ಜ್ವರ ಬಂತು ಅಂತಾ ಆಸ್ಪತ್ರೆಗೆ ಹೋದರೆ, ಮೆದುಳು ತಿಂದಿತ್ತು ಹುಳು!
ವಾಷಿಂಗ್ಟನ್: ಜಗತ್ತಿನಲ್ಲಿ ದಿನಕ್ಕೊಂದು ಹೊಸ ಹಾಗೂ ಮಾರಣಾಂತಿಕ ರೋಗ ಜನರನ್ನು ಕಾಡುವಂತಾಗಿದೆ. ಅದರಲ್ಲೂ ವಾತಾವರಣ ಬದಲಾವಣೆಯು ತೀವ್ರವಾದ ಬಳಿಕ ಮಾರಕ ಕಾಯಿಲೆ ವಕ್ಕರಿಸುತ್ತಿವೆ. ಇದೇ ರೀತಿ ಮೆದುಳು ತಿನ್ನುವ ಅಮೀಬಾ ಕಾಟವು ಕೂಡ ಬಲು ಜೋರಾಗಿದ್ದು, ಉತ್ತರ ಅಮೆರಿಕ ಇದರಿಂದ ತತ್ತರಿಸಿ ಹೋಗಿದೆ. ಈಗ ಮತ್ತೊಂದು ಜೀವ ಮೆದುಳು ತಿನ್ನುವ ಅಮೀಬಾಗೆ ಬಲಿಯಾಗಿದೆ.
ಅಂದಹಾಗೆ ಮೆದುಳು ತಿನ್ನುವ ಅಮೀಬಾ ಸೋಂಕಿಗೆ 2 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಅಮೆರಿಕದ ನೆವಡಾ ರಾಜ್ಯದಲ್ಲಿ ನಡೆದಿದೆ. ಸ್ವಿಮ್ಮಿಂಗ್‌ಪೂಲ್‌ನಲ್ಲಿ ಈಜುವಾಗ ಈ ಸೋಂಕು ದೇಹ ಪ್ರವೇಶಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮೃತ ಬಾಲಕನ ಹೆಸರು ವೂಡ್‌ರೂವ್ ಎಂದು ಗುರುತಿಸಲಾಗಿದೆ. ಬಾಲಕನ ತಾಯಿ ಘಟನೆ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಬಾಲಕನಿಗೆ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗಿತ್ತು. ಆದರೆ ದಿನಕಳೆದಂತೆ ಆರೋಗ್ಯ ಹದಗೆಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿದಾಗ ಮೆದುಳಿನಲ್ಲಿ ಉರಿ ಕಾಣಿಸಿಕೊಂಡಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಮೆದುಳು ತಿನ್ನುವ ಅಮೀಬಾ ಬಗ್ಗೆ ಗೊತ್ತಾಗಿದೆ.

ಅಮೆರಿಕದಲ್ಲಿ ಕೈಮೀರಿ ಹೋಗುತ್ತಿದೆ ಪರಿಸ್ಥಿತಿ!
ಹೌದು, ಅಮೆರಿಕದ ಜನ ಒಂದಿಲ್ಲೊಂದು ವೈರಸ್‌ಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಡೆಡ್ಲಿ ಕೊರೊನಾ ಬಳಿಕ ಅಮೆರಿಕ ಅಕ್ಷರಶಃ ನಲುಗಿ ಹೋಗಿದೆ. ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗಿದ್ದ ಅಮೆರಿಕದ ಬುಡ ಅಲುಗಾಡಿದೆ. ಇದೇ ಹೊತ್ತಲ್ಲೇ ಅಮೆರಿಕದಲ್ಲಿ ಹೊಸ ರೋಗ ವ್ಯಾಪಕವಾಗಿ ಹರಡುತ್ತಿದೆ. ಅಂದಹಾಗೆ ಮೆದುಳು ತಿನ್ನುವ ಅಮೀಬಾ ಆರಂಭದಲ್ಲಿ ತಲೆನೋವು ಹಾಗೂ ವಾಕರಿಕೆ ಮೂಲಕ ಆರಂಭವಾಗುತ್ತದೆ. ನಂತರ ವಾಂತಿ, ಕುತ್ತಿಗೆ ನೋವು, ದೇಹದ ಮೇಲೆ ನಿಯಂತ್ರಣ ಇಲ್ಲದಂತಹ ಲಕ್ಷಣ ಎದುರಾಗುತ್ತದೆ. ಕೊನೆಗೆ ಮನುಷ್ಯನ ಜೀವ ತೆಗೆಯುತ್ತದೆ ಈ ಅಮೀಬಾ.
ವೈರಸ್‌ನ ಸಂಪೂರ್ಣ ಜಾತಕ ಇಲ್ಲಿದೆ!
ಮೆದುಳು ತಿನ್ನುವ ಅಮೀಬಾ ಅಮೆರಿಕನ್ನರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಈ 'ನಾಗ್ಲೆರಿಯಾ ಫೌಲೆರಿ' ಅಥವಾ ಮೆದುಳು ತಿನ್ನುವ ಅಮೀಬಾ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾ ವೈರಸ್ ಆರ್ಭಟದ ಬಳಿಕ ಈಗ ಮೆದುಳು ತಿನ್ನುವ 'ಹುಳು'ಗಳ (Brain Eating Amoeba) ಆರ್ಭಟವು ಶುರುವಾಗಿದೆ. ಹವಾಮಾನ ವೈಪರಿತ್ಯದ ಪರಿಣಾಮ ದಕ್ಷಿಣ ಅಮೆರಿಕದ ಮೆದುಳು ತಿನ್ನುವ ವೈರಸ್, ಉತ್ತರ ಅಮೆರಿಕದಲ್ಲೂ ಆವರಿಸುತ್ತಿದೆ. ಹೀಗಾಗಿ ಸಾವಿರಾರು ಜನ ಮತ್ತೊಮ್ಮೆ ಸಾವಿನ ಸುಳಿಗೆ ಸಿಲುಕಿದ್ದಾರಂತೆ.
ಮೊದಲು ಮೂಗು.. ನಂತರ ಮೆದುಳು!
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ವೈರಸ್ ಒಂದು ಏಕಕೋಶ ಜೀವಿ, ಅಂದ್ರೆ ಇದು ಅಮೀಬಾ. ಮೊದಲು ಮನುಷ್ಯನ ಮೂಗಿಗೆ ಪ್ರವೇಶ ಮಾಡುವ ವೈರಸ್ ಅಲ್ಲಿಂದ ನೇರ ಮೆದುಳು ಸೇರಿ ನಂತರ ಬೆನ್ನುಹುರಿಗೆ ನುಸುಳುತ್ತೆ. ಹೀಗೆ ಮೆದುಳು ಸೇರಿದ ವೈರಸ್ ಮನುಷ್ಯನ ಮೆದುಳು ತಿನ್ನಲು ಪ್ರಾರಂಭಿಸಿ, ಕೊನೆಗೆ ಜೀವ ತೆಗೆಯುತ್ತದೆ. ಹೀಗಾಗಿ 'ನಾಗ್ಲೆರಿಯಾ ಫೌಲೆರಿ' ಡೆಡ್ಲಿ ವೈರಸ್ ಆಗಿದ್ದು ಎಚ್ಚರಿಕೆ ವಹಿಸುವಂತೆ ಅಮೆರಿಕದ ಸ್ಥಳೀಯ ಸರ್ಕಾರಗಳು ಈಗಾಗಲೇ ಗಂಭೀರ ಸಂದೇಶ ರವಾನಿಸಿವೆ.

ಸ್ವಲ್ಪ ಯಾಮಾರಿದರೂ ಜೀವ ಹೋಗುತ್ತೆ!
ಉತ್ತರ ಅಮೆರಿಕದ ಹಲವು ಕಡೆ ವ್ಯಾಪಕವಾಗಿ ಮೆದುಳು ತಿನ್ನುವ ವೈರಸ್ ಹರಡುತ್ತಿದೆ. ವೈರಸ್ ಬದುಕಲು ಬೆಚ್ಚಗಿನ ನೀರು ಅಗತ್ಯವಾಗಿದೆ. ಈಗ ಉತ್ತರ ಅಮೆರಿಕದಲ್ಲಿ ಹವಾಮಾನ ವೈಪರಿತ್ಯ ಪರಿಣಾಮವಾಗಿ ಚಳಿಯ ವಾತಾವರಣ ಮಾಯವಾಗುತ್ತಿದ್ದು, ಬಿಸಿ ಹೆಚ್ಚಾಗುತ್ತಿದೆ. ಹೀಗಾಗಿ ಉತ್ತರ ಅಮೆರಿಕ ರಾಜ್ಯಗಳಲ್ಲಿರುವ ಮಣ್ಣು & ಬೆಚ್ಚಗಿನ ಶುದ್ಧ ನೀರಲ್ಲಿ ಮೆದುಳು ತಿನ್ನುವ ವೈರಸ್ ಹೆಚ್ಚಾಗಿ ಕಂಡುಬರುತ್ತಿದೆ. ಇದರ ಜೊತೆ ಮನೆ ನೀರಿನ ಟ್ಯಾಂಕರ್ ಮತ್ತು ಹೀಟರ್ ಅಥವಾ ಪೈಪ್‌ಗಳಲ್ಲೂ ಮೆದುಳು ತಿನ್ನುವ ವೈರಸ್ ಕಂಡುಬರುತ್ತಿದೆ ಎನ್ನಲಾಗಿದೆ.
ಈ ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ಅದೆಷ್ಟು ಡೇಂಜರಸ್ ಅಂದ್ರೆ, ಸೋಂಕಿಗೆ ಸರಿಯಾದ ಔಷಧ ಇಲ್ಲ. ಅಕಸ್ಮಾತ್ ನಾಗ್ಲೆರಿಯಾ ಫೌಲೆರಿ ಅಮೀಬಾ ಮನುಷ್ಯನ ಮೆದುಳು ಸೇರಿದರೆ ಆ ಕ್ಷಣದಿಂದಲೇ ಮೆದುಳಿನ ಮೇಲೆ ದಾಳಿ ಮಾಡಿ ತಿನ್ನಲು ಆರಂಭಿಸುತ್ತದೆ. 1 ವಾರದಲ್ಲಿ ಆತನ ಜೀವವನ್ನೇ ತೆಗೆದುಬಿಡುತ್ತೆ. ಆದರೆ ಇದ್ಯಾವುದೂ ಸೋಂಕಿತನ ಗಮನಕ್ಕೆ ಬರುವುದೇ ಇಲ್ಲ. ಅಷ್ಟರಮಟ್ಟಿಗೆ ಖತರ್ನಾಕ್ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿ.











Click it and Unblock the Notifications