ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ಮನಸೋ ಇಚ್ಛೆ ಕಾರು ಚಾಲನೆ, ವ್ಯಕ್ತಿ ಸಾವು

Posted By:
Subscribe to Oneindia Kannada

ನ್ಯೂಯಾರ್ಕ್, ಮೇ 19: ವೇಗವಾಗಿ ಬಂದ ಕಾರೊಂದು ನ್ಯೂಯಾರ್ಕ್ ನ ಜನನಿಬಿಡ ಟೈಮ್ಸ್ ಸ್ಕ್ವೇರ್ ನಲ್ಲಿ ಗುರುವಾರ ಪಾದಚಾರಿಗಳಿಗೆ ಗುದ್ದಿ, ಒಬ್ಬರು ಮೃತಪಟ್ಟು, ಹಲವರಿಗೆ ಗಾಯಗಳಾಗಲು ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಒಟ್ಟು ಹದಿಮೂರು ಮಂದಿಗೆ ಗಾಯಗಳಾಗಿವೆ ಎಂದು ನ್ಯೂಯಾರ್ಕ್ ನ ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.

ಈ ಘಟನೆಗೆ ಸಂಬಂಧಿಸಿದಂತೆ ವಾಹನ ಚಲಾಯಿಸುತ್ತಿದ್ದ ರಿಚರ್ಡ್ ರೋಜಸ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆತ ನೌಕಾ ದಳದಲ್ಲಿ ಕೆಲಸ ನಿರ್ವಹಿಸಿದ್ದ ವ್ಯಕ್ತಿ. ಅಪರಾಧ ಹಿನ್ನೆಲೆ ಹಾಗೂ ಕುಡಿದು ವಾಹನ ಓಡಿಸಿದ ದಾಖಲೆಗಳು ಆತನ ವಿರುದ್ಧ ಇವೆ ಎಂದು ತಿಳಿಸಲಾಗಿದೆ.

ಅಲ್ಲಿನ ಪೊಲೀಸ್ ಇಲಾಖೆಯು ಆ ಪ್ರದೇಶವನ್ನು ಬಂದ್ ಮಾಡಿದೆ. ಮಿಡ್ ಟನ್ ಮ್ಯಾನ್ ಹಟನ್ ನಲ್ಲಿ ಮಧ್ಯಾಹ್ನದ ವೇಳೆಗೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಹತ್ತು ಮಂದಿಗೆ ಚಿಕಿತ್ಸೆ ನೀಡಲಾಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ. ಕೆಂಪು ಬಣ್ಣದ ಸೆಡಾನ್ ಕಾರು ಅಪಘಾತ ಮಾಡಿರುವುದಾಗಿ ವರದಿಯಾಗಿದೆ. ಆದರೆ ಇದು ಭಯೋತ್ಪಾದನಾ ಕೃತ್ಯವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

accident

ಕಾರು ಚಾಲಕ ಸಂಚಾರದ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ. ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗದಲ್ಲಿ ನಡೆದು ಬರುತ್ತಿದ್ದವರತ್ತ ಚಲಾಯಿಸಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಂಬಕ್ಕೆ ಡಿಕ್ಕಿ ಹೊಡೆದ ಕಾರು ಆ ನಂತರ ನಿಂತುಕೊಂಡಿದೆ. ಅಪಘಾತದಲ್ಲಿ ಗಾಯಾಳುಗಳಾದ ಏಳು ಮಂದಿಯನ್ನು ಸ್ಟ್ರೆಚರ್ ನಲ್ಲಿ ಕರೆದೊಯ್ಯಲಾಯಿತು. ಷೂಗಳು ಚೆಲ್ಲಾಪಿಲ್ಲಿಯಾಗಿದ್ದವು. ಒಬ್ಬ ವ್ಯಕ್ತಿಯನ್ನು ರಕ್ತಸಿಕ್ತ ಬಟ್ಟೆಯಲ್ಲಿ ಸುತ್ತಿ ಕರೆದೊಯ್ಯುತ್ತಿದ್ದರು ಎಂದು ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A speeding car crashed into pedestrians on a sidewalk in New York City's busy Times Square on Thursday, causing multiple injuries, witnesses said.
Please Wait while comments are loading...