Viral Video: ಡೊನಾಲ್ಡ್ ಟ್ರಂಪ್ & ಎಲಾನ್ ಮಸ್ಕ್ ಸಭೆ: ಮಸ್ಕ್ ಭುಜದ ಮೇಲೆ ಕುಣಿದಾಡಿದ ಪುತ್ರ!
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಬಿಲೇನಿಯರ್ ಎಲಾನ್ ಮಸ್ಕ್ ಅವರು ಸ್ನೇಹ ಹಾಗೂ ಬಾಂಧವ್ಯದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಮೆರಿಕ ಅಧ್ಯಕ್ಷರ ಚುನಾವಣೆಯ ನಡೆಯುವ ಸಂದರ್ಭದಲ್ಲಿಯೇ ಎಲಾನ್ ಮಸ್ಕ್ ಅವರು ಸಾಕಷ್ಟು ಚುನಾವಣೆ ಪ್ರಚಾರವನ್ನು ಮಾಡಿದ್ದರು. ಇದೀಗ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್ ಮತ್ತು ಮಸ್ಕ್ ಸಣ್ಣ ಪುತ್ರನ ತುಂಟಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಮೊದಲ ಬಾರಿಗೆ ಮಸ್ಕ್ ಅವರು ಅವರ ಪುತ್ರನನ್ನು ಅಮೆರಿಕದ ಶ್ವೇತಭವನಕ್ಕೆ ಕರೆದುಕೊಂಡು ಬಂದಿದ್ದಾರೆ.
ಎಲಾನ್ ಮಸ್ಕ್ ಅವರು ಈಚೆಗೆ ಅವರ ಕಿರಿಯ ಮಗ ಎಕ್ಸ್ (X Æ A-Xii) ಎನ್ನುವವರನ್ನು ಶ್ವೇತಭವನಕ್ಕೆ ಕರೆದುಕೊಂಡು ಹೋಗಿದ್ದಾರೆ. ಪುಟಾಣಿ ಪೋರ ಮಸ್ಕ್ ಭುಜದ ಮೇಲೆ ಕುಳಿತು ಕುಣಿಯುತ್ತಿರುವುದು ಹಾಗೂ ಮುಗ್ಧವಾಗಿ ಕುಳಿತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳು ನೋಡುವುದಕ್ಕೆ ಚಂದ ಎನಿಸಿದರೂ, ಶ್ವೇತಭವನವನ್ನು ಯಾವ ರೀತಿ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ.

ಮಸ್ಕ್ ಅನುಸರಿಸಿದ ಪುತ್ರ: ಅಮೆರಿಕ ವೈಟ್‌ಹೌಸ್‌ನಲ್ಲಿ ಪ್ರಮುಖ ಪತ್ರಿಕಾಗೋಷ್ಠಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಅವರು ನಡೆಸುತ್ತಿದ್ದರು. ಆ ನಾಲ್ಕು ವರ್ಷದ ಮಸ್ಕ್ ಪುತ್ರ ವೈಟ್‌ಹೌಸ್ ಸುತ್ತುತ್ತಿರುವುದು. ನಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಪತ್ರಿಕಾಗೋಷ್ಠಿ ನಡೆಯುವಾಗ ಮಸ್ಕ್ ಅವರ ಪುತ್ರ ಮಸ್ಕ್ ಅವರ ರೀತಿಯೇ ಅಭಿನಯಿಸಿರುವುದು ಸಹ ಇದೆ. ಇದನ್ನು ನೋಡಿ ಅರೆಕ್ಷಣ ಡೊನಾಲ್ಡ್ ಟ್ರಂಪ್ ಅವರು ಸಹ ನಕ್ಕಿದ್ದಾರೆ. ಕೂಡಲೇ ಕ್ಷಮಿಸಿ ಎಂದು ಅದನ್ನು ಸರಿಪಡಿಸಿಕೊಂಡಿದ್ದಾರೆ. ಆ ಪುಟ್ಟ ಮಗುವಿನ ತಮಾಷೆ ನನಗೆ ನಗು ಬರುವಂತೆ ಮಾಡಿತು ಅಂತ ಟ್ರಂಪ್ ಅವರು ಹೇಳಿದ್ದಾರೆ.
ಆಡಳಿತದಲ್ಲಿ ಮಸ್ಕ್‌ಗೆ ಮಹತ್ವದ ಜವಾಬ್ದಾರಿ: ಇನ್ನು ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ / ಆಡಳಿತದ ಕೆಲವು ನಿರ್ದಿಷ್ಟ ವಿಷಯದಲ್ಲಿ ಎಲಾನ್ ಮಸ್ಕ್‌ಗೆ ಮಹತ್ವದ ಜವಾಬ್ದಾರಿಯೊಂದನ್ನು ಕೊಡಲಾಗಿದೆ. ಎಲಾನ್ ಮಸ್ಕ್ ಅವರು ಟ್ವೀಟರ್ ಖರೀದಿ ಮಾಡಿದ ಮೇಲೆ ಅವರು ಅಲ್ಲಿನ ಉದ್ಯೋಗಿಗಳನ್ನು ಯಾವ ರೀತಿ ನಡೆಸಿಕೊಂಡರು ಎನ್ನುವ ಬಗ್ಗೆ ಚರ್ಚೆಗಳು ನಡೆದಿದ್ದವು. ಅತ್ಯಂತ ಕಠಿಣ ನಿಯಮಗಳನ್ನು ರೂಪಿಸಿದ್ದು, ಆಡಳಿತದಲ್ಲಿ ಬದಲಾವಣೆ ತಂದಿದ್ದರು. ಇದೀಗ ಅವರಿಗೆ ಅಮೆರಿಕದ ಆಡಳಿತದಲ್ಲಿ ಮಹತ್ವದ ಜವಾಬ್ದಾರಿಯೊಂದನ್ನು ಕೊಡಲಾಗಿದೆ.
ಅಮೆರಿಕದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಡೊನಾಲ್ಡ್ ಟ್ರಂಪ್ ಅವರು ಹಲವು ಆಡಳಿತ ಸುಧಾರಣೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಟ್ರಂಪ್ ಅವರ ಆತ್ಮೀಯ ಹಾಗೂ ಅಮೆರಿಕದ ಬಿಲೇನಿಯರ್ ಉದ್ಯಮಿ ಎಲಾನ್ ಮಸ್ಕ್ ಅವರಿಗೆ ಅಲ್ಲಿನ ಸರ್ಕಾರಿ ಆಡಳಿತ ದಕ್ಷತೆ ಇಲಾಖೆ ಹೊಣೆಗಾರಿಕೆಯಂತಹ ಪ್ರಮುಖ ಜವಾಬ್ದಾರಿಯನ್ನು ಕೊಡಲಾಗಿದೆ.
ಎಲಾನ್ ಮಸ್ಕ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಗಿಂತ ಮುಂಚಿನಿಂದಲೂ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.












Click it and Unblock the Notifications