ದಾವೂದ್ ಇಬ್ರಾಹಿಂ ಪಾಸ್ ಪೋರ್ಟ್ ವಿವರ ಬಹಿರಂಗ
ನವದೆಹಲಿ, ಆಗಸ್ಟ್ 23: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ನೆಲೆಸಿದ್ದಾನೆ ಎಂಬುದಕ್ಕೆ ಮತ್ತಷ್ಟು ಪುರಾವೆಗಳು ಸಿಕ್ಕಿವೆ. ದಾವೂದ್ ಸರಿ ಸುಮಾರು ಒಂಬತ್ತು ಮನೆಗಳನ್ನು ಹೊಂದಿದ್ದಾರೆ. ಗಣ್ಯಾತಿಗಣ್ಯರ ಮನೆ ಬಳಿಯೇ ದಾವೂದ್ ಮನೆ ಇರುವುದು ತಿಳಿದು ಬಂದಿದೆ.
ಕಳೆದ ಎರಡು ವರ್ಷಗಳ ಹಿಂದೆ ಖರೀದಿಸಿರುವ ಮನೆ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಪುತ್ರ ಬಿಲಾವಲ್ ಭುಟ್ಟೋ ಜರ್ದಾರಿ ಅವರ ನಿವಾಸದ ಸಮೀಪ ದಾವೂದ್ ಮನೆ ಇದೆ. ದಾವೂದ್ ಬಳಿ ಮೂರು ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳಿದ್ದು,ತನ್ನ ಪ್ರಯಾಣಕ್ಕೆ ಆತ ಇವುಗಳನ್ನು ಬಳಸಿಕೊಳ್ಳುತ್ತಿರುತ್ತಾನೆ.
ದಾವೂದ್ ಒಟ್ಟೂ ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದು ಮೊದಲನೆಯದನ್ನು ರಾವಲ್ಪಿಂಡಿಯಲ್ಲಿ ನೀಡಲಾಗಿದ್ದರೆ,ಇನ್ನುಳಿದ ಎರಡು ಪಾಸ್‌ಪೋರ್ಟ್‌ಗಳನ್ನು ಕರಾಚಿಯಲ್ಲಿ ವಿತರಿಸಲಾಗಿದೆ.
ಆತನ ಪತ್ನಿ ಮಹಜಬೀನ್,ಪುತ್ರ ಮೊಯೀನ್ ಮತ್ತು ಪುತ್ರಿ ಮೆಹ್ರೂಖ್ ಕೂಡ ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂದು ತಿಳಿಸಿರುವ ದಾಖಲೆಯು,ಈ ಎಲ್ಲ ಪಾಸ್‌ಪೋರ್ಟ್‌ಗಳ ಸಂಖ್ಯೆಗಳನ್ನು ಕೂಡ ಒದಗಿಸಿದೆ. [ಅವರು (ಕರಾಚಿ) ಮನೇಲಿದ್ದಾರೆ, ಮಲಗಿದ್ದಾರೆ : ದಾವೂದ್ ಹೆಂಡತಿ]
ಮೆಹ್ರೂಖ್ ಮಾಜಿ ಪಾಕ್ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರ ಪುತ್ರ ಜುನೈದ್‌ನನ್ನು ವಿವಾಹವಾಗಿದ್ದಾಳೆ. ದಾವೂದ್‌ನ ಪುತ್ರಿ ಮೆಹ್ರೀನ್,ಆತನ ಸೋದರರಾದ ಅನೀಸ್ ಮತ್ತು ಮುಸ್ತಾಕಿಂ ಕೂಡ ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದು,ಇವುಗಳ ಸಂಖ್ಯೆಗಳನ್ನು ಕೂಡ ನೀಡಲಾಗಿದೆ.
ಅಮೆರಿಕದ ವಿದೇಶಾಂಗ ಇಲಾಖೆಯು 2003,ಅಕ್ಟೋಬರ್ 16ರಂದು ದಾವೂದ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿದ್ದು,ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಡಿ ಆತನನ್ನು ಅಲ್ ಖಾಯಿದಾದ ಸಹವರ್ತಿಯಾಗಿ ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ದಾಖಲೆಯು ತಿಳಿಸಿದೆ.

ಆಗಾಗ ಮನೆ, ಸೇಫ್ ಹೌಸ್ ಬದಲಿಸುವ ದಾವೂದ್
ಪಾಕಿಸ್ತಾನಕ್ಕೆ ಸಲ್ಲಿಸಲು ಭಾರತವು ಸಿದ್ಧಗೊಳಿಸಿರುವ ದಾಖಲೆಯಂತೆ ತನ್ನ ವಸತಿಯನ್ನು ಆಗಾಗ್ಗೆ ಬದಲಿಸುತ್ತಲೇ ಇರುವ ದಾವೂದ್ ಅಲ್ಲಿ ಒಂಬತ್ತು ಕಡೆಗಳಲ್ಲಿ ಮನೆಗಳನ್ನು ಹೊಂದಿದ್ದಾನೆ. ಆತ ಖರೀದಿಸಿರುವ ನೂತನ ನಿವಾಸ ಕರಾಚಿಯ ಕ್ಲಿಫ್ಟನ್ ನ ಝಿಯಾವುದ್ದೀನ್ ಆಸ್ಪತ್ರೆಗೆ ಸಮೀಪದ ಶಿರೀನ್ ಜಿನ್ನಾ ಕಾಲನಿಯಲ್ಲಿದೆ.
* ಇಸ್ಲಾಮಾಬಾದ್ ಮುರೀ ರಸ್ತೆಯಲ್ಲಿ ಒಂದು ಮನೆ
* ಪಿ 6/2, ನಂ.22, ಮನೆ ನಂ. 29,ಮರಗಲ್ಲ ರಸ್ತೆ, ಇಸ್ಲಾಮಾಬಾದ್

ಕರಾಚಿ ಮನೆ
* ಮೋಯಿನ್ ಪ್ಯಾಲೇಸ್, ಅಬ್ದುಲ್ಲಾ ಶಾ ಗಾಜಿ ದರ್ಗಾ, ಕ್ಲಿಫ್ಟನ್ ಕರಾಚಿ
* 6ಎ ಖ್ಯಾಬರ್ ತಂಜೀಮ್ ಫೇಸ್ 5, ಡಿಫೆನ್ಸ್ ಹೌಸಿಂಗ್ ಪ್ರದೇಶ,
* ಐ ಎಸ್ ಐ ಸೇಫ್ ಹೌಸ್, ಭೌಭನ್ ಹಿಲ್ಸ್
* 17 ಸಿಪಿ ಬಜಾರ್ ಸೊಸೈಟಿ, ಬ್ಲಾಕ್ 7-8, ಅಮೀರ್ ಖಾನ್ ರಸ್ತೆ,
* 30ನೇ ಸ್ಟ್ರೀಟ್, ಫೇಸ್ 6 ಬಡಾವಣೆ ಡಿಎಚ್ ಎ
* 8ನೇ ಮಹಡಿ, ಮೊಹ್ರನ್ ಸ್ಕ್ವೇರ್, ಪರ್ದೇಶಿ ಹೌಸ್ 3, ತಾವರ್
* ನೂರಿಯಾ ಬಾದ್

ಪಾಸ್ ಪೋರ್ಟ್ ಗಳ ವಿವರ
* ರಾವಲ್ಪಿಂಡಿ (No.G-866537)
* ಕರಾಚಿ (No. C-267185)
* ಕರಾಚಿ (No. KC-285901)
* ದಾವೂದ್ ಪತ್ನಿ ಮೆಹಜಬೀನ್ ಪಾಸ್ ಪೋರ್ಟ್ : No. J-589103
* ಪುತ್ರ ಮೋಯಿನ್ No. J-588518
* ಪುತ್ರಿ ಮೆಹ್ ರುಖ್ ( ಜಾವೇದ್ ಮಿಯಾಂದಾದ್ ಸೊಸೆ) ಪಾಸ್ ಪೋರ್ಟ್ No. J-563473.
* ಪುತ್ರಿ ಮೆಹ್ರೀನ್ J-563439.
* ದಾವೂದ್ ಸೋದರ ಅನೀಸ್ ಹಾಗೂ ಮುಸ್ತಕೀಮ್ ಪಾಸ್ ಪೋರ್ಟ್ ಸಂಖ್ಯೆಗಳು H 144394 ಮತ್ತು KA-713357
|
ಭಾರತಕ್ಕೆ ಬಂದರೆ ಬಿಜೆಪಿ ಸೇರುತ್ತಾನೆ?
ಭಾರತಕ್ಕೆ ಬಂದರೆ ಬಿಜೆಪಿ ಸೇರುತ್ತಾನೆ?, ಮೋದಿ ಕ್ಯಾಬಿನೆಟ್ ಸಚಿವನಾದರೂ ಅಚ್ಚರಿ ಪಡಬೇಕಾಗಿಲ್ಲ.
|
ಬಿಜೆಪಿಯಲ್ಲ ಕಾಂಗ್ರೆಸ್ ಸೇರುತ್ತಾನೆ ನೋಡ್ತಾ ಇರಿ
ಬಿಜೆಪಿಯಲ್ಲ ಕಾಂಗ್ರೆಸ್ ಸೇರುತ್ತಾನೆ ನೋಡ್ತಾ ಇರಿ, ರಾಜ್ಯಸಭಾ ಸದಸ್ಯನಾಗುತ್ತಾನೆ.
|
ಕೊನೆಗೂ ಟೆಲಿಫೋನ್ ಬಿಲ್ ನಿಂದ ಪತ್ತೆ
ಕೊನೆಗೂ ಟೆಲಿಫೋನ್ ಬಿಲ್ ನಿಂದ ಪತ್ತೆ, ಹಾಗೆ ಕ್ರೆಡಿಟ್ ಕಾರ್ಡ್ ಖರ್ಚು ವೆಚ್ಚ ತಿಳಿಸಿರಿ.
|
ಅರ್ನಾಬ್ ಗೋಸ್ವಾಮಿ ಶೋಗೆ ಕರೆಸಬೇಕು
ದಾವೂದ್ ಭಾರತಕ್ಕೆ ಬಂದಾಗ ಅರ್ನಾಬ್ ಗೋಸ್ವಾಮಿ ಶೋಗೆ ಕರೆಸಬೇಕು












Click it and Unblock the Notifications