ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Queen Elizabeth II Passed Away : ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ವಿಧಿವಶ

|
Google Oneindia Kannada News

ಲಂಡನ್, ಸೆಪ್ಟೆಂಬರ್ 8: ವಿಶ್ವದ ಅತ್ಯಂತ ಹಿರಿಯ ದೊರೆ ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್ ನಿಧನರಾಗಿದ್ದಾರೆ. ಸೆಪ್ಟೆಂಬರ್ 8ರಂದು ಅವರ ವೈದ್ಯಕೀಯ ಸ್ಥಿತಿ ಹದಗೆಟ್ಟಿದೆ ಎಂದು ವರದಿಯಾದ ಕೆಲವೇ ಗಂಟೆಗಳಲ್ಲಿ ಯುಕೆ ರಾಜಮನೆತನವು ಸಾವಿನ ಸುದ್ದಿಯನ್ನು ಪ್ರಕಟಿಸಿದೆ.

Britain Queen Elizabeth passes away at the age of 96 years at Balmoral castle, Scotland

"ರಾಣಿ ಇಂದು ಮಧ್ಯಾಹ್ನ ಬಲ್ಮೋರಲ್‌ನಲ್ಲಿ ನಿಧನರಾದರು. ರಾಜ ಮತ್ತು ರಾಣಿ ಇಂದು ಸಂಜೆ ಬಾಲ್ಮೋರಲ್‌ನಲ್ಲಿ ಉಳಿಯಲಿದ್ದು, ನಾಳೆ ಲಂಡನ್‌ಗೆ ಹಿಂತಿರುಗುತ್ತಾರೆ," ಎಂದು ರಾಜಮನೆತನದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಏಳು ದಶಕಗಳ ಕಾಲ ಬ್ರಿಟನ್ ರಾಣಿಯಾಗಿದ್ದ ಎರಡನೇ ಎಲಿಜಬೆತ್, ಅತ್ಯಂತ ಸುದೀರ್ಘ ಅವಧಿಯವರೆಗೂ ದೇಶವನ್ನು ಆಳಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಇದೀಗ ಅವರ ಹಿರಿಯ ಪುತ್ರ ಮತ್ತು ಮಾಜಿ ವೇಲ್ಸ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಹೊಸ ರಾಜನಾಗಿ ದೇಶವನ್ನು ಮುನ್ನೆಡಸಲಿದ್ದಾರೆ ಎಂದು ತಿಳಿದು ಬಂದಿದೆ.

70 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ರಾಣಿ ಎಲೆಜಬೆತ್:
ರಾಷ್ಟ್ರಕ್ಕೆ 70 ವರ್ಷಗಳ ಸೇವೆಯನ್ನು ಗುರುತಿಸಲು ಯುನೈಟೆಡ್ ಕಿಂಗ್ ಡಮ್ 96 ವರ್ಷ ವಯಸ್ಸಿನ ಕ್ವೀನ್ಸ್ ಪ್ಲಾಟಿನಂ ಜುಬಿಲಿಯನ್ನು ಆಚರಿಸಿತು. ಇದರಲ್ಲಿ ಬ್ರಿಟನ್‌ನ ರಾಣಿ ಎಲಿಜಬೆತ್ II ಅವರು 1927 ಮತ್ತು 2016ರ ನಡುವೆ 70 ವರ್ಷ ಮತ್ತು 126 ದಿನಗಳ ಕಾಲ ಆಳ್ವಿಕೆ ನಡೆಸಿದ ಥಾಯ್ಲೆಂಡ್‌ನ ಕಿಂಗ್ ಭೂಮಿಬೋಲ್ ಅದುಲ್ಯದೇಜ್ ಅವರನ್ನು ಹಿಂದಿಕ್ಕಿ ವಿಶ್ವ ದಾಖಲೆ ಬರೆದಿದ್ದರು.
1953 ರಲ್ಲಿ ಪಟ್ಟಾಭಿಷೇಕ ಮಾಡಲಾದ ರಾಣಿ ಎಲಿಜಬೆತ್ II ಸೆಪ್ಟೆಂಬರ್ 2015 ರಲ್ಲಿ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾವನ್ನು ಮೀರಿಸಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿಯಾಗಿದ್ದಾರೆ.
ಪ್ಲಾಟಿನಂ ಜುಬ್ಲಿ ಮೈಲಿಗಲ್ಲು ಗುರುತಿಸಲು UK ಮತ್ತು ಕಾಮನ್‌ವೆಲ್ತ್‌ನಾದ್ಯಂತ ನಡೆದ ನಾಲ್ಕು ದಿನಗಳ ರಾಯಲ್ ಪರೇಡ್‌ಗಳು, ಬೀದಿ ಪಾರ್ಟಿಗಳು, ಪ್ರದರ್ಶನ ಮತ್ತು ಇತರ ಕಾರ್ಯಕ್ರಮಗಳ ನಂತರ, ಥಾಯ್ಲೆಂಡ್‌ನ ರಾಜ ಪತ್ರದಲ್ಲಿ ರಾಷ್ಟ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ನಂತರ ಈ ದಾಖಲೆಗೆ ಭಾಜನರಾದ ಎಲಿಜಬೆತ್ II ಅವರು 'ಇದು ವಿನಮ್ರತೆಗೆ ಹೆಸರಾಗಿದೆ. ಈ ನವೀಕೃತ ಒಗ್ಗಟ್ಟಿನ ಪ್ರಜ್ಞೆ ಮುಂಬರುವ ಹಲವು ವರ್ಷಗಳವರೆಗೆ ಅನುಭವಿಸಲ್ಪಡುತ್ತದೆ' ಎಂದು ಹೇಳಿದರು.

English summary
Britain Queen Elizabeth passes away at the age of 96 years at Balmoral castle, Scotland. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X