ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಔಷಧಿಗಳ ಪಟ್ಟಿಯಿಂದ ರೆಮೆಡೆಸಿವಿರ್ ಅಮಾನತು

|
Google Oneindia Kannada News

ನವದೆಹಲಿ, ನವೆಂಬರ್.20: ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಬಲು ಪರಿಣಾಮಕಾರಿ ಎನಿಸಿದ್ದ ರೋಗ ನಿರೋಧಕ ಔಷಧಿ ಗಿಲಿಡ್ ರೆಮೆಡೆಸಿವಿರ್ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಅಮಾನತುಗೊಳಿಸಿದೆ. ಕೊವಿಡ್-19 ಆರಂಭಿಕ ಹಂತದಲ್ಲಿ ಸೋಂಕಿತರಿಗೆ ಈ ಔಷಧಿಯೇ ಹೆಚ್ಚು ಸುರಕ್ಷಿತ ಎನ್ನಲಾಗಿತ್ತು.

ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಂಗ್ರಹಣೆಗೆ ಮಾನದಂಡವಾಗಿ ಬಳಸುವ ಔಷಧಿಗಳ ಪಟ್ಟಿಯಿಂದ ಗಿಲಿಡ್ ರೆಮೆಡೆಸಿವಿರ್ ನ್ನು ಅಮಾನತುಗೊಳಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಶುಕ್ರವಾರ ಸ್ಪಷ್ಟಪಡಿಸಿದೆ. ಕೋವಿಡ್ -19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ರೆಮೆಡೆಸಿವಿರ್ ಔಷಧಿ ಬಳಸುವ ಕುರಿತು ಈ ಮೊದಲೇ ಡಬ್ಲ್ಯುಎಚ್‌ಒ ಮಾರ್ಗದರ್ಶನ ನೀಡಿತ್ತು.

Coronavirus in India Live Updates: Live: ದೇಶದಲ್ಲಿ 90 ಲಕ್ಷದ ಗಡಿ ದಾಟಿದ ಒಟ್ಟು ಪ್ರಕರಣಗಳುCoronavirus in India Live Updates: Live: ದೇಶದಲ್ಲಿ 90 ಲಕ್ಷದ ಗಡಿ ದಾಟಿದ ಒಟ್ಟು ಪ್ರಕರಣಗಳು

"ಹೌದು, ನಾವು ರೆಮೆಡೆಸಿವಿರ್ ಔಷಧಿಯನ್ನು ಪಿಕ್ಯೂ (ಪೂರ್ವಭಾವಿ ಪಟ್ಟಿ) ಯಿಂದ ಅಮಾನತುಗೊಳಿಸಿದ್ದೇವೆ" ಎಂದು ಡಬ್ಲ್ಯುಎಚ್‌ಒ ಮಾಧ್ಯಮ ಪ್ರತಿನಿಧಿ ತಾರಿಕ್ ಜಸರೆವಿಕ್ ರಾಯಿಟರ್ಸ್ ಗೆ ಇಮೇಲ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Covid-19 Vaccine News: WHO Suspends Remdesivir From List Of Medicines

ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ:
ಕೊರೊನಾವೈರಸ್ ಸೋಂಕಿಗೆ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಅಂತಾರಾಷ್ಟ್ರೀಯ ಕಂಪನಿಗಳು ಅತಿಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯವನ್ನು ಹೊಂದಿರುವ ರಾಷ್ಟ್ರಗಳಿಗೆ ಕೊವಿಡ್-19 ಲಸಿಕೆಯನ್ನು ನೀಡುತ್ತಿವೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿದಿಲ್ಲ ಎಂದು ರಾಯಟರ್ಸ್ ವರದಿ ಮಾಡಿತ್ತು.

ಯುಎಸ್ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಗೆ ಕೊರೊನಾವೈರಸ್ ಸೋಂಕು ತಗುಲಿದ ಸಂದರ್ಭದಲ್ಲಿ ಅವರಿಗೆ ಇದೇ ರೆಮೆಡೆಸಿವಿರ್ ಔಷಧಿಯನ್ನು ನೀಡಲಾಗಿತ್ತು. 50ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ಇದೇ ಔಷಧಿಯನ್ನು ಬಳಸುವುದಕ್ಕೆ ಸೂಚಿಸಲಾಗಿತ್ತು.

Recommended Video

26 /11 ಅದೇ ದಿನ ಮತ್ತೊಂದು ದಾಳಿ ಸಾಧ್ಯತೆ | Oneindia Kannada

English summary
Covid-19 Vaccine News: WHO Suspends Remdesivir From List Of Medicines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X