ನ್ಯೂಜಿಲೆಂಡ್ ದಾಳಿಕೋರನ ಟಾರ್ಗೆಟ್‌ನಲ್ಲಿ ಭಾರತೀಯರೂ ಇದ್ದರು!

ಕ್ರೈಸ್ಟ್‌ಚರ್ಚ್, ಮಾರ್ಚ್ 16: ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಎರಡು ಮಸೀದಿಗಳ ಮೇಲೆ ಶುಕ್ರವಾರ ಗುಂಡಿನ ದಾಳಿ ನಡೆಸಿ ಸುಮಾರು 49 ಮಂದಿಯ ಹತ್ಯೆಗೆ ಕಾರಣನಾಗಿದ್ದ ಬಂದೂಕುಧಾರಿಯ ಗುರಿ ಮುಸ್ಲಿಮರು ಮಾತ್ರವೇ ಆಗಿರಲಿಲ್ಲ. ಭಾರತ ಮತ್ತು ಪೂರ್ವದ ಇತರೆ ದೇಶಗಳಿಂದ ಬಂದವರೇ ಆತನ ಟಾರ್ಗೆಟ್ ಆಗಿದ್ದರು ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.

28 ವರ್ಷದ ದುಷ್ಕರ್ಮಿ ಬ್ರೆಂಟನ್ ಟರಾಂಟ್ ಬಿಟ್ಟುಹೋಗಿರುವ 74 ಪುಟಗಳ ಪ್ರಣಾಳಿಕೆಯಲ್ಲಿ ಭಾರತ, ಚೀನಾ ಮತ್ತು ಟರ್ಕಿಯ 'ಆಕ್ರಮಣಕಾರ'ರ ಬಗ್ಗೆ ಪ್ರಸ್ತಾಪಿಸಿದ್ದು, ಪೂರ್ವ ದೇಶಗಳಲ್ಲಿನವರೇ ತಮ್ಮ ಪ್ರಮುಖ ಶತ್ರುಗಳು ಎಂದು ಉಲ್ಲೇಖಿಸಿದ್ದಾನೆ.

'ದಿ ಗ್ರೇಟ್ ರಿಪ್ಲೇಸ್‌ಮೆಂಟ್‌' ಶೀರ್ಷಿಕೆಯ ಪ್ರಣಾಳಿಕೆಯಲ್ಲಿ ಆತ, 'ಆಕ್ರಮಣಕಾರರನ್ನು ಅವರು ಎಲ್ಲಿಂದ ಬಂದರು, ಯಾವಾಗ ಬಂದರು ಎನ್ನುವುದನ್ನು ನೋಡದೆ ಯುರೋಪಿನ ನೆಲದಿಂದ ನಿರ್ಮೂಲನೆ ಮಾಡಬೇಕು. ರೋಮ, ಆಫ್ರಿಕನ್, ಇಂಡಿಯನ್, ಟರ್ಕಿಶ್, ಸೆಮಿಟಿಕ್ ಅಥವಾ ಇತರೆ ಯಾರಿದ್ದರೂ. ಅವರು ನಮ್ಮ ಜನರಲ್ಲದೆ ಇದ್ದರೆ, ಆದರೆ ನಮ್ಮ ನೆಲದಲ್ಲಿ ನೆಲೆಸಿದ್ದರೆ ಅವರನ್ನು ತೊಲಗಿಸಬೇಕು' ಎಂದು ಬರೆಯಲಾಗಿದೆ.

christchurch mosque gunman manifesto targeted invaders india china turkey

ಈ ಪ್ರಣಾಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಂತರ್ಜಾಲಗಳಲ್ಲಿ ಲಭ್ಯವಾಗುವ ಬಲಪಂಥೀಯ ವಿಚಾರಧಾರೆಗಳಿಂದ ಪ್ರಭಾವಕ್ಕೆ ಒಳಗಾಗಿದ್ದ ಆತ ತನ್ನ ನೆಲದಲ್ಲಿ ನೆಲೆಸಿರುವ ವಲಸಿಗರ ವಿರುದ್ಧ ಆಕ್ರೋಶಗೊಂಡಿದ್ದ. ತನ್ನ ಪ್ರಣಾಳಿಕೆಯಲ್ಲಿ ಪ್ರಶ್ನೋತ್ತರ ರೂಪದಲ್ಲಿ ಸುದೀರ್ಘ ಬರಹ ಬರೆದಿದ್ದ.

ಮಸೀದಿಗಳ ಮೇಲೆ ದಾಳಿ ನಡೆಸಲು ಎರಡು ವರ್ಷ ಮುಂಚೆಯೇ ಬಯಸಿದ್ದೇನೆ. ಕ್ರೈಸ್ಟ್‌ಚರ್ಚ್‌ನ ಸ್ಥಳದಲ್ಲಿ ಮೂರು ತಿಂಗಳು ಮುನ್ನವೇ ದಾಳಿ ನಡೆಸಲಿದ್ದೇನೆ. ದಾಳಿ ನಡೆಸಲು ನಿನ್ನೆ ಅತ್ಯುತ್ತಮ ದಿನವಾಗಿತ್ತು. ಅದರ ಬಳಿಕದ ಅತ್ಯುತ್ತಮ ಸಮಯ ಇಂದು. ಈ ದಾಳಿ ನಡೆಸುವ ಮುನ್ನ ತರಬೇತಿಗೆ, ಯೋಜನೆ ರೂಪಿಸಲು, ನನ್ನ ದೃಷ್ಟಿಕೋನಗಳನ್ನು ಬರೆದಿಡಲು ಮತ್ತು ದಾಳಿ ಸಂಯೋಜಿಸಲು ಸಾಕಷ್ಟು ಸಮಯ ಇದೆ ಎಂದು ಹೇಳಿಕೊಂಡಿದ್ದಾನೆ.

ನ್ಯೂಜಿಲೆಂಡ್ ನನ್ನ ದಾಳಿಯ ಮೂಲ ಆಯ್ಕೆಯಾಗಿರಲಿಲ್ಲ. ತಾತ್ಕಾಲಿಕವಾಗಿ ವಾಸಿಸುವ ಸಲುವಾಗಿ ನ್ಯೂಜಿಲೆಂಡ್‌ಗೆ ನಾನು ಬಂದಿದ್ದೆ. ಇಲ್ಲಿ ಯೋಜನೆ ರೂಪಿಸಿ ತರಬೇತಿ ಪಡೆದೆ. ಆದರೆ, ಪಶ್ಚಿಮದಲ್ಲಿ ದಾಳಿ ನಡೆಸಲು ನ್ಯೂಜಿಲೆಂಡ್ ಹೆಚ್ಚು ಸೂಕ್ತವಾದ ಸ್ಥಳ ಎಂಬುದು ಗೊತ್ತಾಯಿತು ಎಂದಿದ್ದಾನೆ.

ಮೊದಲು ಡ್ಯೂನ್‌ಡಿನ್‌ನ ಮಸೀದಿ ಗುರಿಯಾಗಿತ್ತು. ಆದರೆ, ಹೆಚ್ಚು ಆಕ್ರಮಣಕಾರರು ಇರುವ ಕ್ರೈಸ್ಟ್‌ಚರ್ಚ್‌ ಮತ್ತು ಲಿನ್‌ವುಡ್ ಅನ್ನು ಆಯ್ದುಕೊಂಡೆ. ಇಲ್ಲಿ ಹೆಚ್ಚು ವಿದೇಶಿ ಕಟ್ಟಡಗಳು, ಕಡಿಮೆ ವಿದ್ಯಾರ್ಥಿಗಳು, ಹೆಚ್ಚು ವಯಸ್ಕರು ಮತ್ತು ಉಗ್ರವಾದದ ಇತಿಹಾಸ ಇದೆ. ಈ ಮಸೀದಿಗಳ ಮೇಲಿನ ದಾಳಿ ಆಶ್‌ಬರ್ಟನ್‌ನಲ್ಲಿರುವ ಮಸೀದಿಯ ಮೇಲೆಯೂ ದಾಳಿ ನಡೆಸಲು ಅವಕಾಶ ನೀಡಿದೆ ಎಂದು ಬರೆದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+