ಅಚ್ಚರಿ ಸುದ್ದಿ: 20 ದಿನ ಕಣ್ಣಿನಲ್ಲೇ ಕೊರೊನಾ ವೈರಸ್ ಕಾಲಹರಣ!

ನವದೆಹಲಿ, ಏಪ್ರಿಲ್.22: ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದರೂ ಆತಂಕ ತಪ್ಪಿದ್ದಲ್ಲ. ಏಕೆಂದರೆ ಮಹಾಮಾರಿಯ ಸುಳಿಗೆ ಒಮ್ಮೆ ಸಿಲುಕಿದ ಸೋಂಕಿತನು ಸುರಕ್ಷಿತವಾಗಿ ಹಿಂತಿರುಗಿದರೂ ಆತನ ಕಣ್ಣುಗಳಲ್ಲಿ ಸೋಂಕು 20 ದಿನಗಳ ಕಾಲ ಜೀವಂತವಾಗಿ ಇರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೊರೊನಾ ವೈರಸ್ ಸೋಂಕಿತನ ಶ್ವಾಸಕೋಶವನ್ನು ಹೊಕ್ಕ ವೈರಸ್ ಗಳೆಲ್ಲ ನಾಶವಾದ ನಂತರದಲ್ಲಿ ಸೋಂಕಿತರ ಆರೋಗ್ಯ ಚೇತರಿಸಿಕೊಳ್ಳುತ್ತದೆ. ಹೀಗೆ ಚೇತರಿಕೆ ಕಂಡ ಸೋಂಕಿತನ ಕಣ್ಣುಗಳಲ್ಲಿ ವೈರಸ್ 20 ದಿನವು ಜೀವಂತವಾಗಿ ಇರುತ್ತದೆ ಎನ್ನಲಾಗಿದೆ.

ಜನವರಿ.23ರಂದು ಚೀನಾದ ವುಹಾನ್ ನಗರದಿಂದ ಇಟಲಿಗೆ ವಾಪಸ್ ಆಗಿದ್ದ 65 ವರ್ಷದ ವೃದ್ಧೆಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಸೋಂಕಿತೆಗೆ ಚಿಕಿತ್ಸೆ ನೀಡಿ ಗುಣಮುಖವಾದ ನಂತರವೂ ವೃದ್ಧೆಯ ಕಣ್ಣುಗಳಲ್ಲಿ ಸೋಂಕಿತ ಲಕ್ಷಣ ಕಂಡು ಬಂದಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಚೀನಾ ಟು ಇಟಲಿಗೆ ತೆರಳಿದ 65 ವರ್ಷದ ವೃದ್ಧೆಗೆ ಕೊರೊನಾ

ಚೀನಾ ಟು ಇಟಲಿಗೆ ತೆರಳಿದ 65 ವರ್ಷದ ವೃದ್ಧೆಗೆ ಕೊರೊನಾ

ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸನ್ ನಲ್ಲಿ ಸಂಶೋಧಕರು ಈ ಕುರಿತು ಬರೆದಿರುವ ಪತ್ರವು ಪ್ರಕಟವಾಗಿದೆ. ಚೀನಾದ ವುಹಾನ್ ನಿಂದ ಇಟಲಿಗೆ ಆಗಮಿಸಿದ ವೃದ್ಧೆಯಲ್ಲಿ ಒಣಕೆಮ್ಮು, ಶೀತ ಹಾಗೂ 100 ಸೆಲ್ಸಿಯಸ್ ತೀವ್ರತೆಯಷ್ಟು ಜ್ವರವು ಕಾಣಿಸಿಕೊಂಡಿತ್ತು. ಈ ವೃದ್ಧೆಯು ಇಟಲಿಯ ಲ್ಯಾಜೋರೊ ಸ್ಪಾಲೆಂಜಾನಿ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಇನ್ಫೆಕ್ಷಸ್ ಡಿಸೀಸಸ್ ಹಾಸ್ಪಿಟಲ್ ಗೆ ಮರುದಿನವೇ ದಾಖಲಾದರು.

ವೃದ್ಧೆಯ ಕಣ್ಣಿನ ದ್ರವ್ಯ ತಪಾಸಣೆ ನಡೆಸಿದ ವೈದ್ಯರು

ವೃದ್ಧೆಯ ಕಣ್ಣಿನ ದ್ರವ್ಯ ತಪಾಸಣೆ ನಡೆಸಿದ ವೈದ್ಯರು

ಕೊರೊನಾ ವೈರಸ್ ಸೋಂಕಿತ ವೃದ್ಧೆಯು ಆಸ್ಪತ್ರೆಗೆ ದಾಖಲಾದ ದಿನದಿಂದಲೂ ಕಣ್ಣಿನ ದ್ರವ್ಯ ತಪಾಸಣೆ ನಡೆಸಲಾಯಿತು. ನಿರಂತರವಾಗಿ 21 ದಿನಗಳ ಕಾಲ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಕಣ್ಣಿನ ದ್ರವ್ಯದಲ್ಲಿ ಸೋಂಕು ಪತ್ತೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕಣ್ಣಿನಿಂದಲೇ ಅತಿಹೆಚ್ಚು ಕೊರೊನಾ ಸೋಂಕು ಹರಡುವಿಕೆ

ಕಣ್ಣಿನಿಂದಲೇ ಅತಿಹೆಚ್ಚು ಕೊರೊನಾ ಸೋಂಕು ಹರಡುವಿಕೆ

ಕೊರೊನಾ ವೈರಸ್ ಸೋಂಕಿತರನ್ನು ಸ್ಪರ್ಶಿಸುವುದು, ಕೆಮ್ಮುವುದು, ಸೀನುವುದರಿಂದ ಸೋಂಕು ಹರಡುತ್ತದೆ ಎಂಬ ಪ್ರಾಥಮಿಕ ಅಂಶಗಳು ಎಲ್ಲರಿಗೂ ತಿಳಿದಿದ್ದೇ. ಆದರೆ ದೈಹಿಕ ಸಂಪರ್ಕಕ್ಕಿಂತಲೂ ಹೆಚ್ಚಾಗಿ ಅತಿಮುಖ್ಯವಾಗಿ ಸೋಂಕು ಪ್ರವೇಶಿಸುವ ಮುಖ್ಯದ್ವಾರವೇ ಕಣ್ಣು. ಸೋಂಕಿತರ ಕಣ್ಣೀರಿನಿಂದ ಕೊರೊನಾ ವೈರಸ್ ಹರಡುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ಕಡಿವಾಣ ಯಾವಾಗ?

ಕೊರೊನಾ ಸೋಂಕು ಹರಡುವಿಕೆ ಕಡಿವಾಣ ಯಾವಾಗ?

ದೇಶವನ್ನು ಕಾಡುತ್ತಿರುವ ಕೊರೊನಾ ವೈರಸ್ ಸೋಂಕು ದೈಹಿಕ ಸಂಪರ್ಕಕ್ಕೂ ಮೊದಲು ಕಣ್ಣುಗಳಿಂದಲೇ ಹೆಚ್ಚಾಗಿ ಹರಡುತ್ತಿದೆ ಎಂದು ಸಂಶೋಧಕರು ಶಂಕೆ ವ್ಯಕ್ತಪಡಿಸಿದ್ದಾರೆ. ಕಣ್ಣುಗಳಿಂದಲೇ ಸೋಂಕಿತರ ಸಂಖ್ಯೆ ಇಷ್ಟರ ಮಟ್ಟಿಗೆ ಏರಿಕೆಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+