Cjp Funding: ಕಾಕ್ರೋಚ್ ಜನತಾ ಪಾರ್ಟಿಯ ಫಂಡಿಂಗ್ ರಹಸ್ಯ ರಿವೀಲ್ ಮಾಡಿದ ಅಮೆರಿಕಾದ ಗಾಯಕಿ ಮೇರಿ ಮಿಲ್ಬೆನ್!

Cjp Funding: ಭಾರತದಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಹೋರಾಟ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಲೋಪ ಹಾಗೂ ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ಕೊಡಬೇಕು ಎನ್ನುವ ವಿಚಾರವು ಹೆಚ್ಚು ಗಂಭೀರವಾಗಿ ಚರ್ಚೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಾರ್ಟಿಗೆ ಫಂಡ್ / ಆರ್ಥಿಕ ನೆರವು ಎಲ್ಲಿಂದ ಸಿಗುತ್ತಿದೆ ಎನ್ನುವ ವಿಚಾರವು ಗಂಭೀರವಾಗಿ ಚರ್ಚೆ ಕಾರಣವಾಗಿದೆ. ಇದೀಗ ಕಾಕ್ರೋಚ್ ಜನತಾ ಪಾರ್ಟಿಯ ಅನುದಾನದ ವಿಚಾರದಲ್ಲಿ ಅಮೆರಿಕಾದ ಗಾಯಕಿ ಮೇರಿ ಮಿಲ್ಬೆನ್ ಅವರು ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ನಂತರ, ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಕಾಕ್ರೋಚ ಜನತಾ ಪಾರ್ಟಿಯ ಹಿಂದಿರುವ ಅಮೆರಿಕದ ದಾನಿಗಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವವರು ಅಮೆರಿಕಾದಿಂದ ಕಾಕ್ರೋಚ್ ಜನತಾ ಪಾರ್ಟಿಗೆ ಹಣಕಾಸು ನೆರವು ನೀಡುತ್ತಿದ್ದಾರೆ ಎಂದು ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಆರೋಪಿಸಿದ್ದಾರೆ. ಅಲ್ಲದೆ ಯುವ ಭಾರತೀಯರು ಸಂಘಟನೆಯನ್ನು ಸಂಘಟಿಸಿ ಶಾಂತಿಯುತವಾಗಿ ಪ್ರತಿಭಟಿಸುವಂತೆ ಒತ್ತಾಯಿಸಿದ್ದಾರೆ.

CJP Funding American Singer Mary Millben Reveals Details of Cockroach Janata Party s Funding

ಭಾರತದ ಎಲ್ಲಾ ಸುಂದರ ಯುವ ದೇಶಭಕ್ತರಿಗೆ, ಇದು ಮೌನವಾಗಿರಲು ಸಮಯವಲ್ಲ ಅಂತ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಅಭಿಜೀತ್ ದೀಪ್ಕೆ ಹಾಗೂ ಕಾಕ್ರೋಚ್ ಜನತಾ ಪಾರ್ಟಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನಾಯಕತ್ವವನ್ನು ವಿರೋಧಿಸುವವರು ಅಮೆರಿಕದಲ್ಲಿದ್ದು, ಫಂಡಿಂಗ್ ಮಾಡುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.

ನನ್ನ ಯುವ ದೇಶಭಕ್ತರೇ, ಭಯಪಡಬೇಡಿ. 25 ವರ್ಷಗಳ ಕಾಲ ಭಾರತಕ್ಕೆ ಸೇವೆ ಸಲ್ಲಿಸಿದ, 12 ವರ್ಷಗಳ ಕಾಲ ಪ್ರಧಾನಿಯಾಗಿ ಸತತ ಮೂರು ಅವಧಿಗೆ ಆಯ್ಕೆಯಾದ ನಿಮ್ಮ ಪ್ರಧಾನಿ ನನ್ನ ದೇಶದ ವಿಭಜನೆ ಮಾಡುವ ಶಕ್ತಿಗಳಿಗೆ ತಲೆಬಾಗುವುದಿಲ್ಲ. ಈ ದಾನಿಗಳು ವಿಶ್ವದಾದ್ಯಂತ ಒಂದೇ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಪ್ರದಾಯವಾದಿ ನಾಯಕರನ್ನು ಗುರಿಯಾಗಿಸಿಕೊಂಡು, ಆ ದೇಶದ ವ್ಯಕ್ತಿಯೊಬ್ಬರನ್ನು ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಆಯ್ಕೆ ಮಾಡುತ್ತಾರೆ. ಬಳಿಕ ಅವರ ಆಲೋಚನೆಗಳನ್ನು ಬದಲಿಸಿ, ದೇಶಕ್ಕೆ ಹಿಂದಿರುಗಲು ಹಣ ನೀಡುತ್ತಾರೆ. ನಂತರ ದೇಶದಲ್ಲಿ ಗೊಂದಲ ಮತ್ತು ಹಾನಿ ಉಂಟುಮಾಡಲು ನೆರವಾಗುವಂತೆ ಮಾಡುತ್ತಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಪ್ರಯತ್ನಗಳಲ್ಲಿ ಯಾವುದೂ ಯಶಸ್ವಿಯಾಗಿಲ್ಲವಾದರೂ, ದೇಶದ ಅಭಿವೃದ್ಧಿ ಮತ್ತು ಆಡಳಿತದ ಮೇಲೆ ಪರಿಣಾಮ ಬೀರಿವೆ ಎಂದಿದ್ದಾರೆ.

ಭಾರತದಲ್ಲಿ ಹುಟ್ಟಿ, ಬೆಳೆದು, ಶಿಕ್ಷಣ ಪಡೆದ ಜನರು ಈಗ ಹೊಸ ಧ್ವನಿ ಎತ್ತುವ ಸಮಯ ಬಂದಿದೆ. ಕಾಕ್ರೋಚ್ ಜನತಾ ಪಾರ್ಟಿಯ ಒಡಕು ಮೂಡಿಸುವ ಮನೋಭಾವವನ್ನು ಶಾಂತಿಯುತವಾಗಿ ವಿರೋಧಿಸಲು ಜನರು ಒಂದಾಗಬೇಕು. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಕಾಪಾಡಲು ಇಂತಹ ವಿರೋಧ ಚಳವಳಿಗಳು ಯಾವಾಗಲೂ ನಡೆಯುತ್ತಿರಬೇಕು. ಯುವ ದೇಶಭಕ್ತರೇ, ಎದ್ದೇಳಿ! ಎದ್ದೇಳಿ! ಅಂತ ಕರೆ ನೀಡಿದ್ದಾರೆ.

ಮೇರಿ ಮಿಲ್ಬೆನ್ ಭಾರತಕ್ಕೆ ಬೆಂಬಲ ನೀಡುತ್ತಿರುವುದು ಇದೇ ಮೊದಲಲ್ಲ

ಅಮೆರಿಕಾದ ಗಾಯಕಿ ಮೇರಿ ಮಿಲ್ಬೆನ್ ಅವರು ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚನೆ ನೀಡುತ್ತಿರುವುದು ಇದೇ ಮೊದಲಲ್ಲ. ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿ - ಕೇಂದ್ರ ಸರ್ಕಾರಕ್ಕೆ ಈ ಹಿಂದೆಯೂ ಬೆಂಬಲ ವ್ಯಕ್ತಪಡಿಸಿದ್ದು ಇದೆ. ಕೆಲವೇ ದಿನಗಳ ಹಿಂದೆ, ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅವರು ಪ್ರಧಾನ ಮಂತ್ರಿಯನ್ನು ಅಭಿನಂದಿಸಿದರು. "ಭಾರತೀಯರ ಕನಸಿನ ಹೊಳೆಯುವ ದಾರಿದೀಪ" ಎಂದು ಮೋದಿ ಅವರನ್ನು ಬಣ್ಣಿಸಿದರು.

ಆಗಸ್ಟ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಲಿರುವ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಕಾರ್ಯಕ್ರಮವನ್ನು ವಿರೋಧಿಸುವವರನ್ನು ಮಿಲ್‌ಬೆನ್ ಟೀಕಿಸಿದ್ದರು. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿದ್ದ ಅವರು, ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿಯನ್ನು ಗುರಿಯಾಗಿಸಿಕೊಂಡು, ಮೋದಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಯನ್ನು ವಿರೋಧಿಸುತ್ತಿರುವುದರಿಂದ ವಿರೋಧಿಗಳು ಈ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಅಲ್ಲದೆ ಕಳೆದ ವರ್ಷ ಮಿಲ್‌ಬೆನ್ ಅವರು ಮೋದಿಯನ್ನು ತಮ್ಮ "ಒಳ್ಳೆಯ ಸ್ನೇಹಿತ" ಎಂದು ಕರೆದಿದ್ದರು. ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಮೋದಿ ತೋರಿದ ನಾಯಕತ್ವವನ್ನು ಹೊಗಳಿದ್ದರು. ಪ್ರಧಾನಿಯೊಂದಿಗಿನ ತಮ್ಮ ಅನುಭವಗಳು "ಮರೆಯಲಾಗದ ಮತ್ತು ಸ್ಫೂರ್ತಿ ನೀಡುವಂತಹವು" ಅಂತಲೂ ಅವರು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+