ಶ್ರೀಲಂಕಾ ಬಾಂಬ್ ಸ್ಫೋಟ: ಬಾಂಗ್ಲಾ ಪ್ರಧಾನಿ ಮೊಮ್ಮಗ ವಿಧಿವಶ
ಕೊಲಂಬೊ, ಏಪ್ರಿಲ್ 22: ನಿನ್ನೆ ಶ್ರೀಲಂಕಾದಲ್ಲಿ ನಡೆದ ಭೀಕರ ಸರಣಿ ಬಾಂಬ್ ದಾಳಿಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಎಂಟು ವರ್ಷದ ಮೊಮ್ಮಗ ಸಹ ಸಾವಿಗೀಡಾಗಿದ್ದಾರೆ.
ಶೇಖ್ ಹಸೀನಾ ಅವರ ಕುಟುಂಬವು ಕೊಲಂಬೊದಲ್ಲಿನ ಶಾಂಗ್ರಿಲಾ ಹೊಟೆಲ್‌ನಲ್ಲಿ ತಂಗಿದ್ದರು, ಬೆಳಿಗ್ಗೆ ಉಪಹಾರ ಸೇವಿಸುವ ಸಮಯದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಈ ಸಮಯ ಶೇಖ್ ಹಸೀನಾ ಅವರ ಕುಟುಂಬ ಸದಸ್ಯರು ತೀವ್ರವಾಗಿ ಗಾಯಗೊಂಡಿದ್ದರು, ಮೊಮ್ಮಗ ನಾಪತ್ತೆಯಾಗಿದ್ದ.

ಆದರೆ ನಂತರ ಪೊಲೀಸ್ ಅಧಿಕಾರಿಗಳು ಶೇಖ್ ಹಸೀನಾ ಅವರ ಮೊಮ್ಮಗ ಸೋಬ್ ಜಯಾನ್ ಚೌಧರಿ ಸಾವಿಗೀಡಾಗಿದ್ದಾರೆ ಎಂದು ಖಚಿತಪಡಿಸಿದ್ದರು.
ಸಾವಿಗೀಡಾಗಿರುವ ಸೋಬ್ ಜಯಾನ್ ಚೌಧರಿಯು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಸೋದರರ ಮಗಳು ಶೇಖ್ ಸೋನಿಯಾ ಅವರ ಮಗನಾಗಿದ್ದರು.
ಶೇಖ್ ಸೊನಿಯಾ ಅವರು ತಮ್ಮ ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ರಜೆ ಕಳೆಯಲು ಶ್ರೀಲಂಕಾಕ್ಕೆ ಬಂದಿದ್ದರು, ಬಾಂಬ್ ದಾಳಿಯಲ್ಲಿ ಶೇಖ್ ಸೋನಿಯಾ ಅವರ ಪತಿ ತೀವ್ರವಾಗಿ ಗಾಯಗೊಂಡಿದ್ದಾರೆ.












Click it and Unblock the Notifications