ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿರ: ಬಲಗೈ ಬಂಟ ಛೋಟಾ ಶಕೀಲ್

ತೀವ್ರ ಹೃದಯಾಘಾತಕ್ಕೆ ಒಳಗಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರು ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಆರೋಗ್ಯ ಸ್ಥಿರವಾಗಿದ್ದು, ಡಾನ್ ದಾವೂದ್ ಗುಣಮುಖರಾಗಿದ್ದಾರೆ ಎಂದು ಡಿ ಕಂಪನಿ ಹೇಳಿದೆ.

ಕರಾಚಿ, ಏಪ್ರಿಲ್ 29: ತೀವ್ರ ಹೃದಯಾಘಾತಕ್ಕೆ ಒಳಗಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರು ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಆರೋಗ್ಯ ಸ್ಥಿರವಾಗಿದ್ದು, ಡಾನ್ ದಾವೂದ್ ಗುಣಮುಖರಾಗಿದ್ದಾರೆ ಎಂದು ಬಲಗೈ ಬಂಟ ಛೋಟಾ ಶಕೀಲ್ ಹೇಳಿದ್ದಾರೆ.

61 ವರ್ಷ ವಯಸ್ಸಿನ ದಾವೂದ್ ಇಬ್ರಾಹಿಂ ಅವರು 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಅಂದು 257ಕ್ಕೂ ಅಧಿಕ ಮಂದಿ ಸಾವಿಗೆ ಕಾರಣವಾದ ದಾವೂದ್ ಇಂದು ಬದುಕುಳಿಯುವ ಲಕ್ಷಣಗಳು ತೀರಾ ಕಡಿಮೆ ಎಂಬ ಮಾಹಿತಿ ಇದೆ. [ಕರಾಚಿಯ ಕ್ಲಿಫ್ಟನ್ ಉಪನಗರದಲ್ಲೇ ದಾವೂದ್ ನೆಲೆ]

Dawood Ibrahim is dead? He suffered a massive heart attack

ದಾವೂದ್ ಗೆ ಕಳೆದ ವಾರವೇ ಒಮ್ಮೆ ಹೃದಯಾಘಾತವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಮತ್ತೊಮ್ಮೆ ತೀವ್ರವಾಗಿ ಹೃದಯಾಘಾತಕ್ಕೆ ಒಳಗಾಗಿದ್ದು, ಮೃತಪಟ್ಟಿದ್ದಾರೆ ಎಂಬ ಸುದ್ದಿಯೂ ಇದೆ. [ದಾವೂದ್ ಕರೆ ಸ್ವೀಕರಿಸಿದ ಮಹಾರಾಷ್ಟ್ರದ ರಾಜಕಾರಣಿಗೆ ಯಾರು?]

ದಾವೂದ್ ಅವರು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಏಪ್ರಿಲ್ 22ರಂದು ಅವರಿಗೆ ಮೆದುಳಿನ ಸರ್ಜರಿಯಾಗಿತ್ತು. ನಂತರ ವೆಂಟಿಲೇಟರ್ ನಲ್ಲಿದ್ದರು. 20 ದಿನಗಳ ಹಿಂದೆ ಲಕ್ವಾ ಹೊಡೆದಿತ್ತು. ಎಂದು ನ್ಯೂಸ್ 24ನ ಮನಕ್ ಗುಪ್ತಾ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಜನಿಸಿದ ದಾವೂದ್ 80ರ ದಶಕದಲ್ಲೇ ಭಾರತವನ್ನು ತೊರೆದರು. ಕರಾಚಿಯನ್ನು ಮುಖ್ಯಕೇಂದ್ರವನ್ನಾಗಿಸಿಕೊಂಡು, ಭಾರತದಲ್ಲಿ ವಿಧ್ವಂಸಕ ಕೃತ್ಯ, ಡ್ರಗ್ ಮಾಫಿಯಾ, ಹಫ್ತಾ ವಸೂಲಿ, ಗ್ಯಾಂಗ್ ವಾರ್ ಸೇರಿದಂತೆ ಎಲ್ಲವನ್ನು ಡಿ ಕಪನಿ ನಿಭಾಯಿಸುತ್ತಿದೆ.

ಕರಾಚಿಯ ಕ್ಲಿಫ್ಟನ್ ನಲ್ಲಿರುವ 6,000 ಚದರ ಯಾರ್ಡ್ ಮನೆಯಲ್ಲಿ ನೆಲೆ ಕಂಡಿದ್ದ ದಾವೂದ್ ಗೆ ಶೇ 40ರಷ್ಟು ಆದಾಯ ಡ್ರಗ್ಸ್ ಮಾಫಿಯಾದಿಂದಲೇ ಬರುತ್ತಿತ್ತು. ಪಾಕಿಸ್ತಾನದ ಗೂಢಚಾರ ಸಂಸ್ಥ ಐಎಸ್ ಐಗೆ ಆದಾಯ ತರುತ್ತಿದ್ದ ದಾವೂದ್ ತನ್ನ ಕೊನೆ ದಿನಗಳನ್ನು ಹಾಗೂ ತನ್ನ ಸಮಾಧಿ ಮುಂಬೈಯಲ್ಲಿರಲಿ ಎಂದು ಬಯಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+