ಕೊರೊನಾ ಹೊಡೆತಕ್ಕೆ ಕಂಗೆಟ್ಟ ಯೂರೋಪ್: ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಸಾವು

ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ವಿಶ್ವದಾದ್ಯಂತ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿದೆ. ಚೀನಾದಲ್ಲಿ 3213 ಮಂದಿಯ ಪ್ರಾಣವನ್ನು ನುಂಗಿರುವ ಕೊರೊನಾ ವೈರಸ್, ಯೂರೋಪ್ ದೇಶಗಳಲ್ಲೂ ನಿರಂತರವಾಗಿ ಮರಣ ಮೃದಂಗ ಬಾರಿಸುತ್ತಿದೆ.

ಇತರೆ ದೇಶಗಳಿಗೆ ಹೋಲಿಸಿದರೆ ಕೊರೊನಾ ವೈರಸ್ ಸೋಂಕಿನಿಂದಾಗಿ ಯೂರೋಪ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇಟಲಿಯೊಂದರಲ್ಲೇ ನಿನ್ನೆ ಒಂದೇ ದಿನ 368 ಮಂದಿ, ಸ್ಪೇನ್ ನಲ್ಲಿ 97, ಫ್ರಾನ್ಸ್ ನಲ್ಲಿ 29, ಯುಕೆ ನಲ್ಲಿ 14 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡಿರುವ ಯೂರೋಪ್, ಜನರ ಓಡಾಟವನ್ನು ನಿಯಂತ್ರಣಗೊಳಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಯೂರೋಪಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Coronavirus: European States Record Highest One Day Death Toll.

ಕೊರೊನಾ ವೈರಸ್ ನಿಂದಾಗಿ ಇಟಲಿ ಸಂಪೂರ್ಣ ಸ್ತಬ್ಧವಾಗಿದೆ. ಆಹಾರ ಮತ್ತು ಔಷಧಿ ಅಂಗಡಿಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲವೂ ಬಂದ್ ಆಗಿದೆ. ಜಿಮ್, ಮ್ಯೂಸಿಯಂ, ನೈಟ್ ಕ್ಲಬ್ ಗಳೆವಕ್ಕೂ ಬಾಗಿಲು ಹಾಕಲಾಗಿದೆ.

ಆಸ್ಟ್ರಿಯಾದಲ್ಲಿ ಐವರಿಗಿಂತ ಹೆಚ್ಚು ಜನ ಒಂದೆಡೆ ಸೇರುವ ಹಾಗಿಲ್ಲ. ಐರ್ಲ್ಯಾಂಡ್ ನಲ್ಲಿ ಪಬ್ ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಇನ್ನೂ ಸ್ಪೇನ್ ನಲ್ಲಿ ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಳ್ಳುವುದಕ್ಕೆ ಮಾತ್ರ ಮನೆಯಿಂದ ಹೊರಗೆ ಬರಲು ನಾಗರಿಕರಿಗೆ ಸೂಚಿಸಲಾಗಿದೆ. ಫ್ರಾನ್ಸ್ ನಲ್ಲಿ ಕೆಫೆ, ರೆಸ್ಟೋರೆಂಟ್, ಸಿನಿಮಾ ಹಾಲ್ ಮತ್ತು ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.

ವಿಶ್ವದ ಸಾಂಕ್ರಾಮಿಕ ಪಿಡುಗು ಕೊರೊನಾ ವೈರಸ್ ನ ಕೇಂದ್ರ ಸ್ಥಾನ ಇದೀಗ ಯೂರೋಪ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

ಯೂರೋಪಿನ ಪ್ರಮುಖ ದೇಶಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು (ಮಾರ್ಚ್ 16 ರವರೆಗೂ)

* ಇಟಲಿ

ಒಟ್ಟು ಪ್ರಕರಣಗಳು: 24,747

ಸಾವಿನ ಸಂಖ್ಯೆ: 1809

ಗುಣಮುಖರಾದವರು: 2335

* ಸ್ಪೇನ್

ಒಟ್ಟು ಪ್ರಕರಣಗಳು: 7988

ಸಾವಿನ ಸಂಖ್ಯೆ: 294

ಗುಣಮುಖರಾದವರು: 517

* ಜರ್ಮನಿ

ಒಟ್ಟು ಪ್ರಕರಣಗಳು: 5813

ಸಾವಿನ ಸಂಖ್ಯೆ: 13

ಗುಣಮುಖರಾದವರು: 46

* ಫ್ರಾನ್ಸ್

ಒಟ್ಟು ಪ್ರಕರಣಗಳು: 5423

ಸಾವಿನ ಸಂಖ್ಯೆ: 127

ಗುಣಮುಖರಾದವರು: 12

* ಸ್ವಿಟ್ಜರ್ಲ್ಯಾಂಡ್

ಒಟ್ಟು ಪ್ರಕರಣಗಳು: 2217

ಸಾವಿನ ಸಂಖ್ಯೆ: 14

ಗುಣಮುಖರಾದವರು: 4

* ಯುಕೆ

ಒಟ್ಟು ಪ್ರಕರಣಗಳು: 1391

ಸಾವಿನ ಸಂಖ್ಯೆ: 35

ಗುಣಮುಖರಾದವರು: 20

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+