Get Updates
Get notified of breaking news, exclusive insights, and must-see stories!

ಕೆಣಕಬೇಡಿ ಹುಷಾರ್: ಅಮೆರಿಕ ಅಧ್ಯಕ್ಷರಿಗೆ ಚೀನಾ ನೀತಿಪಾಠ!

ಬೀಜಿಂಗ್: ಉತ್ತರ ಕೊರಿಯಾ ನಾಶವಾಗುತ್ತೆ ಎಂಬ ರೀತಿ ಮಾತಾಡಿದ್ದ ಅಮೆರಿಕಗೆ ಚೀನಾ ತಿರುಗೇಟು ನೀಡಿದೆ. ಕಿಮ್ ಪರ ಮಾತನಾಡಿರುವ ಚೀನಾ, ವಿಶ್ವದ ದೊಡ್ಡಣ್ಣನಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, 3ನೇ ಮಹಾಯುದ್ಧದ ಭಯಕ್ಕೆ ಹೊಸ ವಿಚಾರ ಸೇರ್ಪಡೆಯಾಗಿದೆ. ಹಾಗಾದರೆ ಅಮೆರಿಕ ವಿರುದ್ಧ ಚೀನಾ ರೊಚ್ಚಿಗೆದ್ದಿದ್ದು ಏಕೆ? ಆ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.

ಅಮೆರಿಕದ ವರ್ತನೆಯೇ ಹಾಗೆ, ಪ್ರತಿ ಬಾರಿ ಸುಮ್ಮನೆ ಇರುವ ದೇಶಗಳನ್ನ ಕೆಣಕುವುದು. ಅವರು ತಿರುಗಿಬಿದ್ದ ನಂತರ ಯುದ್ಧ ಸಾರುವುದು. ಆಗ ಯುದ್ಧ ಸಾರಿದ ನಂತರ ಆ ದೇಶವನ್ನ ಕೊಳ್ಳೆ ಹೊಡೆಯುವುದು. ಅಂದಹಾಗೆ ಈ ಮಾತನ್ನ ನಾವು ಹೇಳುತ್ತಿಲ್ಲ, ಜಗತ್ತಿನಾದ್ಯಂತ ಅಮೆರಿಕ ವಿರುದ್ಧ ಇಂತಹ ಗಂಭೀರ ಆರೋಪಗಳನ್ನ ಅವರ ವಿರೋಧಿ ದೇಶಗಳು ಮಾಡುತ್ತಾ ಬಂದಿವೆ ಈಗ ಮತ್ತೆ ಅಂತಹ ಆರೋಪ ಕೇಳಿಬಂದಿದ್ದು, ಉತ್ತರ ಕೊರಿಯಾಗೆ ಎಚ್ಚರಿಕೆ ನೀಡಿ ಪ್ರಚೋದನೆ ಕೊಡಬೇಡಿ ಅಂತಾ ಅಮೆರಿಕ ವಿರುದ್ಧ ಗರಂ ಆಗಿದೆ ಚೀನಾ.

China advised to America to clear the problem with North Korea peacefully

ಅಮೆರಿಕ ಅಧ್ಯಕ್ಷರಿಗೆ ಬುದ್ಧಿ ಹೇಳಿದ ಚೀನಾ!

ಹೌದು, ಕಿಮ್ ಜಾಂಗ್ ಉನ್ ಪರಮಾಣು ಅಸ್ತ್ರಗಳನ್ನ ಪ್ರಯೋಗ ಮಾಡಲಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಮೆರಿಕ ವಾರ್ನಿಂಗ್ ಕೊಟ್ಟಿತ್ತು. ಅಕಸ್ಮಾತ್ ಉತ್ತರ ಕೊರಿಯಾ ಸರ್ವಾಧಿಕಾರಿ ಅಮೆರಿಕ ಅಥವಾ ಅದರ ಮಿತ್ರರ ಮೇಲೆ ನ್ಯೂಕ್ಲಿಯರ್ ಬಾಂಬ್ ಹಾಕಿದರೆ ಕ್ಷಣಮಾತ್ರದಲ್ಲಿ ಉತ್ತರ ಕೊರಿಯಾ ನಾಶವಾಗಲಿದೆ ಎಂದು ದೊಡ್ಡಣ್ಣ ಅಮೆರಿಕ ವಾರ್ನಿಂಗ್ ಕೊಟ್ಟಿತ್ತು. ಇದೀಗ ಅಮೆರಿಕದ ಎಚ್ಚರಿಕೆಗೆ ಚೀನಾ ಸವಾಲು ಹಾಕಿದೆ. ಈ ಮೂಲಕ ತನ್ನ ಮಿತ್ರ ಉತ್ತರ ಕೊರಿಯಾ ಪರ ಮಾತನಾಡಿದೆ ಚೀನಾ.

ಸುಮ್ಮನೆ ಕಿಮ್‌ನ ಕೆಣಕಬೇಡಿ ಹುಷಾರ್!

ಅಮೆರಿಕ ಕೊಟ್ಟ ಎಚ್ಚರಿಕೆ ಪ್ರಕಾರ, ಪರಮಾಣು ಬಾಂಬ್ ಹಾಕಿದ ದಿನವೇ ಕಿಮ್ ಜಾಂಗ್ ಉನ್ ಆಡಳಿತ ಕೊನೆಯಾಗಲಿದೆ ಎಂದಿತ್ತು. ಇನ್ನು ಅಮೆರಿಕದ ಈ ಮಾತಿಗೆ ಚೀನಾ ಪ್ರತಿಕ್ರಿಯೆ ನೀಡಿದ್ದು ಉತ್ತರ ಕೊರಿಯಾ ಜೊತೆ ಯಾವುದೇ ಸಮಸ್ಯೆ ಇದ್ದರೂ ಕೂತು ಮಾತನಾಡಿ ಪರಿಹರಿಸಿಕೊಳ್ಳಿ. ಅದನ್ನ ಬಿಟ್ಟು ಎಚ್ಚರಿಕೆ ನೀಡುವುದು, ಪ್ರಚೋದನೆ ಕೊಡುವುದನ್ನು ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದಿದೆ ಚೀನಾ. ಇದು ಅಮೆರಿಕದ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಚೀನಾ ಹೇಳಿಕೆಗೆ ತಕ್ಕ ತಿರುಗೇಟು ನೀಡಲು ಅಮೆರಿಕ ಸಜ್ಜಾಗಿದೆ.

ಪರೋಕ್ಷವಾಗಿ ಚೀನಾ ಯುದ್ಧದ ಸೂಚನೆ?

ಇದೀಗ ಚೀನಾ ಅಮೆರಿಕಗೆ ಕೊಟ್ಟಿರುವ ಎಚ್ಚರಿಕೆಯನ್ನ ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲೊಂದು ಒಳಮರ್ಮ ಇರೋದು ಗ್ಯಾರಂಟಿ. ಅಮೆರಿಕ ಕೂಡ ಚೀನಾಗೆ ಕಾಟ ಕೊಡುತ್ತಲೇ ಇದೆ. ಚೀನಾ ಶತ್ರು ರಾಷ್ಟ್ರಗಳನ್ನ ಬುಟ್ಟಿಗೆ ಹಾಕಿಕೊಂಡು, ಚೀನಾ ವಿರುದ್ಧ ತಿರುಗಿಬೀಳುವಂತೆ ಮಾಡುತ್ತಿದೆ. ಇಷ್ಟೆಲ್ಲದರ ಮಧ್ಯೆ ಉತ್ತರ ಕೊರಿಯಾಗೆ ಅಮೆರಿಕ & ದೊಡ್ಡಣ್ಣನ ಫ್ರೆಂಡ್ಸ್ ಸಿಕ್ಕಾಪಟ್ಟೆ ಕಾಟ ಕೊಡುತ್ತಿದ್ದಾರೆ ಎಂಬ ಆರೋಪ ಮಾಡಿದೆ ಚೀನಾ. ಈ ಮೂಲಕ ಅಮೆರಿಕ ಏನಾದರೂ ಉತ್ತರ ಕೊರಿಯಾ ಮುಟ್ಟಿದರೆ, ಚೀನಾ ಸುಮ್ಮನಿರಲ್ಲ ಎಂಬ ಹೇಳಿಕೆ ನೀಡಿದಂತಿದೆ ಚೀನಾ ಮಾತಿನ ಶೈಲಿ.

China advised to America to clear the problem with North Korea peacefully

ಮೊದಲೇ ತಿಕ್ಕಲು, ಏನಾಗುತ್ತೋ ಗೊತ್ತಿಲ್ಲ!

ಹೌದು, ಉತ್ತರ ಕೊರಿಯಾ ಸರ್ವಾಧಿಕಾರಿ ಮೊದಲೇ ತಿಕ್ಕಲು ಮನುಷ್ಯ. ಇಂತಹ ಮನುಷ್ಯನಿಗೆ ಅಮೆರಿಕ ಈ ರೀತಿ ಎಚ್ಚರಿಕೆ ನೀಡಿದೆ. ಹೀಗಾಗಿ ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ತನ್ನ ಬಳಿ ನೂರಾರು ಪರಮಾಣು ಕ್ಷಿಪಣಿಗಳನ್ನ ಇಟ್ಟುಕೊಂಡು ಕಾಯುತ್ತಿದ್ದಾನೆ ಉತ್ತರ ಕೊರಿಯಾ ಸರ್ವಾಧಿಕಾರಿ. ಈ ಹೊತ್ತಲ್ಲೇ ಅಮೆರಿಕ ಧಮ್ಕಿ ಹಾಕಿರೋದು ಕಿಮ್ ಜಾಂಗ್ ಉನ್‌ಗೆ ಹಾವಿನ ಬಾಲ ತುಳಿದಂತಾಗಿದೆ. ಇದಕ್ಕೆ ಮತ್ತೆ ಯಾವ ಮಿಸೈಲ್ ಮೂಲಕ ಕಿಮ್ ಜಾಂಗ್ ಉನ್ ಉತ್ತರ ಕೊಡುತ್ತಾನೋ ಗೊತ್ತಿಲ್ಲ.

ಉ.ಕೊರಿಯಾ ಬಳಿ ಡೆಡ್ಲಿ ವೆಪನ್ಸ್

ಸರ್ವಾಧಿಕಾರಿ ಕಿಮ್ ಸುಲಭವಾಗಿ ಪತ್ತೆ ಮಾಡಲು ಆಗದ ಮತ್ತು ಶತ್ರುಗಳ ನೆಲ ಸರ್ವನಾಶ ಮಾಡಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ ಕೆಲ ದಿನದಲ್ಲಿ ಗುಪ್ತಚರ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದ್ದಾನೆ. ಘನ-ಇಂಧನ ಬಳಸಿಕೊಂಡು ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ಸಿಕ್ಕಿದೆ. ಈ ಹೊತ್ತಲ್ಲೇ ಶತ್ರುಗಳ ಎದೆ ನಡುಗಿಸಲು ಗುಪ್ತಚರ ಉಪಗ್ರಹ ಕೂಡ ಉಡಾಯಿಸುತ್ತಿದ್ದಾನೆ ಕಿಮ್. ಮತ್ತೊಂದು ಕಡೆ ಅಮೆರಿಕ ಬೇರೆ ಎಚ್ಚರಿಕೆ ನೀಡುತ್ತಿದೆ.

ಕಿಮ್ ಬಳಿ ಪರಮಾಣು ಕ್ಷಿಪಣಿಗಳ ರಾಶಿ

ಅಮೆರಿಕ ಮತ್ತು ಜಪಾನ್, ದಕ್ಷಿಣ ಕೊರಿಯಾ ವಿರುದ್ಧ ಕಿಮ್ ಜಾಂಗ್ ಉನ್ ಅದೆಷ್ಟು ಗರಂ ಆಗಿದ್ದಾನೆ ಎಂದರೆ, ಕಳೆದ 1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿದ್ದಾನೆ. ಈ ಮೂಲಕ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತಂಟೆಗೆ ಬಂದ್ರೆ ಸುಮ್ಮನೆ ಇರಲ್ಲ ಎಂದು ಉತ್ತರಿಸುತ್ತಿದ್ದಾನೆ. ಆದರೆ ಮೊನ್ನೆ ಮೊನ್ನೆ ತಾನೆ ಜಪಾನ್ ನಗರದಲ್ಲಿ ಕಿಮ್ ಹಾರಿಸಿದ ಕ್ಷಿಪಣಿ ಬೀಳಲಿದೆ ಎಂಬ ಆತಂಕ ಶುರುವಾಗಿತ್ತು. ಈ ಘಟನೆ ಬಳಿಕ ದಕ್ಷಿಣ ಕೊರಿಯಾ ಮತ್ತು ಜಪಾನ್ ಅಮೆರಿಕದ ಬಳಿ ದೂರು ನೀಡಿದ್ದವು. ಬಳಿಕ ಅಮೆರಿಕ ಕೂಡ ಉತ್ತರ ಕೊರಿಯಾಗೆ ಎಚ್ಚರಿಕೆ ಕೊಟ್ಟಿತ್ತು.

China advised to America to clear the problem with North Korea peacefully

ಒಟ್ನಲ್ಲಿ ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್ ಒಟ್ಟಾಗಿ ಉತ್ತರ ಕೊರಿಯಾ ವಿರುದ್ಧ ತಿರುಗಿಬಿದ್ದಿರುವ ಸಂದರ್ಭಕ್ಕೆ ಸರಿಯಾಗಿ ಚೀನಾ ಕೂಡ ಎಂಟ್ರಿ ಕೊಟ್ಟಿದೆ. ಉತ್ತರ ಕೊರಿಯಾ ಪರ ನಿಂತಿರುವ ಚೀನಾ ನಾಯಕರು, ಅಮೆರಿಕ ಮತ್ತದರ ಸ್ನೇಹಿತ ರಾಷ್ಟ್ರಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಅಕಸ್ಮಾತ್ ಉ.ಕೊರಿಯಾ ಮೇಲೆ ದಾಳಿ ಮಾಡಿದರೆ ನಾವು ಕೂಡ ನಿಮ್ಮ ಮೇಲೆ ದಾಳಿ ಮಾಡುತ್ತೇವೆ ಎಂಬ ಸಂದೇಶ ಚೀನಾ ಹೇಳಿಕೆಯಲ್ಲಿ ಪರೋಕ್ಷವಾಗಿ ಹರಿದಾಡ್ತಾ ಇರೋದು ಪಕ್ಕಾ.

ಮುನ್ನೆಚ್ಚರಿಕೆ ಕ್ರಮವಾಗಿ ಅಮೆರಿಕ ಈಗಾಗಲೇ ತನ್ನ ಪರಮಾಣು ಜಲಾಂತರ್ಗಾಮಿ ಅಥವಾ ಸಬ್ ಮರೀನ್ ಅನ್ನ ದಕ್ಷಿಣ ಕೊರಿಯಾಗೆ ಕಳುಹಿಸಿದೆ. ಹಾಗೇ ಉತ್ತರ ಕೊರಿಯಾ ಗಡಿಯ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಜಗತ್ತು ಮತ್ತೊಮ್ಮೆ ವಿನಾಶದ ಅಂಚಿಗೆ ತಲುಪುತ್ತಿರುವುದು ಪಕ್ಕಾ. ಹಿಂದೆ 1ನೇ ಮಹಾಯುದ್ಧ ಮತ್ತು 2ನೇ ಮಹಾಯುದ್ಧ ಆರಂಭವಾಗಿದ್ದು ಇದೇ ರೀತಿ ಕೋಳಿ ಜಗಳದಲ್ಲಿ. ಇದೀಗ 3ನೇ ಮಹಾಯುದ್ಧ ಕೂಡ ಹಾಗೇ ಶುರುವಾಗುತ್ತಾ? ಎಂಬ ಭಯ ಇಡೀ ಜಗತ್ತನ್ನು ಕಾಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+