳೆದು, ತೂಗಿ ನೋಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ನಿಲ್ಲಿಸಬೇಕೆಂಬ ದೃಢವಾದ ನಿಶ್ಚಯ ಮಾಡಿದ್ದಾರೆ. ಇದೇ ಕಾರಣಕ್ಕೆ ದಿಢೀರ್ ಅಂತಾ ಮಾಸ್ಕೋಗೆ ತೆರಳಿ ಚರ್ಚೆ ಮಾಡಲು ಮುಂದೆ ಬಂದಿದ್ದಾರೆ ಟ್ರಂಪ್ ಆಡಳಿತದ ಅಧಿಕಾರಿಗಳು. ಇದು ಯುದ್ಧ ನಿಲ್ಲುವ ಬಗ್ಗೆ ಖಚಿತ ಮುನ್ಸೂಚನೆ ನೀಡುತ್ತಿದೆ.

ಯುರೋಪ್ ರಾಷ್ಟ್ರಗಳಿಂದ ಮಹತ್ವದ ಸಭೆ
ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಯಭಾರಿ ಮಾಸ್ಕೋಗೆ ತೆರಳಿದ್ದರೆ, ಇದೇ ಸಮಯದಲ್ಲಿ ಯುರೋಪ್ ರಾಷ್ಟ್ರಗಳಿಂದ ಮಹತ್ವದ ಸಭೆ ನಡೆದಿದೆ. ರಷ್ಯಾಗೆ ಅನುಕೂಲ ಮಾಡಿಕೊಡುವಂತೆ ಇರುವ ಶಾಂತಿ ಪ್ರಸ್ತಾವನೆಯನ್ನು ಪರಿಷ್ಕರಿಸಲು ಒತ್ತಡ ಹೇರುವ ತಂತ್ರವಾಗಿ ಯುರೋಪ್ ದೇಶಗಳು ಇದೀಗ ಸಭೆ ನಡೆಸಿವೆ. ಫ್ರಾನ್ಸ್ ಇದರ ಮುಂದಾಳತ್ವ ವಹಿಸಿಕೊಂಡಿದ್ದು, ಬ್ರಿಟನ್, ಜರ್ಮನಿ, ಇಟಲಿ, ಪೋಲೆಂಡ್ ಮತ್ತು ಯುರೋಪಿಯನ್ ಒಕ್ಕೂಟದ ಇತರ ದೇಶಗಳು ಕೂಡ ಈ ತಂತ್ರಕ್ಕೆ ಕೈಜೋಡಿಸಿವೆ.
ಈ ಮೂಲಕ ರಷ್ಯಾಗೆ ಶಾಂತಿ ಮಾತುಕತೆ ವಿಚಾರ ದೊಡ್ಡ ತಲೆನೋವು ತರಿಸುವ ಮುನ್ಸೂಚನೆ ಸಿಗುತ್ತಿದೆ. ಆದರೆ ಅಮೆರಿಕ ಮಾತ್ರ ಹೇಗಾದರೂ ಮಾಡಿ ಈ ಯುದ್ಧವನ್ನ ನಿಲ್ಲಿಸಿ ಕೈತೊಳೆದುಕೊಳ್ಳಬೇಕು ಎಂಬ ತರಾತುರಿಯಲ್ಲಿ ಇದೆ. ಹಾಗೇ ಉಕ್ರೇನ್ ಕೂಡ ಹಲವು ಡಿಮ್ಯಾಂಡ್ ಮುಂದೆ ಇಡುತ್ತಿದ್ದು, ಶಾಂತಿ ಮಾತುಕತೆಗೆ ಸುಲಭವಾಗಿ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ಕ್ಷೀಣವಾಗಿದೆ. ಇದೇ ಕಾರಣಕ್ಕೆ ಅಮೆರಿಕ ಉಕ್ರೇನ್ ಮೇಲೆ ಹಲವು ರೀತಿಯ ಒತ್ತಡ ಹೇರುತ್ತಿದೆ. ಆದರೆ ಇಬ್ಬರ ನಡುವೆ ಇಂದಿಗೂ ಕೂಡ ಫೈಟಿಂಗ್ ನಿಂತಿಲ್ಲ, ಎರಡೂ ಕಡೆ ದಾಳಿ & ಪ್ರತಿದಾಳಿ ಮುಂದುವರಿದಿದೆ.
ಚಳಿಗೆ ನಲುಗಿದ ಉಕ್ರೇನ್ ನಿವಾಸಿಗಳು
ಉಕ್ರೇನ್ ದೇಶದಲ್ಲಿ ಇದೀಗ ವಿಪರೀತ ಚಳಿಗಾಲ ಆರಂಭವಾಗಿದ್ದು, ಭೀಕರ ಚಳಿ ಕಾರಣದಿಂದ ಇದೀಗ ಉಕ್ರೇನ್ ನಿವಾಸಿಗಳು ನಲುಗಿ ಹೋಗಿದ್ದಾರೆ. ಮೈಕೊರೆಯುವ ಚಳಿ ನಡುವೆ ರಷ್ಯಾ ಸೇನೆ ದಾಳಿ ಮಾಡಿ ವಿದ್ಯುತ್ ಹಾಗೂ ತೈಲ ಸರಬರಾಜು ಸಂಪರ್ಕ ಕಟ್ ಮಾಡಿದೆ. ಇದರಿಂದ ಚಳಿ ಹಾಗೂ ಶೀತ ಮಾರುತದಿಂದ ರಕ್ಷಣೆ ಪಡೆಯಲು ಉಕ್ರೇನ್ ನಿವಾಸಿಗಳು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ಕೂಡ ಪ್ರತಿದಾಳಿ ಆರಂಭ ಮಾಡುವ ಮೂಲಕ ರಷ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಿದೆ. ಈ ಮೂಲಕ ಒಂದು ಕಡೆ ಶಾಂತಿ ಮಾತುಕತೆ ಆರಂಭವಾದರೆ, ಇನ್ನೊಂದು ಕಡೆ ಬಡಿದಾಟ ಕೂಡ ಹೆಚ್ಚಾಗುತ್ತಿದೆ.












Click it and Unblock the Notifications