• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ದಿನಕ್ಕೆ 15 ಸಾವಿರ ಸೋಂಕು ಬರುತ್ತೆ: ಚೀನಾ ಸಂಶೋಧನಾ ತಂಡ ಎಚ್ಚರಿಕೆ

|

ಬೀಜಿಂಗ್, ಜೂನ್ 3: ಭಾರತದಲ್ಲಿ ಕೊರೊನಾ ವೈರಸ್ ಅಸಲಿ ಆಟ ಈಗ ಶುರುವಾಗುತ್ತಿದೆ ಎಂದು ಚೀನಾ ವರದಿ ಹೇಳಿದೆ. ಜೂನ್ ತಿಂಗಳಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಭಾರತದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣಲಿದೆ ಎಂಬ ಆತಂಕಕಾರಿ ವಿಷಯವನ್ನು ಬಿಚ್ಚಿಟ್ಟಿದೆ.

ಪ್ರತಿದಿನ ಸುಮಾರು 15000 ಹೊಸ ಕೊರೊನಾ ಕೇಸ್‌ಗಳು ಭಾರತದಲ್ಲಿ ವರದಿಯಾಗಲಿದೆ ಎಂದು ಚೀನಾ ಅಧ್ಯಯನ ವರದಿ ಎಚ್ಚರಿಸಿದೆ. ಸದ್ಯ ಅಮೆರಿಕ ಹಾಗೂ ಬ್ರೆಜಿಲ್‌ನಲ್ಲಿ 20 ಸಾವಿರಕ್ಕಿಂತ ಹೆಚ್ಚು ಕೊರೊನಾ ಕೇಸ್ ಪ್ರತಿದಿನ ವರದಿಯಾಗುತ್ತಿದೆ. ಚೀನಾ ಅಧ್ಯಯನ ಎಂಬ ಕಾರಣಕ್ಕೆ ಈ ವಿಚಾರ ಮಹತ್ವ ಪಡೆದುಕೊಂಡಿದೆ. ಯಾಕಂದ್ರೆ, ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿರುವುದೇ ಚೀನಾ.

ಕೊರೊನಾ ತವರು ವುಹಾನ್ ನಿಂದ ಬಂದ ಹೊಸ ಆಘಾತಕಾರಿ ಸುದ್ದಿ ಇದು.!

ಸದ್ಯಕ್ಕೆ ಕೊರೊನಾದಿಂದ ಚೇತರಿಕೆ ಕಂಡಿರುವ ಚೀನಾ, ಈಗ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದ ಬಗ್ಗೆ ಭವಿಷ್ಯ ನುಡಿದಿದೆ. ಭಾರತದಲ್ಲಿ ಪ್ರತಿದಿನ ಎಷ್ಟು ಸೋಂಕು ಬರಲಿದೆ, ಜೂನ್ ತಿಂಗಳು ಇಂಡಿಯಾದಲ್ಲಿ ಹೇಗಿರಲಿದೆ ಎಂದು ಮುನ್ಸೂಚನೆ ನೀಡಿದೆ... ಮುಂದೆ ಓದಿ...

ಜೂನ್ 15ರ ವೇಳೆ 15000 ಸಾವಿರ ಸೋಂಕು

ಜೂನ್ 15ರ ವೇಳೆ 15000 ಸಾವಿರ ಸೋಂಕು

ಜೂನ್ 15ರ ವೇಳೆಗೆ ಭಾರತದಲ್ಲಿ ಪ್ರತಿದಿನ 15 ಸಾವಿರ ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಲಿದೆ ಎಂದು ಚೀನಾದ ಲ್ಯಾಂಜೋ ವಿಶ್ವವಿದ್ಯಾಲಯದ ಅಧ್ಯಯನ ತಂಡ ಎಚ್ಚರಿಕೆ ನೀಡಿದೆ. ಪ್ರತಿದಿನ ಸೋಂಕು ಹಾಗೂ ಒಟ್ಟಾರೆ ಸೋಂಕಿನಲ್ಲೂ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣಲಿದೆ ಎಂದು ಸಂಶೋಧನೆ ತಂಡ ಭವಿಷ್ಯ ನುಡಿದಿದೆ.

ಜೂನ್ 2ಕ್ಕೆ 9,291 ಎಂದು ಹೇಳಿತ್ತು

ಜೂನ್ 2ಕ್ಕೆ 9,291 ಎಂದು ಹೇಳಿತ್ತು

ಜಗತ್ತಿನ 180ಕ್ಕೂ ಅಧಿಕ ರಾಷ್ಟ್ರಗಳ ಕುರಿತು ಅಧ್ಯಯನ ಮಾಡಿರುವ ಚೀನಾ ಸಂಶೋಧನ ತಂಡ, ಪ್ರತಿದಿನ ಎಷ್ಟು ಕೇಸ್ ವರದಿಯಾಗಲಿದೆ ಎಂದು ಮುಂಚಿತವಾಗಿಯೇ ಊಹಿಸಿದ್ದಾರೆ. ಜೂನ್ 2 ರಂದು ಭಾರತದಲ್ಲಿ 9,291 ಹೊಸ ಕೇಸ್ ದಾಖಲಾಗುತ್ತೆ ಎಂದು ಹೇಳಿತ್ತು. ಆದರೆ, ಅದು ನಿಜವಾಗಿಲ್ಲ ಆದರೂ ಗರಿಷ್ಠ ಕೇಸ್ ವರದಿಯಾಗಿದೆ. ಜೂನ್ 2ರಂದು ಭಾರತದಲ್ಲಿ 8909 ಜನರಿಗೆ ಸೋಂಕು ಅಂಟಿಕೊಂಡಿದೆ. ಇದು ಸಹಜವಾಗಿ ಅಚ್ಚರಿಗೆ ಕಾರಣವಾಗಿದೆ.

ಗೂಗಲ್ ಪ್ಲೇ ಸ್ಟೋರ್‌ನಿಂದ ಹೆಚ್ಚು ಡೌನ್‌ಲೋಡ್‌ ಆಗ್ತಿದ್ದ 'Remove china apps'

ಮುಂದಿನ ನಾಲ್ಕು ದಿನ ಕೇಸ್ ಎಷ್ಟಿರಬಹುದು?

ಮುಂದಿನ ನಾಲ್ಕು ದಿನ ಕೇಸ್ ಎಷ್ಟಿರಬಹುದು?

ಬುಧವಾರದಿಂದ ಮುಂದಿನ ನಾಲ್ಕು ಭಾರತದಲ್ಲಿ ಎಷ್ಟು ಹೊಸ ಕೇಸ್‌ಗಳು ವರದಿಯಾಗಬಹುದು ಎಂದು ಚೀನಾ ಸಂಶೋಧನ ತಂಡ ಭವಿಷ್ಯ ಹೇಳಿದೆ. ಜೂನ್ 3 ರಂದು 9676 ಕೇಸ್, ಜೂನ್ 4 ರಂದು 10,078 ಪ್ರಕರಣ, ಜೂನ್ 5 ರಂದು 10,498 ಸೋಂಕು ಹಾಗೂ ಜೂನ್ 6 ರಂದು 10,936 ಹೊಸ ಕೇಸ್ ವರದಿಯಾಗಬಹುದು ಎಂದು ಮುನ್ಸೂಚನೆ ನೀಡಿದೆ.

ಮೇ 28 ರಂದು 7,607 ಬರುತ್ತೆ ಎಂದು ಹೇಳಿತ್ತು

ಮೇ 28 ರಂದು 7,607 ಬರುತ್ತೆ ಎಂದು ಹೇಳಿತ್ತು

"ಮೇ 28 ರಂದು ಭಾರತದಲ್ಲಿ 7,607 ಕೊರೊನಾ ಕೇಸ್‌ಗಳು ಬರಲಿದೆ ಎಂದು ನಾವು ಊಹೆ ಮಾಡಿದ್ದೆವು. ನಮ್ಮ ಊಹೆಯಂತೆ ಬಹಳ ಹತ್ತಿರಕ್ಕೆ ಭಾರತ ಬಂದಿತ್ತು. ಭಾರತದಲ್ಲಿ ಮೇ 28ಕ್ಕೆ 7,467 ಕೇಸ್ ವರದಿಯಾಗಿತ್ತು. ನಮ್ಮ ಭವಿಷ್ಯ ಆರಂಭಿಕ ಹಂತದಲ್ಲಿದೆ. ದೋಷ ವಿಶ್ಲೇಷಣೆಯನ್ನು ಶೀಘ್ರದಲ್ಲೇ ನಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್‌ ಮಾಡಲಾಗುವುದು'' ಎಂದು ಲ್ಯಾಂಜೋ ವಿಶ್ವವಿದ್ಯಾಲಯದ ಇನ್ನೋವೇಶನ್ ಸೆಂಟರ್ ಆಫ್ ವೆಸ್ಟರ್ನ್ ಇಕಾಲಜಿಕಲ್ ಸೇಫ್ಟಿಯ ನಿರ್ದೇಶಕ ಹುವಾಂಗ್ ಜಿಯಾನ್‌ಪಿಂಗ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಮತ್ತೆ ಹೆಚ್ಚಾಗಲಿದೆ ಸೋಂಕು

ಅಮೆರಿಕದಲ್ಲಿ ಮತ್ತೆ ಹೆಚ್ಚಾಗಲಿದೆ ಸೋಂಕು

ಜೂನ್‌ನಲ್ಲಿ ಅಮೆರಿಕ ಪ್ರತಿದಿನ 30,000 ಹೊಸ ಪ್ರಕರಣಗಳನ್ನು ವರದಿ ಮಾಡಲಿದೆ ಎಂದು ಚೀನಾ ಅಧ್ಯಯನ ತಂಡ ಹೇಳುತ್ತಿದೆ. ಮತ್ತೊಂದೆಡೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಯುರೋಪಿನ ಪ್ರಮುಖ ದೇಶಗಳಲ್ಲಿ ದೈನಂದಿನ ಪ್ರಕರಣಗಳಲ್ಲಿ ನಿರಂತರ ಕುಸಿತ ಕಾಣಲಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಯುಎಸ್‌ನಲ್ಲಿ 20 ಸಾವಿರ ಕೇಸ್ ವರದಿಯಾಗುತ್ತಿದೆ.

ಭಾರತದಲ್ಲಿ ಪ್ರತಿದಿನ 8 ಸಾವಿರ ಕೇಸ್

ಭಾರತದಲ್ಲಿ ಪ್ರತಿದಿನ 8 ಸಾವಿರ ಕೇಸ್

ಭಾರತದಲ್ಲಿ ಕಳೆದು ನಾಲ್ಕು ದಿನಗಳಿಂದ ಸತತವಾಗಿ 8000 ಹೊಸ ಕೊರೊನಾ ಕೇಸ್‌ಗಳು ಕಾಣಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2 ಲಕ್ಷ (207,615) ದಾಟಿದೆ. ಭಾರತದಲ್ಲಿ ಇಲ್ಲಿಯವರೆಗೂ 100,303 ಮಂದಿ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 101,497 ಕೇಸ್‌ ಸಕ್ರಿಯವಾಗಿದೆ.

English summary
China predicts india will witness its daily COVID-19 cases rising by 15,000 a day by the middle of June month. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more