US Elections 2024: ಜಾರ್ಜ್ ವಾಷಿಂಗ್ಟನ್‌ರಿಂದ ಜೋ ಬಿಡೆನ್‌ವರೆಗೆ.. ಇಲ್ಲಿದೆ ನೋಡಿ ಅಮೆರಿಕ ಅಧ್ಯಕ್ಷರ ಪಟ್ಟಿ, ಅಧಿಕಾರವಧಿಯ ಮಾ
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಇಂದು ಆರಂಭವಾಗಿದ್ದು ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ಅದೃಷ್ಟ ಹೇಗಿದೆ ಎಂದು ಇನ್ನೇನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. ಇಂದು (ನವೆಂಬರ್ 5) ನಾಲ್ಕು ಗಂಟೆಗೆ ಚುನಾವಣೆ ಶುರುವಾಗಿದ್ದು ಬುಧವಾರ ಫಲಿತಾಂಶ ಗೊತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರ ಚಿತ್ತ ವಿಶ್ವದ ದೊಡ್ಡಣ್ಣನತ್ತ ನೆಟ್ಟಿದೆ.
ಅಮೆರಿಕಾದಲ್ಲಿ ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದವರಾದ ಡೆಮಾಕ್ರೆಟಿಕ್ ಪಾರ್ಟಿ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕ್ ಪಾರ್ಟಿ ನಾಯಕ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇವರಿಬ್ಬರಲ್ಲಿ ಯಾರನ್ನು ಅಮೆರಿಕನ್ನರು ಗೆಲ್ಲಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 4 ಗಂಟೆಯಿಂದ ಮತದಾನ ಆರಂಭವಾಗಿದ್ದು, ನಾಳೆ ಬೆಳಗ್ಗೆ 6.30ಕ್ಕೆ (ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ) ಮತದಾನ ಪೂರ್ಣಗೊಳ್ಳಲಿದೆ. ನಂತರ ಫಲಿತಾಂಶ ಪ್ರಕಟಣೆ ಆಗಬಹುದು ಅಥವಾ ಕೆಲ ದಿನಗಳ ಬಳಿಕವೂ ಫಲಿತಾಂಶ ಪ್ರಕಟವಾಗಬಹುದು. ಈ ಚುನಾವಣೆಯಲ್ಲಿ ಗೆಲ್ಲುವವರು ಅಮೆರಿಕಾದ ಅಧ್ಯಕ್ಷರಾಗಲಿದ್ದಾರೆ. ಹಾಗಾದರೆ ಅಮೆರಿಕಾದಲ್ಲಿ ಈವರೆಗೆ ಆಯ್ಕೆಯಾದ ಅಧ್ಯಕ್ಷರ ಹೆಸರು ಹಾಗೂ ಅವರ ಅಧಿಕಾರದ ಅವಧಿಯ ಮಾಹಿತಿ ತಿಳಿಯೋಣ.
ಅಧ್ಯಕ್ಷರ ಪಟ್ಟಿ ಮತ್ತು ಅಧಿಕಾರದ ಅವಧಿ:-
ಜಾರ್ಜ್ ವಾಷಿಂಗ್ಟನ್- 1789 ರಿಂದ 1797 ರ ವರೆಗೆ
ಜಾನ್ ಆಡಮ್ಸ್- 1797-1801
ಥಾಮಸ್ ಜೆಫರ್ಸನ್ | 1801-1809
ಜೇಮ್ಸ್ ಮ್ಯಾಡಿಸನ್ | 1809-1817
ಜೇಮ್ಸ್ ಮನ್ರೋ | 1817-1825
ಜಾನ್ ಕ್ವಿನ್ಸಿ ಆಡಮ್ಸ್ | 1825-1829
ಆಂಡ್ರ್ಯೂ ಜಾಕ್ಸನ್ | 1829-1837
ಮಾರ್ಟಿನ್ ವ್ಯಾನ್ ಬ್ಯೂರೆನ್ | 1837-1841
ವಿಲಿಯಂ ಹೆನ್ರಿ ಹ್ಯಾರಿಸನ್ | 1841
ಜಾನ್ ಟೈಲರ್ | 1841-1845
ಜೇಮ್ಸ್ ಕೆ. ಪೋಲ್ಕ್ | 1845-1849
ಜಚರಿ ಟೇಲರ್ | 1849-1850
ಮಿಲ್ಲಾರ್ಡ್ ಫಿಲ್ಮೋರ್ | 1850-1853
ಫ್ರಾಂಕ್ಲಿನ್ ಪಿಯರ್ಸ್ | 1853-1857
ಜೇಮ್ಸ್ ಬುಕಾನನ್ | 1857-1861
ಅಬ್ರಹಾಂ ಲಿಂಕನ್ | 1861-1865
ಆಂಡ್ರ್ಯೂ ಜಾನ್ಸನ್ | 1865-1869
ಯುಲಿಸೆಸ್ ಎಸ್. ಗ್ರಾಂಟ್ | 1869-1877
ರುದರ್‌ಫೋರ್ಡ್ ಬಿ. ಹೇಯ್ಸ್ | 1877-1881
ಜೇಮ್ಸ್ ಎ. ಗಾರ್ಫೀಲ್ಡ್ | 1881
ಚೆಸ್ಟರ್ ಎ. ಆರ್ಥರ್ | 1881-1885
ಗ್ರೋವರ್ ಕ್ಲೀವ್ಲ್ಯಾಂಡ್ | 1885-1889 / 1893-1897
ಬೆಂಜಮಿನ್ ಹ್ಯಾರಿಸನ್ | 1889-1893
ವಿಲಿಯಂ ಮೆಕಿನ್ಲಿ | 1897-1901
ಥಿಯೋಡೋರ್ ರೂಸ್ವೆಲ್ಟ್ | 1901-1909
ವಿಲಿಯಂ ಹೋವರ್ಡ್ ಟಾಫ್ಟ್ | 1909-1913
ವುಡ್ರೋ ವಿಲ್ಸನ್ | 1913-1921
ವಾರೆನ್ ಜಿ. ಹಾರ್ಡಿಂಗ್ | 1921-1923
ಕ್ಯಾಲ್ವಿನ್ ಕೂಲಿಡ್ಜ್ | 1923-1929
ಹರ್ಬರ್ಟ್ ಹೂವರ್ | 1929-1933
ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ | 1933-1945
ಹ್ಯಾರಿ ಎಸ್. ಟ್ರೂಮನ್ | 1945-1953
ಡ್ವೈಟ್ ಡಿ. ಐಸೆನ್‌ಹೋವರ್ | 1953-1961
ಜಾನ್ ಎಫ್ ಕೆನಡಿ | 1961-1963
ಲಿಂಡನ್ ಬಿ. ಜಾನ್ಸನ್ | 1963-1969
ರಿಚರ್ಡ್ ಎಂ. ನಿಕ್ಸನ್ | 1969-1974
ಜೆರಾಲ್ಡ್ ಆರ್. ಫೋರ್ಡ್ | 1974-1977
ಜಿಮ್ಮಿ ಕಾರ್ಟರ್ | 1977-1981
ರೊನಾಲ್ಡ್ ರೀಗನ್ | 1981-1989
ಜಾರ್ಜ್ ಬುಷ್ | 1989-1993
ವಿಲಿಯಂ ಕ್ಲಿಂಟನ್ | 1993-2001
ಜಾರ್ಜ್ ಬುಷ್ | 2001-2009
ಬರಾಕ್ ಒಬಾಮಾ | 2009-2017
ಡೊನಾಲ್ಡ್ ಟ್ರಂಪ್ | 2017-2021
ಜೋ. ಬಿಡೆನ್ - 2021-
ಅಮೆರಿಕದ ಅಧ್ಯಕೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಪೆನ್ಸಿಲ್ವೇನಿಯಾ, ಅರಿಜೋನಾ, ಜಾರ್ಜಿಯಾ, ಮಿಷಿಗನ್, ವಿಸ್ಕಾನ್‌ಸ್ಕಿನ್ ಮತ್ತು ನೆವಾಡದಲ್ಲಿ ಮುನ್ನಡೆ ಸಾಧಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಉತ್ತರ ಕೆರೊಲಿನಾದಲ್ಲಿ ಗೆಲುವು ಸಾಧಿಸಿದ್ದಾರೆ. ಸದ್ಯದ ಮಾಹಿತಿಯಂತೆ ಟ್ರಂಪ್ 247, ಕಮಲಾ 210 ಮತಗಳನ್ನು ಪಡೆದಿದ್ದಾರೆ. ಅಧ್ಯಕೀಯ ಹುದ್ದೆಗೇರಲು ಬೇಕಾದ ಮ್ಯಾಜಿಕ್ ನಂಬರ್ 270 ಆಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು 51.2%ರಷ್ಟು ಮತಗಳು ಪಡೆದು ಮುನ್ನಡೆ ಸಾಧಿಸಿದ್ದರೆ, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರು 47.4% ಮತಗಳನ್ನು ಪಡೆಯುವ ಮೂಲಕ ಹಿನ್ನಡೆಯಲ್ಲಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸುತ್ತಿದ್ದಂತೆ, ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ತಮ್ಮ ಚುನಾವಣಾ ರಾತ್ರಿ ಭಾಷಣವನ್ನು ರದ್ದುಗೊಳಿಸಿದ್ದಾರೆ. ಇಂದು ರಾತ್ರಿ ನಡೆಯಬೇಕಿದ್ದ ಕಮಲಾ ಹ್ಯಾರಿಸ್ ಭಾಷಣವನ್ನು ನಾಳೆಗೆ ಮುಂದೂಡಲಾಗಿದೆ ಎಂದು ಹ್ಯಾರಿಸ್ ಪರ ಪ್ರಚಾರಕರಾದ ಸೆಡ್ರಿಕ್ ರಿಚ್ಮಂಡ್ ಮಾಹಿತಿ ನೀಡಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications