ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಬಂಧನದ ಭೀತಿ?

Posted By:
Subscribe to Oneindia Kannada

ಇಸ್ಲಾಮಾಬಾದ್, ಜುಲೈ 10: ಅಕ್ರಮ ಆಸ್ತಿ ಆರೋಪಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಬಂಧಿಸುವಂತೆ ಅಲ್ಲಿನ ಸರ್ಕಾರಿ ನೇಮಿತ ಜಂಟಿ ತನಿಖಾ ಸಮಿತಿ (ಜೆಐಟಿ) ತನ್ನ ವರದಿಯಲ್ಲಿ ಉಲ್ಲೇಖಿಸಿದ್ದು, ಷರೀಫ್ ಗೆ ಈಗ ಬಂಧನ ಭೀತಿ ಆವರಿಸಿದೆ.

ಕಳೆದ ವರ್ಷ, ವಿಶ್ವದ ನಾನಾ ದೇಶಗಳ ರಾಜಕೀಯ ವಲಯಗಳನ್ನೇ ಅಲುಗಾಡಿಸಿದ್ದ 'ಪನಾಮಾ ಪೇಪರ್ಸ್' ತನಿಖಾ ವರದಿಯಲ್ಲಿ, ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಪುತ್ರರು ಅಕ್ರಮ ದಾರಿಗಳಿಂದ ಆಸ್ತಿ ಮಾಡಿಕೊಂಡಿರುವ ಬಗ್ಗೆ ಹೇಳಲಾಗಿತ್ತು.

Book Nawaz Sharif and sons for corruption, recommends JIT

ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಜಂಟಿ ಸಮಿತಿಯೊಂದನ್ನು ನೇಮಿಸಿ, ಆ ಆರೋಪಗಳ ಕುರಿತಂತೆ ತನಿಖೆ ನಡೆಸಲು ಆದೇಶಿಸಿತ್ತು. ಷರೀಫ್ ಹಾಗೂ ಅವರ ಪುತ್ರರಾದ ಹುಸೇನ್ ಹಾಗೂ ಹಸನ್ ನವಾಜ್ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣಗಳ ತನಿಖೆ ಕೈಗೆತ್ತಿಕೊಂಡಿತ್ತು.

ಇದೀಗ, ತನಿಖೆ ಮುಗಿಸಿರುವ ಅದು ಸುಪ್ರೀಂ ಕೋರ್ಟ್ ಗೆ ತನ್ನ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಷರೀಫ್ ಹಾಗೂ ಅವರ ಪುತ್ರರು ಭ್ರಷ್ಟಾಚಾರ ಮಾರ್ಗಗಳ ಮೂಲಕ ಅಕ್ರಮ ಆಸ್ತಿ ಸಂಪಾದಿಸಿರುವುದು ಸಾಬೀತಾಗಿದ್ದು, ಷರೀಫ್ ಹಾಗೂ ಅವರ ಪುತ್ರರನ್ನು ಬಂಧಿಸಬಹುದೆಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A six-member Joint Investigation Team (JIT), which is probing the assets of Pakistan Prime Minister Nawaz Sharif and his family, has recommended the registration of a corruption case against him and his sons, Hussain and Hassan Nawaz, in the Panama Papers case.
Please Wait while comments are loading...