ವಿವಸ್ತ್ರಗೊಳಿಸಿ ಬೆಂಗಳೂರು ಮಹಿಳೆಯ ಶೋಧ ನಡೆಸಿದ ಏರ್ಪೋರ್ಟ್ ಸಿಬ್ಬಂದಿ

ಬೆಂಗಳೂರಿನಿಂದ ಐಸ್ ಲ್ಯಾಂಡಿಗೆ ಪ್ರಯಾಣಿಸುತ್ತಿದ್ದ ದಂಪತಿಗಳ ಜತೆ ಫ್ರಾಂಕ್ ಫರ್ಟ್ ಏರ್ಪೋರ್ಟ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಘಟನೆ ನಡೆದಿದೆ.

ಬೆಂಗಳೂರು, ಏಪ್ರಿಲ್ 2: ಬೆಂಗಳೂರಿನಿಂದ ಐಸ್ ಲ್ಯಾಂಡಿಗೆ ಪ್ರಯಾಣಿಸುತ್ತಿದ್ದ ದಂಪತಿಗಳ ಜತೆ ಫ್ರಾಂಕ್ ಫರ್ಟ್ ಏರ್ಪೋರ್ಟ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಘಟನೆ ನಡೆದಿದೆ.

ಶ್ರುತಿ ಬಸಪ್ಪ ದಂಪತಿಗಳು 4 ವರ್ಷದ ಮಗಳ ಜತೆ ಬೆಂಗಳೂರಿನಿಂದ ಐಸ್ ಲ್ಯಾಂಡ್ ಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಜರ್ಮನಿಯ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬರ್ಲಿನ್ ಗೆ ವಿಮಾನ ಹತ್ತಲು ಇಳಿದಿದ್ದರು. ಈ ವೇಳೆ ಅಲ್ಲಿನ ಭದ್ರತಾ ಸಿಬ್ಬಂದಿ ಲೋಹ ಶೋಧಕ ಯಂತ್ರದಿಂದ ತಪಾಸಣೆ ಮಾಡಿಯೂ ಅಮಾನವೀಯವಾಗಿ ವರ್ತಿಸಿದ್ದಾರೆ.[ದಲೈ ಲಾಮಾ ವಿಚಾರದಲ್ಲಿ ಭಾರತ ಸರ್ಕಾರಕ್ಕೆ ಚೀನಾ ವಾರ್ನಿಂಗ್]

Bengaluru woman told to strip her dress at Frankfurt airport

ಲೋಹ ಶೋಧಕದಿಂದ ತಪಾಸಣೆ ಮಾಡಿ ನಂತರ "ಹೆಚ್ಚಿನ ತಪಾಸಣೆ ಹೆಸರಿನಲ್ಲಿ ಮಹಿಳಾ ಅಧಿಕಾರಿ ನನ್ನನ್ನು ಕೊಠಡಿಗೆ ಕರೆದುಕೊಂಡು ಹೋದರು. ಜತೆಗೆ ನನ್ನ ಮಗಳೂ ಇದ್ದಳು. ಅಧಿಕಾರಿಗಳು ಮಗಳ ಎದುರಿನಲ್ಲೇ ಬಟ್ಟೆ ಬಿಚ್ಚಿಸಿದರು. ಒಳ ಉಡುಪು ಸಹಿತ ಬಟ್ಟೆಯನ್ನೆಲ್ಲಾ ಬಿಚ್ಚಿಸಿದರು," ಎಂದು ಶ್ರುತಿ ಬಸಪ್ಪ ಫೇಸ್ಬುಕ್ ನಲ್ಲಿ ಅಳಲು ತೋಡಿಕೊಂಡಿದ್ದಾರೆ.

"ಹೊಟ್ಟೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ ಎಂದು ಪ್ರಮಾಣ ಪತ್ರ ತೋರಿಸಿ ಗೋಗರೆದರೂ ಬಿಡಲಿಲ್ಲ," ಎಂದು ಶ್ರುತಿ ಮಾಹಿತಿ ಹಂಚಿಕೊಂಡಿದ್ದಾರೆ.[ಹಳೇನೋಟು ಬದಲಿಸಲು ಅನಿವಾಸಿ ಭಾರತೀಯರಿಗೆ ಬಾಗಿಲು ತೆರೆದಿದೆ]

'ಆರಂಭದಲ್ಲಿ ಲೋಹ ಶೋಧಕ ಯಂತ್ರದಿಂದ ತಪಾಸಣೆ ಮಾಡಿ ಮತ್ತೆ ಕೊಠಡಿಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿಸಿದ್ದಾರೆ. ನಾನು ಭಾರತೀಯಳು ಬಟ್ಟೆ ಬಿಚ್ಚಲು ಸಾಧ್ಯವಿಲ್ಲ. ಯಾವುದೇ ಆಧುನಿಕ ಸಾಧನದಿಂದ ತಪಾಸಣೆ ಮಾಡಿ ಎಂದು ಹೇಳಿದರೂ ಕೇಳಲಿಲ್ಲ. ಇದೊಂದು ಅಮಾನವೀಯ, ಅಸಹ್ಯಕರ,' ಎಂದು ಶ್ರುತಿ ಕಿಡಿಕಾರಿದ್ದಾರೆ.

ಶ್ರುತಿ ಬಳಿ ಭಾರತೀಯ ಪಾಸ್ಪೋರ್ಟ್ ಇದ್ದು, ಪತಿ ಐಸ್ ಲ್ಯಾಂಡ್ ಪ್ರಜೆಯಾಗಿದ್ದಾರೆ. 'ಇತ್ತೀಚೆಗೆ ಭಾರತಕ್ಕೆ ಬಂದಿದ್ದ ನಾವು ಐಸ್ ಲ್ಯಾಂಡಿಗೆ ವಾಪಸ್ ಹೋಗುತ್ತಿದ್ದೆವು,' ಎಂದು ಶ್ರುತಿ ತಮ್ಮ ಪೋಸ್ಟ್ ನಲ್ಲಿ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+