ಕುಸಿಯುತ್ತಿದೆ ಜನಸಂಖ್ಯೆ, ಮಹಿಳೆಯರಲ್ಲಿ ಮಕ್ಕಳನ್ನು ಹೆರುವ ಸಾಮರ್ಥ್ಯದಲ್ಲೇ ಕೊರತೆ?
ಭಾರತ ದೇಶದಲ್ಲಿ ಜನಸಂಖ್ಯೆ ಒಂದು ಶಾಪವಾಗಿ ಪರಿಣಮಿಸಿದೆ. ಈ ಪೈಕಿ ಉತ್ತರ ಭಾರತ ಜನಸಂಖ್ಯೆ ಸ್ಫೋಟದಲ್ಲಿ ಮುಂದೆ ಇದ್ದು, ದೊಡ್ಡ ಸಮಸ್ಯೆ ಆಗುತ್ತಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರಗಳು ಕೂಡ ಸಾಕಷ್ಟು ಕ್ರಮ ಕೈಗೊಳ್ಳುತ್ತಿವೆ. ಆದರೂ ಪ್ರಯೋಜನ ಆಗುತ್ತಿಲ್ಲ. ಆದರೆ ಇಲ್ಲೊಂದು ದೇಶದಲ್ಲಿ ಮಾತ್ರ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಸರ್ಕಾರ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ!
ನಿಮಗೆಲ್ಲಾ ಗೊತ್ತಿರುವ ರೀತಿ ಏಷ್ಯಾ ಮತ್ತು ಆಫ್ರಿಕಾ ದೇಶಗಳು ಜನಸಂಖ್ಯೆ ಸ್ಫೋಟದಿಂದ ನರಳಿ ಹೋಗಿವೆ. ಹೀಗಿದ್ದಾಗ ಇಲ್ಲೊಂದು ದೇಶದಲ್ಲಿ ಮಾತ್ರ ಜನಸಂಖ್ಯೆ ಭಾರಿ ಕುಸಿತವನ್ನ ಕಾಣ್ತಾನೆ ಇದೆ. ಈ ರೀತಿಯಾಗಿ ಜನಸಂಖ್ಯೆ ಕುಸಿತದ ಪರಿಣಾಮಕ್ಕೆ ಸಿಲುಕಿ ನಲುಗಿದ ದೇಶ ಬೇರೆ ಯಾವುದೂ ಅಲ್ಲ, ಅಮೆರಿಕದ ಆಪ್ತಮಿತ್ರ ದಕ್ಷಿಣ ಕೊರಿಯಾ. ಹೌದು, ಕೊರಿಯಾ ದೇಶಗಳ ಪೈಕಿ ಒಂದಾದ ದಕ್ಷಿಣ ಕೊರಿಯಾ ಜನಸಂಖ್ಯೆ ವಿಚಾರದಲ್ಲಿ ಭಾರಿ ಹಿಂದುಳಿದು ನರಳಾಡುತ್ತಿದೆ. ಅಲ್ಲಿನ ಮಹಿಳೆಯರಲ್ಲಿ ಮಕ್ಕಳನ್ನು ಹೆರುವ ಸಾಮರ್ಥ್ಯದಲ್ಲಿ, ಕುಸಿತ ಕೂಡ ದಾಖಲಾಗುತ್ತಿದೆ.

ದಕ್ಷಿಣ ಕೊರಿಯಾದಲ್ಲಿ ಮನುಷ್ಯರು ಖಾಲಿ?
ಹೌದು, ಹೀಗಿರುವ ಪರಿಸ್ಥಿತಿ ಮುಂದುವರಿದರೆ ಇನ್ನು ಕೆಲವೇ ವರ್ಷದಲ್ಲಿ ದಕ್ಷಿಣ ಕೊರಿಯಾ ತನ್ನ ಮಾನವ ಸಂತತಿ ನಾಶದಿಂದ ನರಳುವ ಪರಿಸ್ಥಿತಿ ಬರಲಿದೆ. ದಕ್ಷಿಣ ಕೊರಿಯಾ ಸರ್ಕಾರ ನೀಡಿರುವ ಅಂಕಿ-ಅಂಶ ಹೇಳುವಂತೆ, ಒಟ್ಟು ಜನನ ದರ, ಮಹಿಳೆಯ ಜೀವಿತ ಅವಧಿಯಲ್ಲಿ ಭಾರಿ ಕುಸಿತ ದಾಖಲಾಗಿದೆ. ಜನನ ಪ್ರಮಾಣವು 2022 ರಲ್ಲಿ 0.78 ರಿಂದ 2025 ರಲ್ಲಿ 0.65 ಕ್ಕೆ ಕುಸಿದು ಬೀಳುವ ಆತಂಕ ಎದುರಾಗಿದೆ. ಅಲ್ಲದೆ 2026 ರಲ್ಲಿ 0.59 ಕ್ಕೆ ಇಳಿಯುವ ಬಗ್ಗೆ ಆತಂಕ ಹುಟ್ಟಿಸುವ ಮಾಹಿತಿ ಈಗ ದಕ್ಷಿಣ ಕೊರಿಯಾ ಅಂಕಿ ಅಂಶದಲ್ಲಿ ಹೊರಬಿದ್ದಿದೆ.
1970ರಿಂದಲೂ ಇದೇ ಸಮಸ್ಯೆ
ಫರ್ಟಿಲಿಟಿ ರೇಟ್ ಎಂದು ಕರೆಯಲಾಗುವ ಜನನ ಪ್ರಮಾಣವನ್ನು ಅಳೆಯುವ ಮಾಪನವು ಸಾಮಾನ್ಯವಾಗಿ ಬಹುತೇಕ ದೇಶದಲ್ಲಿ 2ಕ್ಕಿಂತ ಹೆಚ್ಚಾಗಿದೆ. ಆದರೆ ಕೊರಿಯಾ ದೇಶಗಳಲ್ಲಿ, ಅಂದ್ರೆ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಇಲ್ಲಿ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಕುಸಿತ ಕಾಣುತ್ತಿದ್ದು, ಜನನ ಪ್ರಮಾಣವೂ ಕಡಿಮೆ ಇದೆ. ದಕ್ಷಿಣ ಕೊರಿಯಾದ ಒಟ್ಟಾರೆ ಜನಸಂಖ್ಯೆ 1970 ರ ದಶಕದಿಂದ ಭಾರಿ ಮಟ್ಟಕ್ಕೆ ಕುಸಿಯುತ್ತಿದೆ.

ಉತ್ತರ ಕೊರಿಯಾದಲ್ಲಿ ಇದೇ ಸ್ಥಿತಿ
ಇನ್ನು ದಕ್ಷಿಣ ಕೊರಿಯಾ ಅಧ್ಯಕ್ಷರಾದ ಯೂನ್ ಸುಕ್ ಯೆಯೋಲ್ ಸರ್ಕಾರ ಈ ವಿಚಾರದ ಬಗ್ಗೆ ಗಂಭೀರ ಕ್ರಮಕ್ಕೆ ಮುಂದಾಗಿದೆ. ಹೀಗೆ ಹಲವು ವರ್ಷಗಳಿಂದ, ಕ್ರಮ ಕೈಗೊಂಡರೂ ಪ್ರಯೋಜನ ಆಗ್ತಿಲ್ಲ. ಹೀಗಾಗಿ ಭವಿಷ್ಯದಲ್ಲಿ ದಕ್ಷಿಣ ಕೊರಿಯಾ ದೊಡ್ಡ ಗಂಡಾಂತರವನ್ನ ಎದುರಿಸುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದು ಕಡೆ ಉತ್ತರ ಕೊರಿಯಾದಲ್ಲಿ ಕೂಡ ಇದೇ ರೀತಿಯ ವಾತಾವರಣ ಸೃಷ್ಟಿಯಾಗಿದೆ.
ಸರ್ವಾಧಿಕಾರಿ ನಾಡು ಉತ್ತರ ಕೊರಿಯಾ
ನಿಮಗೆಲ್ಲಾ ಗೊತ್ತಿದ್ದಂತೆ ಉತ್ತರ ಕೊರಿಯಾ ಒಂದು ಕಮ್ಯುನಿಸ್ಟ್ ಆಡಳಿತ ಇರುವ ದೇಶವಾಗಿದೆ. ಈ ಕಾರನಕ್ಕೆ ಮೊದಲು ಈ ದೇಶದಲ್ಲಿ ಜನಸಂಖ್ಯೆ ಹೆಚ್ಚಳವನ್ನ ಒಂದು ಶಾಪ ಎನ್ನುವಂತೆಯೇ ನಂಬಲಾಗಿತ್ತು. ಇದೇ ಕಾರಣಕ್ಕೆ 1970-80ರ ಸಮಯದಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಲು ಕಠಿಣ ನಿಯಮ ಜಾರಿಗೆ ತರಲಾಗಿತ್ತು. ಆದ್ರೆ ಆ ನಂತರ ಉತ್ತರ ಕೊರಿಯಾದಲ್ಲಿ ಜನಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿಯಲು ಆರಂಭಿಸಿದ ನಂತರ ಆ ಕಾನೂನು ತೆಗೆದು ಹಾಕಿದ್ದರು. ಈಗ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಎರಡೂ ಸಮಸ್ಯೆಗೆ ಸಿಲುಕಿವೆ. ಮುಂದೆ ಈ ಪರಿಸ್ಥಿತಿಯನ್ನ ಬದಲಾಯಿಸಲು ಎರಡೂ ದೇಶಗಳು ಸಾಕಷ್ಟು ಶ್ರಮ ವಹಿಸಬೇಕಿದೆ.












Click it and Unblock the Notifications