ಜೈಲಿನ ಕೋಣೆ ಹಾಗೂ ಬಾತ್‌ರೂಮಿನಲ್ಲಿ ಕ್ಯಾಮರಾ ಅಳವಡಿಸಿದ್ದರು:ಮರಿಯಂ ನವಾಜ್
ಇಸ್ಲಾಮಾಬಾದ್, ನವೆಂಬರ್ 13: ಜೈಲಿನ ಕೋಣೆ ಹಾಗೂ ಬಾತ್‌ರೂಮಿನಲ್ಲಿ ಕ್ಯಾಮರಾವನ್ನು ಅಳವಡಿಸಿದ್ದರು ಎಂದು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್‌ನ ಉಪಾಧ್ಯಕ್ಷೆ ಮರಿಯಂ ನವಾಜ್ ಆರೋಪಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮರಿಯಂ ನವಾಜ್ ಷರೀಶ್ ಮಾತನಾಡಿ, ಚೌದರಿ ಶುಗರ್ ಮಿಲ್ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅಲ್ಲಿ ಅನುಭವಿಸಿದ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
ಮಹಿಳೆ ಪಾಕಿಸ್ತಾನದಲ್ಲಿರಲಿ ಎಲ್ಲೇ ಇರಲಿ ಆಕೆ ದುರ್ಬಲವಲ್ಲ ಎಂದು ಮರಿಯಂ ನವಾಜ್ ಹೇಳಿದ್ದಾರೆ.
ನಾನು ಎರಡು ಬಾರು ಜೈಲಿಗೆ ಹೋಗಿದ್ದೇನೆ, ಅಲ್ಲಿ ಅನುಭವಿಸಿದ ಯಾತನೆಗಳು ನಿಮಗೆ ತಿಳಿದಿದೆಯೇ, ಅವರು ನಡೆದುಕೊಂಡ ಬಗೆಯನ್ನು ವಿವರಿಸಿದರೆ ಮುಂದೆ ಈ ಸಮಾಜದ ಮುಂದೆ ಅವರಿಗೆ ತಲೆ ಎತ್ತಿ ತಿರುಗಲು ಸಾಧ್ಯವಿಲ್ಲ ಎಂದರು.

ಯಾವಾಗ ತಂದೆ ಎದುರು ಮಗಳನ್ನು ಕರೆದುಕೊಂಡು ಹೋಗಿ ಹಿಂಸೆ ಕೊಟ್ಟರೋ ಆಗಲೇ ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ ಎಂದು ತಿಳಿದುಬಂದಿತ್ತು, ಮಹಿಳೆ ಪಾಕಿಸ್ತಾನದಲ್ಲಿರಲಿ ಎಲ್ಲೇ ಇರಲಿ ಆಕೆ ಸಬಲಳು ಎಂದು ನುಡಿದರು.
7 ಮಿಲಿಯನ್‌ಷ್ಟು ಶೇರ್ ಅನ್ನು ಮರಿಯಂ ನವಾಜ್ಅವರಿಗೆ 2008ರಲ್ಲಿ ಹಸ್ತಾಂತರಿಸಲಾಗಿತ್ತು. ಅದನ್ನು ಬಳಿಕ 2010ರಲ್ಲಿ ಯೂಸಫ್ ಅಬ್ಬಾಸ್‌ಗೆ ನೀಡಲಾಗಿತ್ತು.












Click it and Unblock the Notifications