ಮಹಿಳೆಯರನ್ನು ಕಾಡುತ್ತಿದ್ದ ಉಗ್ರ ಅಬು ದುಬಾಜಾ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಶ್ರೀನಗರ, ಆ.2 : 'ಕಾಶ್ಮೀರ ಕಣಿವೆಯಲ್ಲಿ ಮಹಿಳೆಯರು ಮತ್ತು ಯುವತಿಯರು ಇನ್ನು ಸುರಕ್ಷಿತವಾಗಿರಬಹುದು'. ಲಷ್ಕರ್-ಎ-ತೋಬ್ಪಾದ ಉಗ್ರ ಅಬು ದುಜಾನಾ ಹತ್ಯೆ ಬಳಿಕ ಕಾಶ್ಮೀರ ಐಜಿಪಿ ಮುನೀರ್ ಖಾನ್ ಹೇಳಿದ ಮಾತಿದು.

ಹೆಂಡತಿ ನೋಡಲು ಬಂದು ಬಲಿಯಾದ ಉಗ್ರ ಅಬು ದುಜಾನ!

ಹಿಜ್ ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಭಾರತದ ಭದ್ರತಾ ಪಡೆಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಉಗ್ರ ಅಬು ದುಜಾನಾ ಹತ್ಯೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿದ್ದ ಅಬು ದುಜಾನಾ ಭದ್ರಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.

Death of Lashkar's Dujana the women of Kashmir can sleep in peace

ದುಜಾನಾ ಹತ್ಯೆ ಬಳಿಕ ಐಜಿಪಿ ಮುನೀರ್ ಖಾನ್, 'ಕಾಶ್ಮೀರ ಕಣಿವೆಯಲ್ಲಿ ಮಹಿಳೆಯರು ಮತ್ತು ಯುವತಿಯರು ಸುರಕ್ಷಿತವಾಗಿರಬಹುದು' ಎಂದು ಹೇಳಿಕೆ ನೀಡಿದ್ದಾರೆ. ದುಜಾನಾ ಕಾಶ್ಮೀರ ಕಣಿವೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ. ಈ ಕುರಿತು ಸ್ಥಳೀಯರು ಪೊಲೀಸ್ ಠಾಣೆಗೆ ಹಲವು ಬಾರಿ ದೂರು ನೀಡಿದ್ದರು.

ಕೊನೆಗೂ ಕಾಶ್ಮೀರದ ವಿಧ್ವಂಸಕ ಉಗ್ರ ಅಬು ದುಜಾನ ಹತ್ಯೆ

ಅಬು ದುಜಾನಾ ಪುಲ್ವನಾದ ಯುವತಿಯನ್ನು 2016ರಲ್ಲಿ ವಿವಾಹವಾಗಿದ್ದ. ಆದರೂ ಆತ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ. ಪುಲ್ವನಾದ ಸಿಂಘೂ ಪ್ರದೇಶದ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಹಲವು ಬಾರಿ ಪೊಲೀಸರಿಗೆ ದೂರು ನೀಡಲಾಗಿತ್ತು. ಆದ್ದರಿಂದ, ದುಜಾನಾ ಹತ್ಯೆ ಬಳಿಕ ಮಹಿಳೆಯರು ಸುರಕ್ಷಿತವಾಗಿರಬಹುದು ಎಂದು ಐಜಿಪಿ ಹೇಳಿಕೆ ನೀಡಿದ್ದಾರೆ.

Indian Army man attacked by mob in Kashmir- Oneindia Kannada

ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ದುಜಾನಾ ಡ್ರಗ್ಸ್ ಗೆ ದಾಸನಾಗಿದ್ದ. ವಿಧ್ವಂಸಕ ಚಟುವಟಿಕೆಗಳ ಜೊತೆ ಮಹಿಳೆಯರಿಗೆ, ಯುವತಿಯರಿಗೆ ಕಿರುಕುಳ ನೀಡುವ ಚಟುವಟಿಕೆಯಲ್ಲಿಯೂ ಆತ ತೊಡಗಿದ್ದ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After killing of Lashkar-e-Tayiba commander Abu Dujana, The IGP of Kashmir Muneer Khan said, “I want to tell woman and girls in the valley that they are safe now. Most wanted terrorist Abu Dujana was killed by security forces on August 1, 2017.
Please Wait while comments are loading...