• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸದು ಏನಿಲ್ಲ ಗುರೂ..! ಹಳೇ ಮಡಿಕೆಗೆ ಹೊಸ ತೇಪೆ ಹಾಕಿದ ಬೈಡನ್..!

|
Google Oneindia Kannada News

ಶತ್ರು ಎದುರಿಗೆ ಇಲ್ಲದೇ ಇರುವಾಗ ಮಾತನಾಡುವ ರೀತಿ ಬೇರೆ, ಶತ್ರು ಎದುರಲ್ಲಿ ಕೂತಾಗ ಮಾತಾನಾಡೋ ರೀತಿಯೇ ಬೇರೆ ಅನ್ನೋದನ್ನ ಬೈಡನ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇಷ್ಟು ದಿನ ರಷ್ಯಾ ಅಧ್ಯಕ್ಷರ ಬಗ್ಗೆ ಮನಸ್ಸಿಗೆ ಬಂದಂತೆ ವಾಗ್ದಾಳಿ ನಡೆಸಿದ್ದ ಬೈಡನ್, ಇವತ್ತು ಪುಟಿನ್‌ ಎದುರಿಗೆ ಕೂತಿದ್ದರೂ ಉಸಿರು ಬಿಡಲಿಲ್ಲ. ಈ ಮಾತಿನ ಅರ್ಥ, ತನ್ನ ಶತ್ರು ವಿರುದ್ಧ ಇಷ್ಟು ದಿನ ಹೊರಜಗತ್ತಿಗೆ ಕಾಣುವಂತೆ ಬೈಯುತ್ತಿದ್ದ ಜೋ ಬೈಡನ್ ತನ್ನ ಶತ್ರು ಎದುರಲ್ಲೇ ಇದ್ದರೂ ಸೌಮ್ಯ ಸ್ವಭಾವದಲ್ಲೇ ವ್ಯವಹರಿಸಿದ್ದಾರೆ. ಹೌದು, ಸ್ವಿಜರ್ಲ್ಯಾಂಡ್‌​ನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಬೈಡನ್ ಹಾಗೂ ಪುಟಿನ್ ಹಲವು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ಚರ್ಚೆ ವೇಳೆ ವೈಯಕ್ತಿ ವಾಗ್ದಾಳಿ ಬಿಟ್ಟು, ಅಮೆರಿಕ ಹಾಗೂ ರಷ್ಯಾಗೆ ಸಂಬಂಧಿಸಿದ ಜಾಗತಿಕ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಅಮೆರಿಕ ಮೇಲೆ ಪದೇ ಪದೆ ನಡೆಯುತ್ತಿರುವ ಸೈಬರ್ ದಾಳಿ ನಿಯಂತ್ರಣ ಸೇರಿ ಪರಸ್ಪರ ವ್ಯಾಪಾರ ಸಹಕಾರಕ್ಕೆ ಬೈಡನ್-ಪುಟಿನ್ ಒಪ್ಪಿಗೆ ಸೂಚಿಸಿದ್ದಾರೆ. ಆದ್ರೆ ಕೆಲದಿನಗಳ ಹಿಂದೆ ಇಬ್ಬರೂ ಒಬ್ಬರನ್ನ ಒಬ್ಬರು ಬೈದುಕೊಂಡಿದ್ದರು, ಆದರೆ ಬೈದಾಟದ ವಿಚಾರ ಮಾತ್ರ ಇಬ್ಬರ ಭೇಟಿ ವೇಳೆ ಚರ್ಚೆಗೆ ಬರಲೇ ಇಲ್ಲ.

ರಷ್ಯಾ ಅಧ್ಯಕ್ಷ ಪುಟಿನ್, ಅಮೆರಿಕ ಅಧ್ಯಕ್ಷ ಬೈಡನ್ ಸಂಧಾನ ಸೂತ್ರ! ರಷ್ಯಾ ಅಧ್ಯಕ್ಷ ಪುಟಿನ್, ಅಮೆರಿಕ ಅಧ್ಯಕ್ಷ ಬೈಡನ್ ಸಂಧಾನ ಸೂತ್ರ!

ಅವನೊಬ್ಬ ವ್ಯಾಪಾರಿ ಅಷ್ಟೇ..!

ಅವನೊಬ್ಬ ವ್ಯಾಪಾರಿ ಅಷ್ಟೇ..!

ಪುಟಿನ್ ಜೊತೆಗೆ ಹಲವು ಗಂಟೆಗಳ ಚರ್ಚೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಪದೇ ಪದೆ ತಾಳ್ಮೆ ಕಳೆದುಕೊಂಡರು. ಅದರಲ್ಲೂ ಪುಟಿನ್‌ನ ನೀವು ಕೊಲೆಗಾರ ಅಂದಿದ್ರು, ಈ ಬಗ್ಗೆ ಪುಟಿನ್ ಏನಂದ್ರು? ಅಂತಾ ಪತ್ರಕರ್ತರು ಕೇಳಿದ ಪ್ರಶ್ನೆಗೆ ಬೈಡನ್ ಕೊಂಚ ಕಸಿವಿಸಿಗೊಂಡರು. ಆದ್ರೆ ತಕ್ಷಣ ಪ್ರತ್ಯುತ್ತರ ನೀಡಿದ ಬೈಡನ್, ಪುಟಿನ್ ಒಬ್ಬ ವ್ಯಾಪಾರಿ ಅಷ್ಟೇ. ಅವನ ಜೊತೆ ಮಾತನಾಡಿದ್ದು ವ್ಯಾಪಾರದ ಬಗ್ಗೆ ಅಷ್ಟೇ. ಇದನ್ನ ಬಿಟ್ಟು ಮಾತನಾಡಲು ಏನೂ ಉಳಿದಿಲ್ಲ, ಒಬ್ಬ ವ್ಯಾಪಾರಿಯ ಜೊತೆ ಮಾತನಾಡೋದು ಬೇರೆ ಏನಿದೆ ಹೇಳಿ? ಅಂತಾ ಖಡಕ್ ರೀಪ್ಲೇ ಕೊಟ್ಟರು. ಹಾಗೇ, ನಾನು ಇಲ್ಲಿಗೆ ಬಂದಿರುವ ಉದ್ದೇಶ ನೆರವೇರಿದ್ದು, ಗುರಿ ಸಾಧಿಸಿದ್ದೀನಿ ಎಂದರು ಬೈಡನ್. ಹಾಗೇ ನಾನು ರಷ್ಯಾ ಸೇರಿದಂತೆ ಬೇರೆ ಯಾರ ವಿರೋಧಿಯೂ ಅಲ್ಲ, ಇಲ್ಲಿ ರಷ್ಯಾ ಹಾಗೂ ಅಮೆರಿಕ ನಡುವೆ ಉತ್ತಮ ಸಂಬಂಧ ಬೆಳೆಯಬೇಕಿದೆ ಎಂದು ಸ್ಪಷ್ಟನೆ ನೀಡಿದರು.

ನಾನೇನು ಅವನಿಗೆ ಫ್ರೆಂಡ್ ಅಲ್ಲ..!

ನಾನೇನು ಅವನಿಗೆ ಫ್ರೆಂಡ್ ಅಲ್ಲ..!

ಏನೇ ಬರಲಿ ಪುಟಿನ್ ಹಾಗೂ ಟ್ರಂಪ್ ಸ್ನೇಹದ ವಿಚಾರವನ್ನ ಬೈಡನ್ ಮರೆಯಲು ಸಾಧ್ಯವೇ ಇಲ್ಲ. ಪದೇ ಪದೆ ಈ ವಿಚಾರವನ್ನ ಬೈಡನ್ ಬಹಿರಂಗ ವೇದಿಕೆಯಲ್ಲಿ ಪ್ರಸ್ತಾಪ ಮಾಡುತ್ತಲೇ ಬಂದಿದ್ದಾರೆ. ಇಂದು ಕೂಡ ಇದೇ ರೀತಿ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಬೈಡನ್ ಮಾತನಾಡುವಾಗ, ನೀವು ಪುಟಿನ್ ಜೊತೆಗೆ ವೈಯಕ್ತಿಕವಾಗಿ ಏನು ಚರ್ಚಿಸಿದ್ರು ಎಂಬ ಪ್ರಶ್ನೆಗೆ ಖಡಕ್ ಆಗಿ ಉತ್ತರ ಕೊಟ್ಟರು ಬೈಡನ್. ನಾನು ಪುಟಿನ್‌ಗೆ ಹಳೆಯ ಸ್ನೇಹಿತ ಅಲ್ಲ ಎಂದರು. ಈ ಮೂಲಕ ಪುಟಿನ್ ಹಾಗೂ ಟ್ರಂಪ್ ಸ್ನೇಹವನ್ನ ನೆನಪಿಸಿದರು ಬೈಡನ್.

ತಂಟೆಗೆ ಬಂದ್ರೆ ಸುಮ್ಮನೆ ಕೂರಲ್ಲ..!

ತಂಟೆಗೆ ಬಂದ್ರೆ ಸುಮ್ಮನೆ ಕೂರಲ್ಲ..!

ಅಮೆರಿಕ ಜಗತ್ತಿನ ಪ್ರತಿಯೊಂದು ದೇಶದ ಜೊತೆಗೆ ಉತ್ತಮ ಸ್ನೇಹ ಬಯಸುತ್ತೆ. ಆದ್ರೆ ನಮ್ಮ ತಂಟೆಗೆ ಬಂದ್ರೆ ಸುಮ್ಮನಿರಲು ಆಗಲ್ಲ. ಅದರಲ್ಲೂ ಅಮೆರಿಕದ ಪ್ರಜಾಪ್ರಭುತ್ವದ ವಿಚಾರದಲ್ಲಿ ಬೇರೆಯವರು ಮೂಗು ತೂರಿಸಿ ಬಂದರೆ, ತಕ್ಕ ಉತ್ತರ ಗ್ಯಾರಂಟಿ ಎಂದು ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಮತ್ತೆ ಗುಡುಗಿದ್ರು. ಇನ್ನೂ ಹಲವು ರಹಸ್ಯ ಮಾತುಕತೆಗಳು ಪುಟಿನ್-ಬೈಡನ್ ನಡುವೆ ನಡೆದಿದೆ ಎನ್ನಲಾಗಿದೆ. ಆದ್ರೆ ಈ ವಿಚಾರ ಬಹಿರಂಗವಾಗಿ ಹಂಚಿಕೊಳ್ಳಲು ಬೈಡನ್ ನಿರಾಕರಿಸಿದರು. ಭದ್ರತೆ ಸಂಬಂಧಿತ ವಿಚಾರಗಳ ಬಗ್ಗೆ ಎರಡೂ ರಾಷ್ಟ್ರಗಳ ಅಧ್ಯಕ್ಷರು ಸುದೀರ್ಘ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಸೈಬರ್ ಕಳ್ಳರಿಗೆ ಮಾರಿಹಬ್ಬ..!

ಸೈಬರ್ ಕಳ್ಳರಿಗೆ ಮಾರಿಹಬ್ಬ..!

ಒಟ್ಟಾರೆ ಪುಟಿನ್ ಹಾಗೂ ಬೈಡನ್ ಭೇಟಿ ವೇಳೆ ಸೈಬರ್ ದಾಳಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಅಂದ್ರೆ ರಷ್ಯಾ ಮೂಲದ ಸೈಬರ್ ಕಳ್ಳರು ಅಮೆರಿಕದ ಮೇಲೆ ಪದೇ ಪದೆ ದಾಳಿ ನಡೆಸುತ್ತಿರುವ ಆರೋಪವಿದೆ. ಇದೇ ಕಾರಣಕ್ಕೆ ಅಮೆರಿಕ ರೊಚ್ಚಿಗೆದ್ದಿದೆ. ಪುಟಿನ್ ಬಳಿ ಸೈಬರ್ ಕಳ್ಳರ ಬಗ್ಗೆ ಪ್ರಸ್ತಾಪಿಸಿರುವ ಬೈಡನ್, ಒಂದು ಗತಿ ಕಾಣಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಬರ್ ಕಳ್ಳರ ಹೆಡೆಮುರಿ ಕಟ್ಟಲು ರಷ್ಯಾದಿಂದ ಅಗತ್ಯವಿರುವ ಎಲ್ಲಾ ಬೆಂಬಲ ಒದಗಿಸುತ್ತೇವೆ ಎಂದಿದ್ದಾರೆ ಪುಟಿನ್. ಇದು ಸೈಬರ್ ಕಳ್ಳರ ಎದೆ ನಡುಗಿಸಿದೆ.

English summary
After meeting with Putin, Biden said that he is not against Russia or anyone
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X