ತೈವಾನ್ ಟೆನ್ಷನ್ ಹೆಚ್ಚಿಸಿದ ಚೀನಾ ಸಮರಾಭ್ಯಾಸ: ದ್ವೀಪ ರಾಷ್ಟ್ರದಲ್ಲಿ ಆತಂಕ
ಪಶ್ಚಿಮಾತ್ಯ ದೇಶಗಾಳದ ರಷ್ಯಾ ಹಾಗೂ ಉಕ್ರೇನ್‌ನಲ್ಲಿ ಯುದ್ಧದ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸಕಿ ಅವರನ್ನು ಹತ್ಯೆ ಮಾಡಲು, ರಷ್ಯಾ ಅಧ್ಯಕ್ಷ ಪುಟೀನ್ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಉಕ್ರೇನ್ ಗುಪ್ತಚರ ಇಲಾಖೆ ರಷ್ಯಾ ಪ್ಲ್ಯಾನ್ ಉಲ್ಟಾ ಮಾಡಿತ್ತು. ಈಗ ಏಷ್ಯಾ ಖಂಡದಲ್ಲಿ ಯುದ್ಧ ಭೀತಿ ಎದುರಾಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಪ್ರಮಾಣ ವಚನ ಸ್ವೀಕರಿಸುವ ವೇಳೆ ಅವರಿಗೆ ಉಡುಗೊರೆಯಾಗಿ ಉಕ್ರೇನ್‌ನ ಅಧ್ಯಕ್ಷರ ಹತ್ಯೆ ಪ್ರಾಣ ತೆಗೆಯುವ ಆಸೆ ಮಣ್ಣು ಪಾಲಾಗಿದೆ. ಇದೇ ರೀತಿ ತೈವಾನ್‌ನಲ್ಲಿ ನೂತನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಿದ ವೇಳೆಯೂ ಚೀನಾ ತನ್ನ ಉದ್ಧಟ ತನವನ್ನು ಪ್ರದರ್ಶಿಸಿದರು.

ಚೀನಾ ಎಲ್ಲಿ ಸಮರಾಭ್ಯಾಸ
ತೈವಾನ್‌ನಲ್ಲಿ ನೂತನ ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಚೀನಾ ದ್ವೀಪ ರಾಷ್ಟ್ರದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇದೀಗ ಚೀನಾದ ಸೇನೆಯು ಗುರುವಾರ ತೈವಾನ್ ಸುತ್ತ ಎರಡು ದಿನಗಳ ಬೃಹತ್ "ಶಿಕ್ಷಾ ವ್ಯಾಯಾಮ" ಆರಂಭಿಸಿದೆ. ಇದು ತೈವಾನ್‌ನಲ್ಲಿ ಸಂಚಲನ ಮೂಡಿಸಿದೆ. ಅದರ ಸೇನೆ, ನೌಕಾಪಡೆ, ವಾಯುಪಡೆ ಮತ್ತು ರಾಕೆಟ್ ಫೋರ್ಸ್ ಈ ಶಿಕ್ಷೆಯ ಅಭ್ಯಾಸದಲ್ಲಿ ಭಾಗವಹಿಸುತ್ತಿವೆ. ತೈವಾನ್ ಜಲಸಂಧಿ, ತೈವಾನ್ ದ್ವೀಪದ ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗಗಳು, ಕಿನ್ಮೆನ್, ಮಾಟ್ಸು, ವುಕಿಯು ಜೊತೆಗೆ ಡಾಂಗ್ಯಿನ್ ದ್ವೀಪದ ಹತ್ತಿರದ ಪ್ರದೇಶಗಳು ಸೇರಿವೆ.
ಮಿಲಿಟರಿ ಸೇವೆಗಳು ಜಂಟಿ ಸಮರಾಭ್ಯಾಸವನ್ನು ನಡೆಸುತ್ತಿವೆ ಎಂದು ಚೀನಾ ಸೇನೆಯ ಈಸ್ಟರ್ನ್ ಥಿಯೇಟರ್ ಕಮಾಂಡ್‌ನ ವಕ್ತಾರ ಲಿ ಕ್ಸಿ ಹೇಳಿದ್ದಾರೆ. ಇದು ಗುರುವಾರದಿಂದ ಶುಕ್ರವಾರದವರೆಗೆ ನಡೆಯಲಿದ್ದು, ಈ ಮಿಲಿಟರಿ ಡ್ರಿಲ್‌ಗೆ ಸಂಬಂಧಿಸಿದ ಕಾರ್ಯಾಚರಣೆಯ ಕೋಡ್ ಹೆಸರು ಜಂಟಿ ಸ್ವೋರ್ಡ್-2024 ಎ. ಎಂದು ಇಟ್ಟಿದೆ.
ತೈವಾನ್ ಬಳಿಯ ಪ್ರದೇಶದಲ್ಲಿ ಹಡಗುಗಳು ಮತ್ತು ವಿಮಾನಗಳು ಗಸ್ತು ತಿರುಗಲಿವೆ ಎಂದು ತಿಳಿಸಿದರು. ತೈವಾನ್ ಸುತ್ತಲೂ ಚೀನೀ ಮಿಲಿಟರಿಯ ಹೆಚ್ಚುತ್ತಿರುವ ಉಪಸ್ಥಿತಿಯು ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಚೀನಾದೊಂದಿಗೆ ತೈವಾನ್‌ನ ಸಂಘರ್ಷ ಹೆಚ್ಚುತ್ತಿರುವ ಸಮಯದಲ್ಲಿ ಜಂಟಿ ಮಿಲಿಟರಿ ಕವಾಯತು ನಡೆಸಲಾಗುತ್ತಿದೆ.
ಚೀನೀ ಸೇನೆಯ ಪರವಾಗಿ, ಈ ಸಮರಾಭ್ಯಾಸವನ್ನು ತೈವಾನ್ ಜಲಸಂಧಿ, ಉತ್ತರ, ದಕ್ಷಿಣ ಮತ್ತು ತೈವಾನ್ ದ್ವೀಪದ ಪೂರ್ವದಲ್ಲಿ ಹಾಗೂ ಕಿನ್ಮೆನ್, ಮಾಟ್ಸು, ವುಕಿಯು ಮತ್ತು ಡಾಂಗ್ಯಿನ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ. ಇದು ತೈವಾನ್‌ನಲ್ಲಿ ಕೋಲಾಹಲ ಸೃಷ್ಟಿಸಿದೆ.












Click it and Unblock the Notifications