ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

China Covid News : ಕೊರೊನಾ ಕೇಕೆ: ಚೀನಾದಲ್ಲಿ ಜನರು ಸಾವಿನ ಮನೆ ಸೇರುವುದು ಏಕೆ?

|
Google Oneindia Kannada News

ಬೀಜಿಂಗ್, ಡಿಸೆಂಬರ್ 21: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗನ್ನು ಜಗತ್ತಿಗೆ ಪಸರಿಸಿದ ಚೀನಾದಲ್ಲಿ ಮತ್ತೊಮ್ಮೆ ಮಹಾಮಾರಿ ಅಟ್ಟಹಾಸ ತೋರುತ್ತಿದೆ. ಚೀನಾ ನೆಲದಲ್ಲಿ ಕೋವಿಡ್-19 ಹೊಸ ಅಲೆ ಆತಂಕವನ್ನು ಸೃಷ್ಟಿಸಿದೆ.

"ಕಡಿಮೆ ವ್ಯಾಕ್ಸಿನೇಷನ್ ಮತ್ತು ಬೂಸ್ಟರ್ ಡೋಸ್ ಮತ್ತು ಹೈಬ್ರಿಡ್ ವಿನಾಯಿತಿ ಕೊರತೆಯಿಂದಾಗಿ ಚೀನಾ ಸರ್ಕಾರವು ಜೀರೋ ಕೋವಿಡ್-19 ನೀತಿಯನ್ನು ತೆಗೆದುಹಾಕಿದರೆ 13 ರಿಂದ 21 ಲಕ್ಷ ಜನರ ಜೀವಕ್ಕೆ ಕುತ್ತು ಎದರಾಗಲಿದೆ," ಎಂದು ಲಂಡನ್ ಮೂಲದ ಜಾಗತಿಕ ಆರೋಗ್ಯ ಗುಪ್ತಚರ ಮತ್ತು ವಿಶ್ಲೇಷಣಾ ಸಂಸ್ಥೆಯು ಎಚ್ಚರಿಕೆ ನೀಡಿದೆ.

ಪ್ರಧಾನಿ ಬಾಯಲ್ಲಿ 'ಚೀನಾ' ಪದವೇ ಹೊರಡುವುದಿಲ್ಲ ಏಕೆ; ಕಾಂಗ್ರೆಸ್ ಪ್ರಶ್ನೆ ಪ್ರಧಾನಿ ಬಾಯಲ್ಲಿ 'ಚೀನಾ' ಪದವೇ ಹೊರಡುವುದಿಲ್ಲ ಏಕೆ; ಕಾಂಗ್ರೆಸ್ ಪ್ರಶ್ನೆ

ಚೀನಾದಲ್ಲಿ ಮತ್ತೊಮ್ಮೆ ಹುಟ್ಟಿಕೊಂಡಿರುವ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಸಾವಿನ ನಗಾರಿ ಬಾರಿಸುವುದಕ್ಕೂ ಹಲವು ಕಾರಣಗಳಿವೆ. ಒಂದು ಕಡೆಯಲ್ಲಿ ಸರ್ಕಾರದ ನಿರ್ಲಕ್ಷ್ಯವು ಎದ್ದು ಕಾಣುತ್ತಿದ್ದರೆ, ಇನ್ನೊಂದು ಮಗ್ಗಲಿನಲ್ಲಿ ಸಾರ್ವಜನಿಕರ ನಿರ್ಲಕ್ಷ್ಯವೂ ಕಾಣಿಸಿಕೊಳ್ಳುತ್ತಿದೆ. ವೈದ್ಯಕೀಯ ಸಂಶೋಧನೆಯಲ್ಲೂ ಚೀನಾದ ಲಸಿಕೆಯು ಅಷ್ಟಾಗಿ ಪರಿಣಾಮಕಾರಿಯಾಗಿ ಇಲ್ಲ ಎಂಬುದು ಸಾಬೀತಾಗಿದೆ. ಇಡೀ ಜಗತ್ತು ಇದೀಗ ಮತ್ತೊಮ್ಮೆ ಚೀನಾದ ಕಡೆಗೆ ತಿರುಗಿ ನೋಡುವಂತಾಗಿದೆ.

ಕೊರೊನಾವೈರಸ್ ಚೀನಾದಲ್ಲಿ ಸಾವಿನ ಕೇಕೆ ಹಾಕುವುದೇಕೆ?

ಕೊರೊನಾವೈರಸ್ ಚೀನಾದಲ್ಲಿ ಸಾವಿನ ಕೇಕೆ ಹಾಕುವುದೇಕೆ?

ಏರ್‌ಫಿನಿಟಿಯ ವಿಶ್ಲೇಷಣೆಯ ಪ್ರಕಾರ, "ಚೀನಾದ ಜನಸಂಖ್ಯೆಯಲ್ಲಿ ಬಹಳ ಕಡಿಮೆ ಮಟ್ಟದ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಅದರ ನಾಗರಿಕರು ದೇಶೀಯವಾಗಿ ತಯಾರಿಸಿದ ಸಿನೊವಾಕ್ ಮತ್ತು ಸಿನೋಫಾರ್ಮ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇದು ಗಮನಾರ್ಹವಾಗಿ ಕಡಿಮೆ ಪರಿಣಾಮಕಾರಿತ್ವವನ್ನು ಹೊಂದಿದೆ. ಜೊತೆಗೆ ಸೋಂಕು ಮತ್ತು ಸಾವಿನ ವಿರುದ್ಧ ಕಡಿಮೆ ರಕ್ಷಣೆ ನೀಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಚೀನಾದಲ್ಲಿ ಶೂನ್ಯ-ಕೋವಿಡ್-19 ತಂತ್ರಗಾರಿಕೆ ಎಫೆಕ್ಟ್

ಚೀನಾದಲ್ಲಿ ಶೂನ್ಯ-ಕೋವಿಡ್-19 ತಂತ್ರಗಾರಿಕೆ ಎಫೆಕ್ಟ್

ಶೂನ್ಯ-ಕೊವಿಡ್-19 ಕುರಿತಾಗಿ ಚೀನಾದ ರೂಪಿಸಿದ ತಂತ್ರಗಾರಿಕೆಯು ಫೇಲ್ ಆಗಿದೆ. ಅಂದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗಿಂತಲೂ ಪೂರ್ವದಲ್ಲಿ ಸ್ವಾಭಾವಿಕವಾಗಿ ಜನರು ತಮ್ಮಲ್ಲಿನ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಜಾಗತಿಕ ಆರೋಗ್ಯ ಗುಪ್ತಚರ ಕಂಪನಿಯು ಹೇಳಿದೆ. ಒಂದು ವಿಶ್ಲೇಷಣೆಯ ಪ್ರಕಾರ, "ಕಳೆದ ಫೆಬ್ರವರಿ ತಿಂಗಳಿನಲ್ಲಿ ಹಾಂಗ್ ಕಾಂಗ್‌ನಲ್ಲಿ ಸೃಷ್ಟಿಯಾಗಿದ್ದ ಕೋವಿಡ್-19 ಅಲೆಯ ರೀತಿಯಲ್ಲೇ ಚೀನಾದಲ್ಲೂ ಹೊಸ ಅಲೆ ಹುಟ್ಟಿಕೊಂಡರೆ ಅಪಾಯ ದುಪ್ಪಟ್ಟಾಗುತ್ತದೆ. ಆ ಅಂಕಿ-ಅಂಶಗಳ ಪ್ರಕಾರ ನೋಡುವುದಾದರೆ ಚೀನಾದಲ್ಲಿ 167 ರಿಂದ 279 ಮಿಲಿಯನ್ ಕೋವಿಡ್-19 ಪ್ರಕರಣಗಳು ವರದಿಯಾಗಲಿದ್ದು, ಅದೇ ಅವಧಿಯಲ್ಲಿ 1.3 ರಿಂದ 2.1 ಮಿಲಿಯನ್ ಸಾವಿನ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ."

ಕೊರೊನಾದಿಂದ ತಪ್ಪಿಸಿಕೊಳ್ಳಲು ಲಸಿಕೆ ಬಳಸಿ

ಕೊರೊನಾದಿಂದ ತಪ್ಪಿಸಿಕೊಳ್ಳಲು ಲಸಿಕೆ ಬಳಸಿ

ಚೀನಾ ಸರ್ಕಾರವು ತನ್ನ ಶೂನ್ಯ-COVID ನೀತಿಯನ್ನು ತೆಗೆದುಹಾಕಲು ಹಾಗೂ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವ್ಯಾಕ್ಸಿನೇಷನ್‌ಗಳನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಅದರ ವಯಸ್ಸಾದ ಜನರಿಗೆ ಲಸಿಕೆ ನೀಡುವುದು ತೀರಾ ಅವಶ್ಯಕತವಾಗಿದೆ. ತದನಂತರ ಕನಿಷ್ಠ ಪ್ರಭಾವದೊಂದಿಗೆ ಭವಿಷ್ಯದ ಅಲೆಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಚೀನಾವು ಹೈಬ್ರಿಡ್ ಇಮ್ಯುನಿಟಿಯನ್ನು ಸೃಷ್ಟಿಸಬೇಕಾದ ಅಗತ್ಯವಿರುತ್ತದೆ," ಎಂದು ಏರ್‌ಫಿನಿಟಿಯ ಲಸಿಕೆಗಳು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಮುಖ್ಯಸ್ಥ ಡಾ ಲೂಯಿಸ್ ಬ್ಲೇರ್ ಸಲಹೆ ನೀಡಿದ್ದಾರೆ.

ಕೊರೊನಾವೈರಸ್ ವಿರುದ್ಧ ಪ್ರತಿರಕ್ಷೆ ನೀಡಲು ಸೂಚನೆ

ಕೊರೊನಾವೈರಸ್ ವಿರುದ್ಧ ಪ್ರತಿರಕ್ಷೆ ನೀಡಲು ಸೂಚನೆ

ಇತರ ದೇಶಗಳು ಮತ್ತು ಪ್ರದೇಶಗಳಲ್ಲಿ ಕೊರೊನಾವೈರಸ್ ಪರಿಣಾಮಕಾರಿ ಎಂದು ಸಾಬೀತಾಗಿದೆ; ಉದಾಹರಣೆಗೆ ಕೋವಿಡ್-19 ಕಾಣಿಸಿಕೊಳ್ಳುವುದರ ಮೊದಲೇ ಹಾಂಗ್ ಕಾಂಗ್ ನಲ್ಲಿ ದುರ್ಬಲರಿಗೆ ಲಸಿಕೆ ಹಾಕಲಾಯಿತು. ಆ ಮೂಲಕ ಮೊದಲ ಕೊರೊನಾವೈರಸ್ ಅಲೆಯನ್ನು ಕುಂಠಿತಗೊಳಿಸಲಾಯಿತು. ಸಾಮೂಹಿಕ ಸೋಂಕಿನಿಂದ ಹೈಬ್ರಿಡ್ ಪ್ರತಿರಕ್ಷೆಯಿಂದ ಅದರ ರಕ್ಷಣೆಯನ್ನು ಹೆಚ್ಚಿಸಲಾಗಿದೆ.

ಕಳೆದ ಸೋಮವಾರ ಚೀನಾದ ಆರೋಗ್ಯ ಅಧಿಕಾರಿಗಳು ಬೀಜಿಂಗ್‌ನಲ್ಲಿ ಕೊರೊನಾವೈರಸ್ ಸೋಂಕಿನಿ ಇಬ್ಬರು ಮೃತಪಟ್ಟ ಬಗ್ಗೆ ಘೋಷಿಸಿದರು. ಇದು ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಾರಂಭದ ನಂತರ ಅದರ ಕೆಟ್ಟ ಪರಿಸ್ಥಿತಿಗೆ ಸಾಕ್ಷಿಯಾಯಿತು. ಡಿಸೆಂಬರ್ 7ರಂದು ನಿರ್ಬಂಧಗಳನ್ನು ನಾಟಕೀಯವಾಗಿ ಸಡಿಲಿಸಿದ ನಂತರ ಅಧಿಕೃತವಾಗಿ ವರದಿಯಾದ ಮೊದಲ ಸಾವುಗಳು ಎಂದು ವರದಿಯಾಗಿದೆ.

English summary
China's lifting of Covid lockdown could kill 2.1 million people says Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X