ಉಗ್ರರ ನಂಟು: ಭಟ್ಕಳ ಮೂಲದ ವ್ಯಕ್ತಿ ದುಬೈಯಲ್ಲಿ ಬಂಧನ

ದುಬೈ, ನ.22: ಇರಾಕಿ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಭಟ್ಕಳ ಮೂಲದ ವ್ಯಕ್ತಿಯಲ್ಲಿ ದುಬೈನಲ್ಲಿ ಬಂಧಿಸಲಾಗಿದೆ. ಕರ್ನಾಟಕದ ಭಟ್ಕಳ ಮೂಲದ ಅದ್ನಾನ್ ದಮುಡಿ ಎಂಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ದುಬೈ ಪೊಲೀಸರು ಹೇಳಿದ್ದಾರೆ.

2012ರಲ್ಲಿ ದುಬೈ ಬಂದು ನೆಲೆಸಿರುವ ಅದ್ನಾನ್ ಅವರು ವೃತ್ತಿಯಿಂದ ಅಕೌಂಟೆಟ್ ಆಗಿದ್ದಾರೆ. ಇತ್ತೀಚೆಗೆ ಆತನ ಚಲನವಲನ ಮೇಲೆ ಅನುಮಾನ ಬಂದ ಕಾರಣ ಆತನ ಮೇಲೆ ನಿಗಾವಹಿಸಲಾಗಿತ್ತು. ಇಸೀಸ್ ಗೆ ಯುವಕರನ್ನು ಸೇರಿಸುವ ಕಾರ್ಯವನ್ನು ಅದ್ನಾನ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. [ಇರಾಕಿ ಉಗ್ರರ ವಿರುದ್ಧ ಕರ್ನಾಟಕ ಮಸೀದಿಗಳ ಯುದ್ಧ]

Bhatkal resident detained in Dubai over alleged ISIS link

ಅನೇಕ ಭಾರತೀಯ ಮೂಲದ ಯುವಕರ ಮೇಲೆ ಪ್ರಭಾವ ಬೀರಿ ಇರಾಕಿ ಉಗ್ರ ಸಂಘಟನೆಯತ್ತ ಸೆಳೆಯುವಲ್ಲಿ ಅದ್ನಾನ್ ಯಶಸ್ವಿಯಾಗಿದ್ದ. [ಪ್ಯಾರಿಸ್‌ ಉಗ್ರರ ದಾಳಿಯ ಹೊಣೆಹೊತ್ತ ಐಎಸ್‌ಐಎಸ್]

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ @adnandamudi ಎಂಬ ಖಾತೆ ಮೂಲಕ ಆತ ಕಾರ್ಯ ನಿರ್ವಹಿಸುತ್ತಿದ್ದಾನೆ. ಈ ಮೂಲಕ ಐಎಸ್ಐಎಸ್ ಗೆ ಯುವಕರನ್ನು ಸೇರಿಸುತ್ತಿದ್ದತೆಲಂಗಾಣ ಮೂಲದ ಯುವಕರನ್ನು ಹೆಚ್ಚಾಗಿ ಸೆಳೆಯಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.

ಭಾರತೀಯ ತನಿಖಾ ಸಂಸ್ಥೆಗಳು ಈಗ ದುಬೈನ ಪೊಲೀಸರ ಸಂಪರ್ಕದಲ್ಲಿದ್ದು, ಅದ್ನಾನ್ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಿದ್ದಾರೆ. ಅದರೆ, ಅದ್ನಾನ್ ಬಂಧನ ನಂತರ ಹೆಚ್ಚಿನ ವಿಷಯ ಇನ್ನೂ ಸ್ಪಷ್ಟವಾಗಿಲ್ಲ. ಅದ್ನಾನ್ ನನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಭಾರತೀಯ ತನಿಖಾ ಸಂಸ್ಥೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+