ಡೊನಾಲ್ಡ್ ಟ್ರಂಪ್ ಅವರ ಈ ಮಾತು ಕೇಳಿ, ಗುರೂ ನಿಂಗೆ ದೊಡ್ ನಮಸ್ಕಾರ ಅಂತಿದ್ದಾರೆ ಭಾರತೀಯರು! Donald Trump
ಡೊನಾಲ್ಡ್ ಟ್ರಂಪ್ ಅಂದ್ರೆ ತಿಕ್ಕಲು, ತಿಕ್ಕಲು ನಿರ್ಧಾರಗಳಿಗೆ ಫೇಮಸ್ ಅನ್ನೋದು ಜನರ ಆರೋಪ. ಆದರೆ ಡೊನಾಲ್ಡ್ ಟ್ರಂಪ್ ತಾವು ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾದ ಸಮಯದಲ್ಲಿ ಆಡಿದ ಆಟಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಸ್ವಲ್ಪ ಸೈಲೆಂಟ್ ಆಗಿದ್ದಾರೆ ಅಂತಾ ಕಾಲು ಎಳೆಯುವ ವಿರೋಧಿಗಳು ಕೂಡ ಇದ್ದಾರೆ. ಇಂತಹ ಸಮಯದಲ್ಲೇ ಭಾರತೀಯರಿಗೆ ಹೆಚ್ಚಾಗಿ ಸಿಗುತ್ತಾ ಇದ್ದ ಎಚ್-1ಬಿ ವೀಸಾ (H-1B Visa) ವಿಚಾರವಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ನಿರ್ಧಾರವನ್ನ ಕೈಗೊಂಡಿದ್ದರು ಡೊನಾಲ್ಡ್ ಟ್ರಂಪ್. ಆದರೆ ಈಗ ತಮ್ಮ ವರಸೆಯನ್ನೇ ಬದಲಾಯಿಸಿ, ತಮ್ಮದೇ ದೇಶದ ಜನರನ್ನು ದಡ್ಡರು ಎಂಬಂತೆ ಹೇಳಿಕೆ ನೀಡಿದ್ದಾರೆ.
ಅಂದಹಾಗೆ ಟ್ರಂಪ್ ಸರ್ಕಾರ ಅಮೆರಿಕದಲ್ಲಿ ಅಧಿಕಾರಕ್ಕೆ ಬರುತ್ತಾ ಇದ್ದಂತೆ, ಆಕ್ರಮಣಕಾರಿ ವಲಸೆ ಸುಧಾರಣಾ ಕ್ರಮಗಳು ಜಾರಿಯಾಗಿದ್ದವು. ಅದರಲ್ಲೂ ಪ್ರಮುಖವಾಗಿ ಭಾರತ ಮೂಲದ ಕೋಟಿ ಕೋಟಿ ಉದ್ಯೋಗಿಗಳ ಉದ್ಯೋಗದ ಮೇಲೂ ಟ್ರಂಪ್ ಕಣ್ಣು ಬಿದ್ದಿತ್ತು, ಅಂತಿಮವಾಗಿ ತಮ್ಮದೇ ದೇಶದಲ್ಲಿ ಭಾರಿ ವಿರೋಧ ಕೂಡ ಎದುರಿಸಿದ ಟ್ರಂಪ್ ಅವರು ಉಲ್ಟಾ ಹೊಡೆದಿದ್ದಾರೆ. ಅಲ್ಲದೆ ಅಮೆರಿಕ ಕೆಲವು ಕ್ಷೇತ್ರಗಳಿಗೆ ವಿದೇಶಿ ಪ್ರತಿಭೆಗಳ ಕರೆತಂದು, ಉದ್ಯೋಗ ನೀಡಬೇಕಿದೆ ಎಂದಿದ್ದಾರೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಮತ್ತೊಮ್ಮೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಭಾರತೀಯರು ಇಲ್ಲದೆ ಅಮೆರಿಕ ಬದುಕಲ್ಲ!
ಹೌದು, ಅಮೆರಿಕದಲ್ಲಿ ಭಾರತೀಯರು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿ ಸೆಟಲ್ ಆಗಿದ್ದಾರೆ. ಅದರಲ್ಲೂ ನಾಸಾ ಎಂಬ ಬಾಹ್ಯಾಕಾಶ ಸಂಸ್ಥೆಯಿಂದ ಹಿಡಿದು, ಗೂಗಲ್ ರೀತಿ ಟೆಕ್ ಕಂಪನಿಗಳಲ್ಲಿ ಕೂಡ ಭಾರತೀಯರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಹೀಗಿದ್ದಾಗ ಟ್ರಂಪ್ ಅವರ ಹೊಸ ನಿರ್ಧಾರಗಳು ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದವು. ಇಂತಹ ಪರಿಸ್ಥಿತಿಯಲ್ಲಿ, ಸತ್ಯದ ಅರಿವಾಗಿ ಡೊನಾಲ್ಡ್ ಟ್ರಂಪ್ ದಾರಿಗೆ ಬಂದಿದ್ದಾರೆ.
ಎಚ್-1ಬಿ ವೀಸಾ ಬೆಲೆ ಏರಿಕೆ!
ಅಮೆರಿಕ ಅಧ್ಯಕ್ಷ ಟ್ರಂಪ್ ಏನೇ ಮಾಡಿದರೂ ಅದರಲ್ಲಿ ಬ್ಯುಸಿನೆಸ್ ಹುಡುಕುತ್ತಾರೆ, ಅದರಲ್ಲೂ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಿಂದ ವಲಸೆ ಹೋಗಿ ಅಮೆರಿಕದಲ್ಲಿ ಕೆಲಸ ಮಾಡೋಕೆ ಎಚ್-1ಬಿ ವೀಸಾ ಬೇಕೆ ಬೇಕು. ಹೀಗಿದ್ದಾಗ ದಿಢೀರ್ ಅಂತಾ ಎಚ್-1ಬಿ ವೀಸಾ ಹೊಸ ಅರ್ಜಿಗೆ ಬರೋಬ್ಬರಿ 1,00,000 ಅಮೆರಿಕನ್ ಡಾಲರ್ ಅಂದ್ರೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ ಸುಮಾರು 88 ಲಕ್ಷ ರೂಪಾಯಿ ಶುಲ್ಕ ವಿಧಿಸುವ ಆದೇಶವನ್ನ ಹೊರಡಿಸಿದ್ದರು. ಇದು ಭಾರಿ ದೊಡ್ಡ ಮಟ್ಟದಲ್ಲೇ ಚರ್ಚೆಗೆ ವೇದಿಕೆ ಒದಗಿಸಿದ್ದು, ಈ ಸಮಯದಲ್ಲೇ ದಿಢೀರ್ ವಿದೇಶಿ ಕೆಲಸಗಾರರ ಮೇಲೆ ಟ್ರಂಪ್ ಮೃದು ದೋರಣೆ ತೋರಿರುವುದು ಭಾರಿ ಗಮನ ಸೆಳೆದಿದೆ.












Click it and Unblock the Notifications