ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿಯಾದಲ್ಲಿ ಕಾರ್ ಬಾಂಬ್ ಸ್ಫೋಟ : ಕನಿಷ್ಠ 14 ಸಾವು

By Prasad
|
Google Oneindia Kannada News

ಎಜಾಜ್ (ಸಿರಿಯಾ), ಜನವರಿ 07 : ಟರ್ಕಿಯ ಬಳಿ ಮತ್ತೊಂದು ರಕ್ತಪಾತವಾಗಿದೆ. ಟರ್ಕಿ ಗಡಿಯಲ್ಲಿರುವ ಸಿರಿಯಾದ ಎಜಾಜ್ ಪಟ್ಟಣದಲ್ಲಿ ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 14 ಜನ ಸಾವಿಗೀಡಾಗಿದ್ದಾರೆ.

ಟರ್ಕಿಯ ಗಡಿಯಿಂದ ಕೇವಲ 7 ಕಿ.ಮೀ. ದೂರದಲ್ಲಿ ಕೋರ್ಟ್ ಹೌಸ್ ಹೊರಭಾಗದಲ್ಲಿ ಈ ಸ್ಫೋಟ ಸಂಭವಿಸಿದೆ. ಎಜಾಜ್ ಪಟ್ಟಣ ಇತ್ತೀಚೆಗೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರಿಂದ ದಾಳಿಗೆ ತುತ್ತಾಗಿತ್ತು. [ಮೈಮರಗಟ್ಟಿಸುವ ಉಗ್ರರ ವಿಡಿಯೋದಲ್ಲಿ ಮೋದಿ ಹೆಸರು]

Car bomb explodes in Syria : Several killed

ಕೆಲವೇ ದಿನಗಳ ಹಿಂದೆ ಇಸ್ತಾನ್ ಬುಲ್ ನಲ್ಲಿನ ನೈಟ್ ಕ್ಲಬ್ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 39 ಜನ ಸಾವಿಗೀಡಾಗಿದ್ದರು. ಹೊಸವರ್ಷಾಚರಣೆಯಲ್ಲಿ ತೊಡಗಿದ್ದವರ ಮೇಲೆ ಓರ್ವ ಗುಂಡಿನ ದಾಳಿ ನಡೆಸಿದ್ದ. [ಇಸ್ತಾನ್ಬುಲ್ ನೈಟ್ ಕ್ಲಬ್ ಮೇಲೆ ಉಗ್ರರ ದಾಳಿ, 35 ಜನರ ಹತ್ಯೆ]

ಶನಿವಾರ ಸಂಭವಿಸಿದ ಕಾರ್ ಬಾಂಬ್ ಸ್ಫೋಟದ ಹಿಂದೆ ಯಾವ ಸಂಘಟನೆಯ ಕೈವಾಡವಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೂ ಇಸ್ಲಾಮಿಕ್ ಸ್ಟೇಟ್ ಮೇಲೆಯೇ ಎಲ್ಲರ ತೋರುಬೆರಳು ನೆಟ್ಟಿದೆ. ಒಂದು ವರದಿಯ ಪ್ರಕಾರ, ಈ ಘಟನೆಯಲ್ಲಿ ಕನಿಷ್ಠಪಕ್ಷ 60 ಜನ ಸಾವಗೀಡಾಗಿ, ಅಷ್ಟೇ ಜನ ಗಾಯಗೊಂಡಿದ್ದಾರೆ. [ವಿಶೇಷ ಲೇಖನ: ನೆಮ್ಮದಿಯಾಗಿದ್ದ ಟರ್ಕಿಯಲ್ಲಿ ಗನ್, ಬಾಂಬ್ ಸದ್ದು]

English summary
Car bomb exploded in Azaz town in Syria, near Turkish border on Saturday. More than 14 people have been killed. Explosion occurred outside court house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X