ಈ ಚಿಕಿತ್ಸೆ ಪಡೆದಲ್ಲಿ ಕೊವಿಡ್-19 ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಿಲ್ಲ!

ವಾಶಿಂಗ್ಟನ್, ಸಪ್ಟೆಂಬರ್.17: ಕೊರೊನಾವೈರಸ್ ಸೋಂಕಿತರಲ್ಲಿ ಆರಂಭಿಕ ಲಕ್ಷಣ ಕಾಣಿಸಿಕೊಂಡಾಗಲೇ ನೀಡುವ ಪ್ರತಿಕಾಯ ಚಿಕಿತ್ಸೆಯಿಂದ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ತಗ್ಗಿಸಬಹುದು ಎಂದು ಅಮೆರಿಕಾ ಮೂಲದ ಔಷಧೀಯ ಕಂಪನಿ ಎಲಿ ಲಿಲ್ಲಿ ನಡೆಸಿದ ಆಂತರಿಕ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

BLAZE-1 ವೈದ್ಯಕೀಯ ಪ್ರಯೋಗದಲ್ಲಿ 2ನೇ ಹಂತದ ಅಧ್ಯಯನದಲ್ಲಿ LY-CoV555 ಪ್ರತಿಕಾಯದ ಮೌಲ್ಯಮಾಪನ ಮಾಡಲಾಗಿದೆ. ಹೊರರೋಗಿ ವ್ಯವಸ್ಥೆಯಲ್ಲಿ ಕೊರೊನಾವೈರಸ್ ಸೋಂಕಿತ ಲಕ್ಷಣ ಉಳ್ಳವರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಕಂಪನಿಯು ತಿಳಿಸಿದೆ.

ಇನ್ನು, ಇತ್ತೀಚಿಗೆ ನಡೆಸಿದ ಕೊರೊನಾವೈರಸ್ ಸೋಂಕಿತರಲ್ಲಿ ಅಲ್ಪ ಪ್ರಮಾಣ ಮತ್ತು ಮಧ್ಯಮ ಪ್ರಮಾಣದ ಲಕ್ಷಣಗಳನ್ನು ಹೊಂದಿರುವ ಸೋಂಕಿತರಲ್ಲಿ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಪ್ಲೇಸಿಬೊ, 700 ಎಂಜಿ, 2800 ಎಂಜಿ, ಮತ್ತು 7000 ಎಂಜಿ ಎಂದು ಗುರುತಿಸಲಾಗಿದೆ.

ಕೊವಿಡ್-19 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ

ಕೊವಿಡ್-19 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ

ಕೊರೊನಾವೈರಸ್ ಸೋಂಕಿನಿಂದ ರೋಗದ ಲಕ್ಷಣಗಳು ಕಾಣಿಸಿಕೊಂಡ ರೋಗಿಗಳಿಗೆ LY-CoV555 ಪ್ರತಿಕಾಯ ಚಿಕಿತ್ಸೆಯಿಂದ 3 ದಿನಗಳಲ್ಲೇ ರೋಗದ ಲಕ್ಷಣದ ತೀವ್ರತೆ ಕಡಿಮೆಯಾಗಿದೆ ಎಂದು ಅಂಕಿ-ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ. ಹಲವು ಅಧ್ಯಯನಗಳಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ಆಸ್ಪತ್ರೆಗೆ ದಾಖಲಾದ ಬಹುತೇಕ ಸೋಂಕಿತರು ವಯಸ್ಸು ಅಥವಾ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಸಮಸ್ಯೆಯನ್ನು ಹೊಂದಿದ್ದರು ಎಂಬುದು ಸ್ಪಷ್ಟವಾಗಿದೆ. ಸದ್ಯ ನಡೆಸುತ್ತಿರುವ ಅಧ್ಯಯನಗಳಿಂದ ಈ ಶೋಧನೆ ದೃಢಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಔಷಧಿ ತಯಾರಕರು ತಿಳಿಸಿದ್ದಾರೆ.

ಕೊವಿಡ್-19 ಚಿಕಿತ್ಸೆಯಿಂದ ವ್ಯತಿರಿಕ್ತ ಪರಿಣಾಮಗಳಿಲ್ಲ

ಕೊವಿಡ್-19 ಚಿಕಿತ್ಸೆಯಿಂದ ವ್ಯತಿರಿಕ್ತ ಪರಿಣಾಮಗಳಿಲ್ಲ

ಎಲ್ಲ ಚಿಕಿತ್ಸಾ ವಿಧಾನಗಳ ಪೈಕಿ, ಪ್ಲೇಸಿಬೊ ಸೇರಿದಂತೆ ಯಾವುದೇ ಗುಂಪಿನ ಲಕ್ಷಣಗಳನ್ನು ಹೊಂದಿದ್ದರೂ ಅಂಥವರ ಆರೋಗ್ಯದಲ್ಲಿ ಯಾವುದೇ ರೀತಿ ಪ್ರಗತಿ ಕಂಡು ಬಂದಿಲ್ಲ. ಮೆಕ್ಯಾನಿಕಲ್ ವೆಂಟಿಲೇಷನ್ ನಲ್ಲಿ ಇರಿಸಿಲ್ಲ ಹಾಗೂ ಮೃತಪಟ್ಟಿಲ್ಲ ಎಂದು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತಿವೆ. ಸೂಕ್ಷ್ಮ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ವ್ಯತಿರಿಕ್ತ ಪರಿಣಾಮಗಳು ಬೀರಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.

ಕೊವಿಡ್-19 ಸೋಂಕಿತರಲ್ಲಿ ಚೇತರಿಕೆಗೆ ಪ್ರತಿಕಾಯ ಚಿಕಿತ್ಸೆ

ಕೊವಿಡ್-19 ಸೋಂಕಿತರಲ್ಲಿ ಚೇತರಿಕೆಗೆ ಪ್ರತಿಕಾಯ ಚಿಕಿತ್ಸೆ

"BLAZE-1 ವೈದ್ಯಕೀಯ ಅಧ್ಯಯನದ ದತ್ತಾಂಶಗಳನ್ನು ಗಮನಿಸಿದಾಗ LY-CoV555 ಪ್ರತಿಕಾಯ ಚಿಕಿತ್ಸೆಯು ನೇರವಾಗಿ ಕೊರೊನಾವೈರಸ್ ರೋಗಾಣುಗಳ ವಿರುದ್ಧ ಹೋರಾಡುತ್ತದೆ. ಪರಿಣಾಮ ಕೊವಿಡ್-19 ಲಕ್ಷಣಗಳಿರುವ ಸೋಂಕಿತರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ" ಎಂದು ಎಲಿ ಲಿಲ್ಲಿ ಕಂಪನಿಯ ಚೀಫ್ ಸೈಂಟಿಫಿಕ್ ಆಫೀಸರ್ ಆಗಿರುವ ಡೇನಿಯಲ್ ಸ್ಕೊವ್ರೊಂಸ್ಕಿ ತಿಳಿಸಿದ್ದಾರೆ.

ಪ್ರತಿಕಾಯ ಚಿಕಿತ್ಸೆ ಯಶಸ್ಸಿನ ಬಗ್ಗೆ ಫಲಿತಾಂಶಗಳಿಂದ ಸ್ಪಷ್ಟ

ಪ್ರತಿಕಾಯ ಚಿಕಿತ್ಸೆ ಯಶಸ್ಸಿನ ಬಗ್ಗೆ ಫಲಿತಾಂಶಗಳಿಂದ ಸ್ಪಷ್ಟ

ಕೊರೊನಾವೈರಸ್ ಸೋಂಕಿತರಿಗೆ ಪ್ರತಿಕಾಯ ಚಿಕಿತ್ಸೆ ನೀಡುವುದರಿಂದ ರೋಗದ ಪ್ರಭಾವ ಕ್ಷೀಣಿಸುತ್ತಿದೆ ಎಂಬ ನಮ್ಮ ನಂಬಿಕೆಯನ್ನು ಅಧ್ಯಯನದ ಫಲಿತಾಂಶವು ಹೆಚ್ಚಿಸುತ್ತಿದೆ. ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ ಆಂತರಿಕ ಅಧ್ಯಯನದ ವರದಿಯನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡುತ್ತೇವೆ. ಈ ಮಧ್ಯಂತರ ವಿಶ್ಲೇಷಣೆಯ ಫಲಿತಾಂಶಗಳನ್ನು ಪೀರ್-ರಿವ್ಯೂಡ್ ಜರ್ನಲ್‌ನಲ್ಲಿ ತ್ವರಿತವಾಗಿ ಪ್ರಕಟಿಸಲು ಮತ್ತು ಜಾಗತಿಕ ನಿಯಂತ್ರಕ ನಿಯಮಗಳಡಿ ಮುಂದಿನ ಹಂತಗಳಲ್ಲಿ ಚರ್ಚಿಸಲು ಉದ್ದೇಶಿಸಿದೆ ಎಂದು ಕಂಪನಿ ತಿಳಿಸಿದೆ.

Recommended Video

    ಚಳಿಗಾಲದಲ್ಲು ಯುದ್ಧ ಮಾಡೋಕೆ Ready ..China ನಾ ಸುಮ್ನೆ ಬಿಡಲ್ಲಾ | Oneindia Kannada
    ಪರಿಣಾಮಕಾರಿ ಎನಿಸಿದರೆ ಪ್ರತಿಕಾಯ ಚಿಕಿತ್ಸೆಯೇ ಮೊದಲು

    ಪರಿಣಾಮಕಾರಿ ಎನಿಸಿದರೆ ಪ್ರತಿಕಾಯ ಚಿಕಿತ್ಸೆಯೇ ಮೊದಲು

    ಜಾಗತಿಕ ಮಟ್ಟದಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾದಗುವುದನ್ನೇ ಎದುರು ನೋಡಲಾಗುತ್ತಿದೆ. ಒಂದು ವೇಳೆ ಮುಂದಿನ ವಿಶ್ಲೇಷಣೆಗಳಲ್ಲಿ ಇದೊಂದು ಅಂಶ ಸಾಬೀತಾದಲ್ಲಿ ಸೌಮ್ಯ ಮತ್ತು ಮಧ್ಯಮ ಮಟ್ಟದ ತೀವ್ರತೆಯುಳ್ಳ ಕೊರೊನಾವೈರಸ್ ಸೋಂಕಿತರಿಗೆ ಮೊದಲಿಗೆ ನೀಡುವ ಸಂಭಾವ್ಯ ಚಿಕಿತ್ಸೆಯೇ LY-CoV555 ಪ್ರತಿಕಾಯ ಚಿಕಿತ್ಸೆ ಆಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ Remdesivir ಮತ್ತು Steroid Dexamethasone ಔಷಧಿಯು ಗಂಭೀರ ಲಕ್ಷಣಗಳನ್ನು ಹೊಂದಿರುವ ಕೊರೊನಾವೈರಸ್ ರೋಗಿಗಳ ಚಿಕಿತ್ಸೆಗೆ ಪರಿಣಾಮಕಾರಿ ಎಂದು ಸಾಬೀತಾಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+