ಖಲಿಸ್ತಾನಿ ಗ್ಯಾಂಗ್‌ಗೆ ಬೆಂಬಲ ಆರೋಪ, ಗಾಯಕನಿಗೆ ಶಾಕ್ ಮೇಲೆ ಶಾಕ್!

ಕೆನಡಾ ಪ್ರಧಾನಿ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡಿದ ಬಳಿಕ ಎರಡು ದೇಶದ ಸಂಬಂಧ ಹಳಸಿದೆ. ಅದರಲ್ಲೂ ಭಾರತದಿಂದ ಕೆನಡಾ ಅಧಿಕಾರಿಗಳನ್ನು & ಕೆನಡಾದಿಂದ ಭಾರತದ ಅಧಿಕಾರಿಗಳನ್ನು ಪರಸ್ಪರ ಉಚ್ಛಾಟನೆ ಮಾಡಲಾಗಿದೆ. ಹೀಗೆ ಪರಿಸ್ಥಿತಿ ಕೈಮೀರಿ ಹೋಗಿರುವಾಗ, ಖಲಿಸ್ತಾನಿಗಳಿಗೆ ಬೆಂಬಲ ನೀಡಿದ್ದ ಆರೋಪ ಹಿನ್ನೆಲೆ ಕೆನಡಾ ಮೂಲದ ಪಂಜಾಬಿ ಗಾಯಕನಿಗೂ ಶಾಕ್ ಕೊಟ್ಟಿದ್ದಾರೆ ಭಾರತೀಯರು.

ಅಷ್ಟಕ್ಕೂ ಭಾರತದ ವಿವಾದಾತ್ಮಕ ನಕ್ಷೆಯನ್ನು ಕೆನಡಾ ಮೂಲದ ಪಂಜಾಬಿ ಗಾಯಕ ಶುಭ್ ಶೇರ್ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಮ್ಯಾಪ್‌ನಲ್ಲಿ ಜಮ್ಮು & ಕಾಶ್ಮೀರ ಸೇರಿ ಈಶಾನ್ಯ ರಾಜ್ಯಗಳು ಇರಲಿಲ್ಲ. ಹಾಗೇ ಪಂಜಾಬ್ ರಾಜ್ಯ ಭೂಭಾಗ ಕೂಡ ಕಪ್ಪು ಬಣ್ಣದಲ್ಲಿ ಚಿತ್ರಿಸಲಾಗಿದ್ದ ಮ್ಯಾಪ್ ಅನ್ನ ಸಿಂಗರ್ ಶುಭ್‌ ಶೇರ್ ಮಾಡಿದ್ದರು ಎನ್ನಲಾಗಿದೆ. ಪಂಜಾಬಿ ಗಾಯಕ ಶುಭನೀತ್‌ ಸಿಂಗ್‌ ಅಲಿಯಾಸ್ ಶುಭ್ ಸಾಮಾಜಿಕ ಜಾಲತಾಣದಲ್ಲಿ ಇಂತಹ ಕೆಲಸ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಹೀಗೆ ಮಾಡಿದ್ದ ತಪ್ಪಿಗೆ ಶುಭ್‌ಗೆ ಶಾಕ್ ಸಿಕ್ಕಿದೆ. ಭಾರತದ ಪ್ರವಾಸವನ್ನೇ ರದ್ದು ಮಾಡಿ ಓಡಿ ಹೋಗುವ ಪರಿಸ್ಥಿತಿ ಬಂದಿದೆ.

punjabi-singer-shubhneet-singh

ಕಾರ್ಯಕ್ರಮ ಕೂಡ ಕ್ಯಾನ್ಸಲ್

ಕೆನಡಾದಲ್ಲಿ ಪಂಜಾಬಿ ಗಾಯನದ ಮೂಲಕ ಹೆಸರು ಮಾಡಿದ್ದ ಸಿಂಗರ್ ಶುಭನೀತ್‌ ಸಿಂಗ್‌ ಭಾರತದಲ್ಲಿ ಷೋ ಮಾಡಲು ಸಿದ್ಧವಾಗಿದ್ದ. ಆದರೆ ಭಾರತೀಯರು ಶುಭ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿ ವಿರೋಧ ವ್ಯಕ್ತಪಡಿಸಿದ್ದರು. ಶುಭನೀತ್ ಸಿಂಗ್‌ ಖಾಲಿಸ್ತಾನಿ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಬುಕ್‌ ಮೈ ಷೋ ವಿರುದ್ಧವೇ ಗರಂ ಆಗಿದ್ದರು. ಇದೀಗ ಖುದ್ದು ಬುಕ್ ಮೈ ಷೋ ಕೂಡ ಶುಭ್‌ಗೆ ಶಾಕ್ ಕೊಟ್ಟಿದೆ.

ಖಲಿಸ್ತಾನಿ ಪರ ಮಾತನಾಡಿದ್ದಕ್ಕೆ ಶಾಕ್!

ಬಾಯ್ಕಾಟ್‌ ಕೂಗು ಬೆನ್ನಲ್ಲೇ ಶುಭ್ ಕಾರ್ಯಕ್ರಮ ಕ್ಯಾನ್ಸಲ್ ಮಾಡಿರುವ 'ಬುಕ್‌ ಮೈ ಷೋ', 7-10 ದಿನಗಳಲ್ಲಿ ಟಿಕೆಟ್‌ ಮೊತ್ತ ಸಂಪೂರ್ಣ ಮರುಪಾವತಿ ಮಾಡುವುದಾಗಿ ತಿಳಿಸಿದೆ. ಹೀಗೆ ಭಾರತೀಯರು ಖಲಿಸ್ತಾನಿ ಬೆಂಬಲಿಗರ ವಿರುದ್ಧ ತಿರುಗಿಬಿದ್ದಿದ್ದು ಗಾಯಕ ಶುಭನೀತ್ ಸಿಂಗ್‌ ಕೂಡ ಭಾರತದ ಪ್ರವಾಸ ರದ್ದು ಮಾಡಿದ್ದಾರೆ. ಭಾರತೀಯರ ಕೋಪ ಅರ್ಥಮಾಡಿಕೊಂಡ 'ಬುಕ್‌ ಮೈ ಷೋ' ಕೂಡ ಶುಭನೀತ್ ಸಿಂಗ್‌ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದೆ.

ಒಟ್ನಲ್ಲಿ ಕೆನಡಾ ಪ್ರಧಾನಿ ಟ್ರುಡೋ ಮಾತಿನಿಂದ ಭಾರತ ಮತ್ತು ಕೆನಡಾ ಸಂಬಂಧಕ್ಕೀಗ ಕಿಚ್ಚು ಹೊತ್ತಿಕೊಂಡಿದೆ. ಎರಡೂ ಕಡೆ ಕಿತ್ತಾಟವೂ ನಡೆಯುತ್ತಿದೆ. ಅದರಲ್ಲೂ ಖಲಿಸ್ತಾನಿ ಪರ ಧ್ವನಿ ಎತ್ತಿರುವ ಖಲಿಸ್ತಾನಿ ಬೆಂಬಲಿಗರ ವಿರುದ್ಧ ಭಾರತೀಯರು ತೀವ್ರ ಆಕ್ರೋಶವನ್ನ ಕೂಡ ಹೊರಹಾಕುತ್ತಿದ್ದಾರೆ. ಹೀಗಾಗಿ ಈ ಕಿತ್ತಾಟ ಮತ್ತಷ್ಟು ದೊಡ್ಡ ಹಂತಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+