ಗಡಿ ಬಿಕ್ಕಟ್ಟು: ಭಾರತ ಮತ್ತು ಚೀನಾ ಅಧಿಕಾರಿಗಳ ನಡುವೆ ಚರ್ಚೆ!
ಭಾರತ ಮತ್ತು ಚೀನಾ ಅಧಿಕಾರಿಗಳು ಬೀಜಿಂಗ್‌ನಲ್ಲಿ ಗಡಿ ಬಿಕ್ಕಟ್ಟಿನ ಕುರಿತು ಮಾತುಕತೆ ನಡೆಸಿದರು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೀಜಿಂಗ್ ಫೆಬ್ರವರಿ 22: ಭಾರತ ಮತ್ತು ಚೀನಾದ ಅಧಿಕಾರಿಗಳು ಬುಧವಾರ ಬೀಜಿಂಗ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಇರುವ ಬಿಕ್ಕಟ್ಟಿನ ಕುರಿತು ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸಿದರು.
ಚರ್ಚೆಗಳಲ್ಲಿ ಪ್ರಗತಿಯ ಯಾವುದೇ ತಕ್ಷಣದ ಲಕ್ಷಣಗಳು ಕಂಡುಬಂದಿಲ್ಲ. ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತು ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ವರ್ಕಿಂಗ್ ಮೆಕ್ಯಾನಿಸಂ (ಡಬ್ಲ್ಯುಎಂಸಿಸಿ) ಅಡಿಯಲ್ಲಿ ಮಾತುಕತೆಗಳನ್ನು ನಡೆಸಲಾಯಿತು. ಜುಲೈ 2019 ರಲ್ಲಿ ನಡೆದ 14 ನೇ ಸಭೆಯ ನಂತರ ಇದು ಮೊದಲ ವೈಯಕ್ತಿಕ ಸಭೆಯಾಗಿದೆ.

ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆ ಬಳಿ ಗಡಿ ಸಂಘರ್ಷಕ್ಕೆ ಕಾರಣವಾಗಿರುವ ಕೆಲ ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂಬ ಪ್ರಸ್ತಾವನೆ ಕುರಿತು ಚೀನಾದ ಬೀಜಿಂಗ್‌ನಲ್ಲಿ ಬಾರತ ಮತ್ತು ಚೀನಾ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದವು.

ಭಾರತ-ಚೀನಾ ಗಡಿ ಬಿಕ್ಕಟ್ಟು ಸಮಾಲೋಚನೆ ಮತ್ತು ಸಹಯೋಗ ಕುರಿತ ಕಾರ್ಯಕಾರಿ ಮಂಡಳಿ ಸಭೆಯಲ್ಲಿ (ಡಬ್ಯ್ಲುಎಂಸಿಸಿ) ಈ ಕುರಿತು ಪ್ರಸ್ತಾಪಿಸಲಾಯಿತು. ಚೀನಾ ಮತ್ತು ಭಾರತದ ನಡುವೆ ಸದ್ಯ ಅಸ್ಥಿತವದಲ್ಲಿರುವ ಒಪ್ಪಂದಗಳು ಮತ್ತು ರಾಜತಾಂತ್ರಿಕ ನಿಯಮಾವಳಿಗಳ ಕುರಿತು ಚರ್ಚಿಸಲು ಶೀಘ್ರದಲ್ಲೇ 18 ಸುತ್ತಿನ ಸಭೆ ಆಯೋಜಿಸಲು ಉಭಯ ದೇಶಗಳು ಒಪ್ಪಿಗೆ ಸೂಚಿದವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಆದರೆ, ಸಭೆಯಲ್ಲಿ ಯಾವ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಖಚಿತ ಮಾಹಿತಿ ದೊರೆತಿಲ್ಲ.











Click it and Unblock the Notifications