ಮತ್ತೆ ಬಡಿದಾಟ ಶುರು, ಇಸ್ರೇಲ್ & ಇರಾನ್ ನಡುವೆ ಯುದ್ಧ ನಿಂತಿಲ್ಲ! Iran And Israel
ತಲೆ ಕೆಟ್ಟವರ ಮಧ್ಯೆ ಜಗತ್ತು ಹಾಳಾಗಿ ಹೋಗುತ್ತಿದೆ, ಹಿಂಸಾಚಾರ ಜೋರಾಗುತ್ತಿದ್ದು ಮನುಷ್ಯರ ವಿನಾಶ ಕೂಡ ಹತ್ತಿರವೇ ಬಂದಂತೆ ಕಾಣುತ್ತಿದೆ. ಇಷ್ಟೆಲ್ಲಾ ಹೇಳಲು ಕಾರಣ ಆಗಿದ್ದು ಇಸ್ರೇಲ್ & ಇರಾನ್ ವಾರ್. ಈ ಎರಡೂ ದೇಶಗಳ ನಡುವೆ ಹೊತ್ತಿಕೊಂಡಿದ್ದ ಬೆಂಕಿ ಇನ್ನೇನು ಆರಿ ಹೋಯ್ತು ಅನ್ನುವಾಗಲೇ ಮತ್ತೆ ಹಿಂಸೆಯ ಕಿಡಿ ಭುಗಿಲೆದ್ದಿದೆ. ಬಡಿದಾಟ ಕೂಡ ಶುರುವಾಗಿದ್ದು, ಇಸ್ರೇಲ್ & ಇರಾನ್ ಯುದ್ಧ ಬೆಂಕಿ ಇನ್ನೂ ತಣ್ಣಗಾಗಿಲ್ಲ ಎಂಬ ಮೆಸೇಜ್ ಸಿಕ್ಕಿದೆ.
ಯುದ್ಧ.. ಯುದ್ಧ.. ಯುದ್ಧ.. ಹೀಗೆ ಮಧ್ಯಪ್ರಾಚ್ಯದಲ್ಲಿ ಸಾಲು ಸಾಲು ಯುದ್ಧಗಳು ಶುರುವಾಗಿಬಿಟ್ಟಿವೆ. ಹೌದು, ಇಸ್ರೇಲ್ & ಇರಾನ್ ಯುದ್ಧದಲ್ಲಿ ಅಮೆರಿಕ ಹೈರಾಣ ಆಗಿ ಹೋಗಿತ್ತು. ಯಾಕಂದ್ರೆ ಇರಾನ್ ಕೈಯಲ್ಲಿ ಅಣ್ವಸ್ತ್ರ ಇದ್ದು, ಅಕಸ್ಮಾತ್ ಈ ಯುದ್ಧ ಜೋರಾದರೆ ಭವಿಷ್ಯದಲ್ಲಿ ಭಾರಿ ದೊಡ್ಡ ಸಮಸ್ಯೆ ಆಗಬಹುದು ಎಂಬ ಚರ್ಚೆ ನಡೆಯುತ್ತಿತ್ತು. ಅದರಲ್ಲೂ ಇಸ್ರೇಲ್ ನೆಲದಲ್ಲಿ ಇರಾನ್ ದೊಡ್ಡ ನಷ್ಟವನ್ನೂ ಉಂಟುಮಾಡಿ ಯುದ್ಧದ ಭೀಕರತೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿತ್ತು.

ಇಷ್ಟೆಲ್ಲಾ ಆತಂಕದ ನಡುವೆ ಒದ್ದಾಡಿ ಟ್ರಂಪ್ ಯುದ್ಧ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು ಎಂಬ ಮಾತು ಕೂಡ ಕೇಳಿ ಬಂದಿತ್ತು. ಆದರೆ, ಹೀಗೆ ಕದನ ವಿರಾಮ ಘೋಷಣೆ ಮಾಡಿದ ಕೆಲವೇ ಕೆಲವು ನಿಮಿಷದಲ್ಲಿ ಮತ್ತೊಮ್ಮೆ ಇರಾನ್ ಸೇನೆ ದಾಳಿ ಮಾಡಿದೆ. ಅದೂ ಖಂಡಾಂತರ ಕ್ಷಿಪಣಿ ಬಳಸಿಕೊಂಡು ಇರಾನ್ ದಿಢೀರ್ ನಮ್ಮ ಮೇಲೆ ಅಟ್ಯಾಕ್ ಮಾಡಿದೆ ಎಂದು ಆರೋಪಿಸಿದೆ ಇಸ್ರೇಲ್. ಈ ಮೂಲಕ ಮತ್ತೊಮ್ಮೆ ಕಿತ್ತಾಟ ಶುರು ಮಾಡಿದ್ರಾ ಇಬ್ಬರೂ? ಅನ್ನೋ ಅನುಮಾನ ಕೂಡ ಕಾಡುತ್ತಿದೆ.
ಇಸ್ರೇಲ್ ಸೇನೆಯಿಂದ ಮರುದಾಳಿ ಗ್ಯಾರಂಟಿ?
ಇರಾನ್ ತಮ್ಮ ಮೇಲೆ ದಾಳಿ ಮಾಡಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಇಸ್ರೇಲ್ ಕೂಡ ಕೌಂಟರ್ ಅಟ್ಯಾಕ್ ಮಾಡಲು ಸಜ್ಜಾಗಿದೆಯಾ? ಎಂಬ ಅನುಮಾನ ಮೂಡಿದೆ. ಯಾಕಂದ್ರೆ ಇರಾನ್ ಈ ರೀತಿಯಾಗಿ ತಮ್ಮ ಮೇಲೆ ದಾಳಿ ಮಾಡಿದ್ದೇ ತಡ ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಅಂತಾ ಈಗ ಇಸ್ರೇಲ್ ಮಿಲಿಟರಿಯ ಅಧಿಕಾರಿಗಳು ಗುಡುಗಿದ್ದಾರೆ. ಒಟ್ನಲ್ಲಿ ಇನ್ನೇನು ಯುದ್ಧ ನಿಂತೇ ಹೋಯ್ತು ಅಂತಾ ಖುಷಿ ಪಡುವಾಗಲೇ ಮತ್ತೆ ಘೋರ ದಾಳಿ ಆರಂಭ ಆಗಿರುವುದು ಮಧ್ಯಪ್ರಾಚ್ಯದ ಜನರನ್ನು ಚಿಂತೆಗೀಡು ಮಾಡಿಬಿಟ್ಟಿದೆ.
ಇರಾನ್ ಎದುರು ಸೋತ ಅಮೆರಿಕ?
ಅಮೆರಿಕ ಅಂದ್ರೆ ಹಂಗೆ, ಅಮೆರಿಕ ಅಂದ್ರೆ ಹಿಂಗೆ... ಅಂತೆಲ್ಲಾ ಬಿಲ್ಡಪ್ ಕೊಡುತ್ತಿದ್ದ ಕಾಲ ಮುಗಿದಿದೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಅಮೆರಿಕದಲ್ಲಿ ಏನೇನೋ ನಡೆಯುತ್ತಿದೆ. ಹೀಗೆ ಅಮೆರಿಕ ತನ್ನ ಮರ್ಯಾದಿ ತಾನೇ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ ಅಂತಾ ಅಮೆರಿಕದ ಜನ ಆರೋಪವನ್ನ ಮಾಡ್ತಿದ್ದಾರೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ನೀಡುವ ಹೇಳಿಕೆಗಳು ಸುಳ್ಳಾಗಿರುತ್ತವೆ, ಸತ್ಯಕ್ಕೆ ದೂರವಾಗಿ ಇವೆ ಅನ್ನೋ ಆರೋಪಗಳ ನಡುವೆ ಇರಾನ್ & ಇಸ್ರೇಲ್ ಯುದ್ಧ ನಿಲ್ಲಿಸಿದ್ದೇನೆ. ಕದನ ವಿರಾಮ ಘೋಷಣೆ ಆಗಿದೆ ಅಂತೆಲ್ಲಾ ಟ್ರಂಪ್ ಹೇಳಿದ್ದರು. ಆದರೆ ಇದೀಗ ಎರಡೂ ದೇಶಗಳು ಮತ್ತೆ ಹೊಡೆದಾಡಲು ಶುರು ಮಾಡಿವೆ!












Click it and Unblock the Notifications