Canada & India: ಭಾರತದ ವಿರುದ್ಧ ಕೆನಡಾದಲ್ಲಿ ಖಲಿಸ್ತಾನ್ ಕುತಂತ್ರ?

ಭಾರತ ಇಡೀ ಜಗತ್ತಿಗೇ ಬೇಕಾದ ದೇಶ, ಅದರಲ್ಲೂ ರಷ್ಯಾ & ಉಕ್ರೇನ್ ನಡುವೆ ಯುದ್ಧದ ಭೀಕರತೆ ಮೊಳಗುವಾಗ ಭಾರತಕ್ಕೆ ಭಾರಿ ಬೇಡಿಕೆ. ಹೀಗಿದ್ದಾಗ ಪಾಶ್ಚಿಮಾತ್ಯ ದೇಶಗಳಿಗೂ, ರಷ್ಯಾಗೂ ಭಾರತ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಹೊತ್ತಲ್ಲಿ ಭಾರತ & ಕೆನಡಾ ಮಧ್ಯೆ ಕಿಚ್ಚು ಹೊತ್ತಿಕೊಂಡಿದೆ. 'ಖಲಿಸ್ತಾನ್' ವಿಷಯಕ್ಕೆ ದಿಢೀರ್ ಭಾರತದ ವಿರುದ್ಧವೇ ಕೆನಡಾ ರೊಚ್ಚಿಗೆದ್ದಿದೆ.

ಒಂದೇ ತಟ್ಟೆಯಲ್ಲಿ ಅನ್ನ ತಿಂದು ದ್ರೋಹ ಬಗೆಯೋದನ್ನ 'ಖಲಿಸ್ತಾನ್'ಗಳ ಮೂಲಕವೇ ಕಲಿಯಬೇಕು. ಯಾಕಂದ್ರೆ ಭಾರತದ ಬಹುಮುಖ್ಯ ಪ್ರದೇಶ ಪಂಜಾಬ್ ರಾಜ್ಯಕ್ಕೆ ಪ್ರತ್ಯೇಕ ದೇಶದ ಸ್ಥಾನಮಾನ ನೀಡಿ ಎಂಬುದು 'ಖಲಿಸ್ತಾನ್' ಗ್ಯಾಂಗ್ ಒತ್ತಾಯ. ಆದ್ರೆ ಹೀಗೆ ದೇಶ ಛಿದ್ರ ಮಾಡುವವರನ್ನ ಸುಮ್ಮನೆ ಬಿಡಲು ಆಗುವುದಿಲ್ಲ ಅಲ್ವಾ? ಈ ಕಾರಣಕ್ಕೆ 1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ 'ಆಪರೇಷನ್ ಬ್ಲೂಸ್ಟಾರ್' ನಡೆಸಿ ಖಲಿಸ್ತಾನಿ ಗ್ಯಾಂಗ್‌ಗೆ ಖೆಡ್ಡಾ ತೋಡಿದ್ದರು. ಈ ಕಾರಣಕ್ಕೆ ಇಂದಿರಾ ಗಾಂಧಿ ಅವರನ್ನೇ ಹತ್ಯೆ ಮಾಡಿ ಖಲಿಸ್ತಾನಿ ಗ್ಯಾಂಗ್ ಅಟ್ಟಹಾಸ ಮೆರೆದಿತ್ತು. ಈಗ ಮತ್ತೊಮ್ಮೆ ಖಲಿಸ್ತಾನಿಗಳು ಬಾಲ ಬಿಚ್ಚಿದ್ದಾರೆ.

Discover why Khalistan matter sparks between India & Canada

ಕೆನಡಾದಲ್ಲಿ ಖಲಿಸ್ತಾನ್ ಕುತಂತ್ರ?

ಭಾರತ ಎಲ್ಲಾ ದೇಶಗಳ ಜೊತೆಗು ಅತ್ಯುತ್ತಮ ಸಂಬಂಧ ಕಾಪಾಡಿಕೊಂಡು ಬರುತ್ತಿದೆ. ಈ ಮಧ್ಯೆ ಕೆನಡಾ ಜೊತೆ ಮಾತ್ರ ಭಾರತದ ಸಂಬಂಧ ಹಾಳಾಗಿ ಹೋಗುತ್ತಿದೆ. ಈ ಬೆಳವಣಿಗೆ ಹಿಂದೆ ಇರೋದು ಬೇರೆ ಯಾರೂ ಅಲ್ಲ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗು ಕಾರಣವಾಗಿದ್ದ ಖಲಿಸ್ತಾನಿಗಳು. ಇತ್ತೀಚೆಗೆ ಇಂದಿರಾ ಗಾಂಧಿಯವರ ಹತ್ಯೆ ಬಗ್ಗೆ ಟ್ಯಾಬ್ಲೋ ಮಾಡಿ ಮೆರವಣಿಗೆ ಮಾಡಿದ್ದರು ಈ ಕಿರಾತಕರು. ಈಗ ನೋಡಿದ್ರೆ ಕೆನಡಾ ಮತ್ತು ಭಾರತ ಸಂಬಂಧಕ್ಕೆ ಬೆಂಕಿ ಹಚ್ಚಿದ್ದಾರೆ.

ಹೌದು, ಖಲಿಸ್ತಾನಿ ಗ್ಯಾಂಗ್‌ನ ಕುತಂತ್ರದ ಪರಿಣಾಮ ಇದೀಗ ಭಾರತ & ಕೆನಡಾ ಸಂಬಂಧ ಸಂಪೂರ್ಣ ಹಾಳಾಗುವ ಹಂತ ತಲುಪಿದೆ. ಇದಕ್ಕೆ ಖಲಿಸ್ತಾನ್ ಕುತಂತ್ರವೇ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಇದು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಕೂಡ ಭಾರತದ ವಿರುದ್ಧವೇ ಧ್ವನಿ ಎತ್ತಿದ್ದಾರೆ. ಮತ್ತೊಂದು ಆಯಾಮದಲ್ಲಿ ಈ ಬೆಳವಣಿಗೆ ನೋಡುವುದಾದ್ರೆ, ಖಲಿಸ್ತಾನಿಗಳ ಪ್ರಾಬಲ್ಯ ಕೆನಡಾದಲ್ಲಿ ಹೆಚ್ಚಾಗಿರುವ ಕಾರಣ ಟ್ರುಡೋ ಹೀಗೆ ನಡೆದುಕೊಂಡಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಕೆನಡಾ ಮಾಡಿದ ಆರೋಪ ಏನು?

ಇತ್ತೀಚೆಗೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಲಾಗಿತ್ತು. ಇದರ ಹಿಂದೆ ಭಾರತದ ಕೈವಾಡ ಇದೆ ಎಂದು ಸೋಮವಾರ ಕೆನಡಾದ ಸಂಸತ್‌ನಲ್ಲಿ ಟ್ರುಡೋ ಆರೋಪ ಮಾಡಿದ್ದಾರೆ. ಕೆನಡಾ ಸಂಸತ್‌ನಲ್ಲಿ ವಿರೋಧ ಪಕ್ಷಗಳ ತುರ್ತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ಟ್ರುಡೋ, ಭಾರತದ ಏಜೆಂಟ್‌ಗಳು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ನೇರವಾಗಿ ಭಾರತ ಮತ್ತು ಕೆನಡಾದ ಸಂಬಂಧಕ್ಕೆ ಈ ಆರೋಪ ಕೊಳ್ಳಿ ಇಟ್ಟಂತಾಗಿದೆ.

Discover why Khalistan matter sparks between India & Canada

ಕೆನಡಾ ಪ್ರಧಾನಿ ಟ್ರುಡೋ ನೀಡಿದ ಈ ಹೇಳಿಕೆ ಬಳಿಕ ಒಟ್ಟಾವದ ನವದೆಹಲಿಯ ಗುಪ್ತಚರ ಮುಖ್ಯಸ್ಥರ ಉಚ್ಛಾಟನೆ ಆಗಿದೆ. ಕೆನಡಾ ವಿದೇಶಾಂಗ ಸಚಿವರಿಂದ ಭಾರತದ ಅಧಿಕಾರಿಯ ಉಚ್ಛಾಟನೆ ಬಗ್ಗೆ ಘೋಷಣೆ ಮೊಳಗಿದೆ. ಈ ಮೂಲಕ ಭಾರತ, ಕೆನಡಾ ಸಂಬಂಧ ಕೂಡ ಹಾಳಾಗಿ ಹೋಗಿದೆ. ಭಾರತದ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದ ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಈ ವರ್ಷದ ಜೂನ್‌ನಲ್ಲಿ ಕೆನಡಾದ ಸರ್ರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಿಂಸಾಚಾರ, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪವೂ ನಿಜ್ಜರ್ ವಿರುದ್ಧ ಇತ್ತು.

ಹಲವು ದೇಶಗಳಲ್ಲಿ ಖಲಿಸ್ತಾನಿ ಗ್ಯಾಂಗ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿರುವ ಖಲಿಸ್ತಾನಿ ಗ್ಯಾಂಗ್ ಭಾರತದ ವಿರುದ್ಧ ಷಡ್ಯಂತ್ರ ಮಾಡಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯರ ಮೇಲೆ ಮತ್ತು ಭಾರತೀಯರ ಕಟ್ಟಡಗಳ ಮೇಲೆ ಪದೇ ಪದೆ ದಾಳಿಗಳು ನಡೆದಿವೆ. ಆದ್ರೆ ಈಗ ನೇರ ಕೆನಡಾ & ಭಾರತ ನಡುವೆ ತಿಕ್ಕಾಟ ಶುರುವಾಗಿದೆ. ಅಮೆರಿಕ ಸೇರಿ ಕೆನಡಾ ಬಹುಭಾಗದಲ್ಲಿ ಖಲಿಸ್ತಾನಿಗಳು ವಾಸವಿದ್ದು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದ ಹಲವು ಪ್ರಾಂತ್ಯದಲ್ಲೂ ಖಲಿಸ್ತಾನಿ ಬೆಂಬಲಿಗರು ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ಆರೋಪವಿದೆ. ಈ ಎಲ್ಲಾ ವಿದ್ಯಮಾನಗಳು ಭಾರತದ ಭದ್ರತೆಗೆ ನೇರ ಸವಾಲು ಹಾಕಿದಂತಿದೆ.

ಒಟ್ನಲ್ಲಿ ಭಾರತದ ರಾಯಭಾರ ಕಚೇರಿಗಳು, ಧಾರ್ಮಿಕ ಕೇಂದ್ರಗಳನ್ನೇ ಟಾಗ್ರೆಟ್ ಮಾಡಿ ಅಟ್ಟಹಾಸ ಮೆರೆಯುತ್ತಿರುವ ಖಲಿಸ್ತಾನಿಗಳು ಎರಡು ದೇಶದ ಸಂಬಂಧವೇ ಹಾಳಾಗುವಂತೆ ಮಾಡಿದ್ದಾರೆ. ಇನ್ನು ಭಾರತ ಕೂಡ ಈ ವಿಚಾರದಲ್ಲಿ ಎಚ್ಚರಿಕೆ ನಡೆ ಇಡುತ್ತಿದೆ. ಹಾಗೇ ಇದು ಸೂಕ್ಷ್ಮ ವಿಚಾರ ಆಗಿರುವ ಕಾರಣ, ಕೆನಡಾ ಜೊತೆಗಿನ ಸಂಬಂಧ ಹಾಳಾಗದ ರೀತಿ ಕ್ರಮ ಕೈಗೊಳ್ಳುತ್ತಿದೆ. ಹಾಗೇ ಖಲಿಸ್ತಾನಿಗಳ ಉಪಟಳಕ್ಕೆ ಬ್ರೇಕ್ ಹಾಕಿ ಎಂದು ಮತ್ತೊಮ್ಮೆ ಕೆನಡಾ ಸರ್ಕಾರಕ್ಕೆ ಭಾರತ ಸರ್ಕಾರ ಆಗ್ರಹ ಮಾಡುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+