• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಕ್ಷಿಪ್ರ ಕ್ರಾಂತಿ ವದಂತಿ; ಗೃಹ ಬಂಧನದಲ್ಲಿ ಚೀನಾ ಅಧ್ಯಕ್ಷ?

|
Google Oneindia Kannada News

ಬೀಚಿಂಗ್, ಸೆ. 25; ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ಆಧಾರರಹಿತ ವದಂತಿಗಳು ಹರಡುತ್ತಿದ್ದು, #ChinaCoup ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ.

ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬರಹಗಳು ಹೇಳುತ್ತಿವೆ.

ಬತ್ತಿದ ಚೀನಾದ ಅತಿ ದೊಡ್ಡ ಸರೋವರ! ಮೊದಲ ಬಾರಿಗೆ ಪೊಯಾಂಗ್‌ನಿಂದಾಗಿ ರೆಡ್ ಅಲರ್ಟ್ಬತ್ತಿದ ಚೀನಾದ ಅತಿ ದೊಡ್ಡ ಸರೋವರ! ಮೊದಲ ಬಾರಿಗೆ ಪೊಯಾಂಗ್‌ನಿಂದಾಗಿ ರೆಡ್ ಅಲರ್ಟ್

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಿಂದ ಅಧ್ಯಕ್ಷರನ್ನು ಬಂಧಿಸಲಾಗಿದೆ ಮತ್ತು ಪದಚ್ಯುತಗೊಳಿಸಲಾಗಿದೆ ಎಂದು ಸಾವಿರ ಬಳಕೆದಾರರು ದೃಢೀಕರಿಸದ ವದಂತಿಗಳನ್ನು ಹರಡುತ್ತಿದ್ದಾರೆ. ChinaCoup ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ.

ಶನಿವಾರ ಬೀಜಿಂಗ್‌ನ ರಾಜಧಾನಿಯ ಮೇಲೆ ಯಾವುದೇ ವಾಣಿಜ್ಯ ವಿಮಾನಗಳು ಹಾರಾಟ ನಡೆಸುತ್ತಿಲ್ಲ. ಬೀಜಿಂಗ್‌ನಿಂದ ಎಲ್ಲಾ ರೈಲುಗಳು ಮತ್ತು ಬಸ್‌ಗಳನ್ನು ಸಹ ರದ್ದುಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಚೀನಾದಿಂದ ಹಲವಾರು ವಿಮಾನಗಳನ್ನು ರದ್ದು

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ಆಧಾರರಹಿತ ವದಂತಿಗಳ ಬೆನ್ನಲ್ಲೇ ಅಲ್ಲಿನ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಬೀಜಿಂಗ್ ಕ್ಯಾಪಿಟಲ್ ಏರ್‌ಪೋರ್ಟ್‌ನ ವೆಬ್‌ಸೈಟ್ ಚೀನಾದ ರಾಜಧಾನಿಯಿಂದ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸುತ್ತಿದೆ. ಆದರೆ, ಇನ್ನೂ ಹಲವು ವಿಮಾನಗಳು ನಿಗದಿಯಾಗಿವೆ. ಯೋಜಿತ ಮಿಲಿಟರಿ ಕಾರ್ಯಗಳ ನಡುವೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂಬ ವರದಿಗಳೂ ಇವೆ.

ಚೀನಾದಲ್ಲಿ ಮಿಲಿಟರಿ ದಂಗೆ ವರದಿಗಳ ವಿಡಿಯೋಗಳು ವೈರಲ್

ಚೀನಾದಲ್ಲಿ ಮಿಲಿಟರಿ ದಂಗೆ ವರದಿಗಳ ವಿಡಿಯೋಗಳು ವೈರಲ್

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಿಲಿಟರಿ ದಂಗೆಯ ವರದಿಗಳ ಮಧ್ಯೆ ಸೆಪ್ಟೆಂಬರ್ 22 ರಂದು ಬೀಜಿಂಗ್‌ಗೆ ತೆರಳಲು 80 ಕಿಲೋಮೀಟರ್ ಉದ್ದ ಮಿಲಿಟರಿ ವಾಹನಗಳು ನಿಂತಿರುವ ಸಾಲು ತೋರಿಸುತ್ತಿದೆ.

ಆದರೆ, ವಿಡಿಯೋವು ಒಂದು ನಿಮಿಷಕ್ಕಿಂತ ಕಡಿಮೆ ಇದ್ದು, ಮಿಲಿಟರಿ ವಾಹನಗಳ ಸಾಲು 80 ಕಿಮೀ ವಿಸ್ತರಿಸಿದೆಯೇ ಎಂಬುದನ್ನು ವಿಡಿಯೋ ತೋರಿಸುವುದಿಲ್ಲ. ಇದನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿಲ್ಲ. ಜೊತೆಗೆ ಮಿಲಿಟರಿ ದಂಗೆಯ ಭಾಗವಾಗಿ ಬೆಂಗಾವಲು ಬೀಜಿಂಗ್‌ಗೆ ಹೋಗುತ್ತಿದೆ ಎಂಬುದನ್ನು ವಿಡಿಯೋ ದೃಢೀಕರಿಸಿಲ್ಲ.

ವದಂತಿಗಳು ಸಂಪೂರ್ಣ ಸುಳ್ಳು ಎಂದು ರಕ್ಷಣಾ ಇಲಾಖೆ ಅಧಿಕಾರಿ

ವದಂತಿಗಳು ಸಂಪೂರ್ಣ ಸುಳ್ಳು ಎಂದು ರಕ್ಷಣಾ ಇಲಾಖೆ ಅಧಿಕಾರಿ

ವದಂತಿಯನ್ನು ಭಾರತೀಯ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಅವರು ಶನಿವಾರದಂದು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

"ಹೊಸ ವದಂತಿಯನ್ನು ಪರಿಶೀಲಿಸಲಾಗುವುದು: ಬೀಜಿಂಗ್‌ನಲ್ಲಿ ಕ್ಸಿ ಜಿಂಗ್‌ಪಿಂಗ್ ಗೃಹಬಂಧನದಲ್ಲಿದ್ದಾರೆಯೇ? ಕ್ಸಿ ಅವರು ಇತ್ತೀಚೆಗೆ ಸಮರ್‌ಕಂಡ್‌ನಲ್ಲಿದ್ದಾಗ, ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕರು ಕ್ಸಿ ಅವರನ್ನು ಪಕ್ಷದ ಸೇನೆಯ ಉಸ್ತುವಾರಿಯಿಂದ ತೆಗೆದುಹಾಕಬೇಕಿತ್ತು. ನಂತರ ಈ ಗೃಹಬಂಧನ ಮಾಡಲಾಗಿದೆ. ವದಂತಿಯೂ ಹಾಗೆಯಿದೆ" ಎಂದಿದ್ದಾರೆ.

ಟ್ವೀಟ್‌ಗಳ ಸರಣಿಯಲ್ಲಿ, ಚೀನಾ, ತೈವಾನ್ ಮತ್ತು ಮಂಗೋಲಿಯಾ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಡ್ರೂ ಥಾಂಪ್ಸನ್, ವದಂತಿಗಳನ್ನು "ಸಂಪೂರ್ಣ ಸುಳ್ಳು" ಎಂದು ವಿವರಿಸಿದ್ದಾರೆ.

ಈ ವದಂತಿಗಳಿಗೆ ಯಾವುದೇ ಪುರಾವೆಗಳಿಲ್ಲ

ಈ ವದಂತಿಗಳಿಗೆ ಯಾವುದೇ ಪುರಾವೆಗಳಿಲ್ಲ

ವಿಶ್ವ ವ್ಯವಹಾರಗಳ ಅಂಕಣಕಾರ ಮತ್ತು ಮಾಜಿ CNN ವರದಿಗಾರ ಫ್ರಿಡಾ ಘಿಟಿಸ್ ಕೂಡ ಚೀನಾದಿಂದ ಹೊರಬರುತ್ತಿರುವ " ವದಂತಿಗಳನ್ನು" ತಳ್ಳಿಹಾಕಿದ್ದಾರೆ.

"ಚೀನಾದಲ್ಲಿ ದಂಗೆ ನಡೆದಿದೆ, ಕ್ಸಿ ಜಿನ್‌ಪಿಂಗ್ ಗೃಹಬಂಧನದಲ್ಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಇದು ನಿಜ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ"ಎಂದಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಜಿನ್‌ಪಿಂಗ್ ಮಾತುಕತೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಜಿನ್‌ಪಿಂಗ್ ಮಾತುಕತೆ

ಚೀನಾ ಅಧ್ಯಕ್ಷ ಕ್ಸಿ ಅವರು ಇತ್ತೀಚೆಗೆ ಉಜ್ಬೇಕಿಸ್ತಾನ್‌ನದ ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಕ್ಸಿ ಅವರ ಗೃಹ ಬಂಧನದ ಬಗ್ಗೆ ಹಲವಾರು ಟ್ವೀಟ್‌ಗಳು ಬರುತ್ತಿವೆ. ಈಗಾಗಲೇ ಚೀನಾ ಮಿಲಿಟರಿ ಸ್ವಾಧೀನವಾಗಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ ವಾಹನಗಳು ಬೀಜಿಂಗ್‌ನ ದಾರಿಯಲ್ಲಿ ಚಲಿಸುತ್ತಿವೆ ಎಂದು ಕೆಲವರು ಹೇಳಿದ್ದಾರೆ.

English summary
Online rumours spread that Chinese President Xi Jinping under house arrest; China is in the midst of a military coup. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X