ಸ್ವೀಟ್ ಮೇಲೆ ಜಿರಳೆಯಂಥಹ ಹುಳದ ಗಾರ್ನಿಶಿಂಗ್! ರೆಸ್ಟೋರೆಂಟಿನ ಹೊಸ ಡಿಶ್ ನೋಡಿ ಗ್ರಾಹಕರು ಸುಸ್ತು
Egg Tart : ಊಟ ತಿಂಡಿಯ ಬಗ್ಗೆ ಹೊಸ ಹೊಸ ಪ್ರಯೋಗಗಳು ನಡೀತಾ ಇರ್ತಾವೆ. ನಾವು ಮನೆಯಲ್ಲೇ ತುಂಬಾ ಬಗೆಯ ಎಕ್ಸ್ಪೆರಿಮೆಂಟ್ ಮಾಡಿತ್ತಿರುತ್ತೇವೆ. ಹಾಗೆಯೇ ಹೊಟೇಲುಗಳಲ್ಲಿ ಕೂಡಾ ಹೊಸ ಹೊಸ ಐಟಂಗಳು ಮೆನು ಸೇರುತ್ತಿರುತ್ತವೆ. ಈ ಕಾಂಪಿಟೇಶನ್ ಯುಗದಲ್ಲಿ ಗ್ರಾಹಕರನ್ನು ಹೆಚ್ಚು ಮಾಡಬೇಕಾದರೆ ಹೊಸ ಟ್ರೈ ಮಾಡುತ್ತಲೇ ಇರಬೇಕು. ಆದರೆ ಈ ಹೊಸ ಪ್ರಯತ್ನವೇ ಯಡವಟ್ಟಾದರೆ?

ಚೀನಾ ಹೊಟೇಲಿನ ಮೆನು :
ಪ್ರಪಂಚದಾದ್ಯಂತದ ಆಹಾರ ಪ್ರಿಯರು ಹೊಸ ಪ್ರಯೋಗ ಮಾಡುವುದು ಸಾಮಾನ್ಯ. ಆದರೆ ಚೀನಾದ ವಿಚಿತ್ರ ಪಾಕಪದ್ಧತಿಯ ವಿಷಯಕ್ಕೆ ಬಂದಾಗ ಮಾತ್ರ ಅಲ್ಲಿ ಸ್ವಲ್ಪ ಹುಷಾರಾಗಿರಬೇಕಾಗುತ್ತದೆ. ಇಲ್ಲಿಯ ಕೆಲವು ಆಹಾರ ತಿನ್ನುವುದು ಬಿಡಿ ನೋಡುವಾಗಲೇ ಮೈ ಜುಮ್ಮೆನ್ನುತ್ತದೆ. ಇತ್ತೀಚಿನ ದಿನಗಳಲ್ಲಿ, ಚೀನಾದ ರೆಸ್ಟೋರೆಂಟಿನ ಹೊಸ ಖಾದ್ಯ ವೈರಲ್ ಆಗ್ತಾ ಇದೆ. ಈ ಐಟಂ ನೋಡಿ ಆಹಾರ ಪ್ರಿಯರು ಕೂಡಾ ಒದು ಹೆಜ್ಜೆ ಹಿಂದೆ ಇಡುವ ಹಾಗೆ ಆಗಿದೆ. ಚೀನಾದ ನಗರವೊಂದರಲ್ಲಿ ಎಗ್ ಟಾರ್ಟ್ ಮಾಡಿ ಮಾರಲಾಗುತ್ತಿದೆ. ಇಲ್ಲಿ ವಿಶೇಷ ಇರುವುದು ಎಗ್ ಟಾರ್ಟಿನಲ್ಲಿ ಅಲ್ಲ. ಅದರ ಮೇಲೆ ಮಾಡಿರುವ ಗಾರ್ನಿಶಿಂಗಿನಲ್ಲಿ. ಈ ಗಾರ್ನಿಶಿಂಗ್ ನೋಡಿಯೇ ಜನ ಎಗ್ ಟಾರ್ಟ್ ಪ್ಲೇಟನ್ನು ದೂರ ತಳ್ಳುತ್ತಾ ಇದ್ದಾರೆಯಂತೆ.
Egg Tart ಗೆ ಹೊಸ ಟ್ವಿಸ್ಟ್ :
ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಶುಂಡೆಯಲ್ಲಿ ನಡೆದಿರುವ ಘಟನೆ ಇದು. ಇಲ್ಲಿ ಅಕ್ಟೋಬರ್ ಆರಂಭದಲ್ಲಿ, ಸ್ಥಳೀಯ ರೆಸ್ಟೋರೆಂಟ್ ತನ್ನ ಮೆನುವಿಗೆ ಹೊಸ ಖಾದ್ಯ ಸೇರಿಸಿದೆ. ಈ ಹೊಸ ಐಟಂ ಇದೀಗ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಸದ್ದು ಮಾಡ್ತಾ ಇದೆ. ಈ ರೆಸ್ಟೋರೆಂಟ್ ಫೇಮಸ್ ಪೇಸ್ಟ್ರಿ ಎಗ್ ಟಾರ್ಟಿಗೆ ಹೊಸ ಟ್ವಿಸ್ಟ್ ಕೊಟ್ಟಿದೆ. ಸಾಮಾನ್ಯವಾಗಿ ಎಗ್ ಟಾರ್ಟ್ ಮೈದಾ ಮತ್ತು ಮೊಟ್ಟೆಯ ಕಸ್ಟರ್ಡ್ ನಿಂದ ತಯಾರಿಸಿದ ತುಂಬಾ ರುಚಿಕರವಾದ ತಿಂಡಿ. ಆದರೆ ಈ ರೆಸ್ಟೋರೆಂಟ್ ಎಗ್ ಟಾರ್ಟ್ ಮೇಲೆ ದೊಡ್ಡ ಹುರಿದ ಹುಳ ಇಟ್ಟು ಗಾರ್ನಿಶ್ ಮಾಡಿದೆ. ಈ ಎಗ್ ಟಾರ್ಟಿನ ಫೋಟೋ, ವೀಡಿಯೊ ಇದೀಗ ಸೋಶಿಯಲ್ ಮಿಡಿಯಾ ತುಂಬೆಲ್ಲಾ ಹರಿದಾಡ್ತಾ ಇದೆ. ಎಲ್ಲರೂ ಇದನ್ನು ನೋಡಿ ಆಶ್ಚರ್ಯ ಪಡುತ್ತಾ ಇದ್ದಾರೆ. ಇದನ್ನು ಮೊದಲು ನೋಡುವಾಗ ಈ ಸಿಹಿತಿಂಡಿಯ ಮೇಲೆ ಜಿರಳೆ ಇಟ್ಟಂತೆ ಕಾಣಿಸುತ್ತದೆ. ಇದೇ ಕಾರಣದಿಂದ ಈ ಸ್ವೀಟಿನ ಫೋಟೋ ನೋಡಿದವರೆಲ್ಲಾ ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡ್ತಾ ಇದ್ದಾರೆ.
ವಿಚಿತ್ರ ಚೈನೀಸ್ ಭಕ್ಷ್ಯಗಳು :
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗ್ತಾ ಇದ್ದ ಹಾಗೆಯೇ ರೆಸ್ಟೋರೆಂಟ್ ಮಾಲೀಕ ಇದು ಸಾಮಾನ್ಯ ಅಥವಾ ಕೊಳಕು ಜಿರಳೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ನೀರಿನಲ್ಲಿ ವಾಸಿಸುವ ಡೈವಿಂಗ್ ಬೀಟಲ್ ಎಂದು ಹೇಳಿದ್ದಾರೆ. ದಕ್ಷಿಣ ಚೀನಾದ ಆಯ್ದ ಪ್ರದೇಶಗಳಲ್ಲಿ ಈ ಕೀಟವನ್ನು ತಿನ್ನುವ ಪ್ರಾಚೀನ ಸಂಪ್ರದಾಯವಿದೆಯಂತೆ. ಅಷ್ಟೇ ಅಲ್ಲ, ಇದರ ಬಳಕೆಯನ್ನು ಸಾಂಪ್ರದಾಯಿಕ ಚೀನೀ ಔಷಧದಲ್ಲಿಯೂ ಉಲ್ಲೇಖಿಸಲಾಗಿದೆಯಂತೆ. ಈ ಹುಳ ಚರ್ಮ ಮತ್ತು ಮೂತ್ರಪಿಂಡದ ಆರೋಗ್ಯಕ್ಕೆ ಪ್ರಯೋಜನಕಾರಿಯಂತೆ. ಮಾತ್ರವಲ್ಲ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಈ ನಂಬಿಕೆಗಳ ಹಿಂದೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಆದರೂ ಜನ ರುಚಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅದನ್ನು ಪ್ರಯತ್ನಿಸುತ್ತಾರೆ.
ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಸ್ವೀಟಿನಲ್ಲಿ ಬಳಸುವಾಗಲೂ ಕೀಟಗಳ ರೆಕ್ಕೆಗಳನ್ನು ಕತ್ತರಿಸಲಾಗುವುದಿಲ್ಲ. ಅದರ ಮೂಲ ರೂಪಕ್ಕೆ ಯಾವುದೇ ಧಕ್ಕೆ ಬರಬಾರದು ಎಂದು ಕೀಟವನ್ನು ಹಾಗೆಯೇ ಹುರಿದು ಸ್ವೀಟಿನ ಮೇಲೆ ಇಡಲಾಗುತ್ತದೆ. ಇದನ್ನು ತಿನ್ನುವಾಗ ಸ್ವೀಟ್ ಕಸ್ಟರ್ಡ್ ನ ರುಚಿ ಮತ್ತು ಕೀಟಗಳ ಉಪ್ಪು-ಕುರುಕುಲು ಸೇರಿ ಒಳ್ಳೆಯ ಕಾಂಬಿನೇಶನ್ ಎನ್ನುತ್ತಾರೆ ಈ ರೆಸ್ಟೋರೆಂಟ್ ಮಾಲೀಕ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ :
ಈ ಸುದ್ದಿ ವೈರಲ್ (viral) ಆಗುತ್ತಿದ್ದಂತೆ ಜನ ಇದರ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಒಂದು ಕಡೆ ಕೆಲವರು ಈ ಸ್ವೀಟಿನ ಫೋಟೋಗೆ ವಾಂತಿ ಮಾಡುವಂತೆ ರಿಯಾಕ್ಟ್ ಮಾಡಿದರೆ ಮತ್ತೊಂದು ಕಡೆ ಇಂಥಹ ತಿಂಡಿಯನ್ನು ತಿನ್ನುವುದು ಇರಲಿ ಯೋಚಿಸುವುದಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.


Click it and Unblock the Notifications
