ಡೊನಾಲ್ಡ್ ಟ್ರಂಪ್ ಚಳಿ ಬಿಡಿಸಿದ ಭಾರತ ಮೂಲದ ಕಮಲಾ ಹ್ಯಾರಿಸ್!
ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್‌ರ ನಡುವೆ ನಡೆದ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಖಾಮುಖಿ ಚರ್ಚೆ ಜಗತ್ತಿನ ಗಮನ ಸೆಳೆದಿದೆ. ಇದರ ಜೊತೆಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲೇ ಈ ಚರ್ಚೆಯು ಹೊಸ ದಾಖಲೆ ಸೃಷ್ಟಿ ಮಾಡಿದೆ. ಹಾಗಾದ್ರೆ ಹೇಗಿತ್ತು ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಡುವೆ ನಡೆದ ಮಹತ್ವದ ಮುಖಾಮುಖಿ ಚರ್ಚೆ? ಡೊನಾಲ್ಡ್ ಟ್ರಂಪ್ ವಿರುದ್ಧ ಭಾರತದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಯಾವೆಲ್ಲಾ ಅಂಶ ಪ್ರಸ್ತಾಪ ಮಾಡಿದರು? ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ.
ಹೌದು, ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಡುವೆ ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಗ್ಗೆ ಚರ್ಚೆ ಆರಂಭ ಆಗಿದೆ ಎಂಬ ಸುದ್ದಿ ಇಡೀ ಜಗತ್ತಿನ ತುಂಬಾ ಬಿರುಗಾಳಿ ರೀತಿ ಹಬ್ಬಿತ್ತು. ಏಕೆಂದರೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅನ್ನೋದು ಪ್ರಪಂಚದ ಪ್ರತಿ ದೇಶಕ್ಕೂ ಅತ್ಯಗತ್ಯ & ಪ್ರಮುಖ. ಅದರಲ್ಲೂ ಸಂಪ್ರದಾಯದ ಪ್ರಕಾರ ಪ್ರತಿ ಬಾರಿ ಅಮೆರಿಕ ಅಧ್ಯಕ್ಷೀಯ ಎಲೆಕ್ಷನ್ ನಡೆಯುವ ಸಮಯದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗಾಗಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಮುಖಾಮುಖಿ ನಿಂತು ಚರ್ಚೆ ನಡೆಸುತ್ತಾರೆ. ಈ ವೇಳೆ ದೊಡ್ಡ ಕಿತ್ತಾಟ ನಡೆಯುತ್ತದೆ. ಹಾಗಿದ್ರೆ ಈ ಬಾರಿ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಈ ಒತ್ತಡವನ್ನು ಹೇಗೆ ನಿಭಾಯಿಸಿದರು? ಮುಂದೆ ಓದಿ.

ಕಮಲಾ ಹ್ಯಾರಿಸ್ ಮಾತಿಗೆ ಚಪ್ಪಾಳೆ!
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರ ಹವಾ ಹೇಗಿದೆ ಅಂದರೆ ಈಗಿನ ಪರಿಸ್ಥಿತಿಯಲ್ಲಿ ಕಮಲಾ ಹ್ಯಾರಿಸ್ ಪಕ್ಕಾ ಗೆದ್ದು ಬೀಗಲಿದ್ದಾರೆ. ಯಾಕಂದ್ರೆ ಕಮಲಾ ಹ್ಯಾರಿಸ್ ಪರವಾಗಿ ಕೋಟಿ ಕೋಟಿ ಅಮೆರಿಕದ ಮತದಾರರು ಬೆಂಬಲ ವ್ಯಕ್ತಪಡಿಸಿ, ಬೆನ್ನಿಗೆ ನಿಂತಿದ್ದಾರೆ. ಅದರಲ್ಲೂ ಇಂದು ಡೊನಾಲ್ಡ್ ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ಪ್ರಸ್ತಾಪ ಮಾಡಿದ ಅಂಶಗಳು ಈಗ ಅಮೆರಿಕ ಮತದಾರರಿಗೆ ಸಿಕ್ಕಾಪಟ್ಟೆ ಇಷ್ಟವಾಗಿವೆ. ಈ ಮೂಲಕ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಕ್ಷಣಕ್ಕೆ ಮತ್ತಷ್ಟು ಹತ್ತಿರವಾಗಿ ನಿಂತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಡೊನಾಲ್ಡ್ ಟ್ರಂಪ್‌ಗೆ ನಿರಾಸೆ ಪಕ್ಕಾ?
ಅಮೆರಿಕದ ಮಾಜಿ ಅಧ್ಯಕ್ಷರೂ ಆದ ಡೊನಾಲ್ಡ್ ಟ್ರಂಪ್‌ಗೆ ಭಾರಿ ಆಘಾತ ಎದುರಾಗುತ್ತಿದೆ. ಯಾಕಂದ್ರೆ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಕಮಲಾ ಹ್ಯಾರಿಸ್ ಪರವಾಗಿ ಬೆಂಬಲ ಹೆಚ್ಚಾಗಿ ಸಿಗುತ್ತಿದೆ. ಅದರಲ್ಲೂ ಅಮೆರಿಕದ ಯುವ ಮತದಾರರು ಅಧ್ಯಕ್ಷೀಯ ಚುನಾವಣೆ ಗೆಲುವಿನ ಮೇಲೆ ಅಂತಿಮ ಪ್ರಭಾವ ಬೀರುವ ಶಕ್ತಿಯನ್ನ ಹೊಂದಿದ್ದು, ಈಗಿನ ಪರಿಸ್ಥಿತಿ ನೋಡಿದರೆ ಕಮಲಾ ಹ್ಯಾರಿಸ್ ಭರ್ಜರಿ ಗೆಲುವು ಸಾಧಿಸುವುದು ಗ್ಯಾರಂಟಿ ಎಂಬ ಮಾತು ಕೇಳಿಬಂದಿವೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಕಮಲಾ ಹ್ಯಾರಿಸ್ ಇಂದು ಡೊನಾಲ್ಡ್ ಟ್ರಂಪ್ ವಿರುದ್ಧ ಹರಿಹಾಯ್ದರು, ತಮ್ಮ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಟ್ರಂಪ್‌ಗೆ ಮೌಲ್ಯದ ಪಾಠ ಮಾಡಿದರು ಕಮಲಾ ಹ್ಯಾರಿಸ್.












Click it and Unblock the Notifications