ಬಾಂಗ್ಲಾದೇಶ ವಿರೋಧ ಪಕ್ಷದ ನಾಯಕರ ಕಿರಿಕ್: ಈಗ ಏನು ಬೇಕಂತೆ?
ಆಂತರಿಕ ಬೆಂಕಿಯಲ್ಲಿ ಬೆಂದು ಹೋಗಿರುವ ಬಾಂಗ್ಲಾದೇಶದಲ್ಲಿ ನೆಮ್ಮದಿಯೇ ಇಲ್ಲವಾಗಿದ್ದು, ಜನ ಇದೀಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎನ್ನುವಂತೆ ಬಾಂಗ್ಲಾ ಪರಿಸ್ಥಿತಿ ಕೂಡ ಸಣ್ಣ ವಿಚಾರಕ್ಕೆ ಹೊತ್ತಿ ಉರಿದಿದೆ. ಹೀಗಿದ್ದಾಗ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಜೀವ ಭಯದಲ್ಲಿ ತಮ್ಮ ದೇಶ ಬಿಟ್ಟು ಓಡಿ ಬಂದಿದ್ದು, ಭಾರತದ ಸೇನಾ ನೆಲೆಯಲ್ಲಿ ಜಾಗ ಪಡೆದಿದ್ದಾರೆ. ಆದರೆ ಈ ವಿಚಾರ ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕರಿಗೆ ಉರಿ ಉರಿ ತರಿಸಿದೆ!
ಅಂದಹಾಗೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಮರಳಿ ಬಾಂಗ್ಲಾಗೆ ಕಳುಹಿಸಿ ಅಂತಾ ಇದೀಗ ಒತ್ತಡವು ಹೆಚ್ಚಾಗುತ್ತಿದೆ. ಅದರಲ್ಲೂ, ಬಾಂಗ್ಲಾದೇಶದ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಕಿರಿಕ್ ಜೋರು ಮಾಡಿವೆ. ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶ್ರಮ ವಹಿಸಿದ್ದ, ಹೋರಾಟಗಾರರಿಗೆ ಮೀಸಲಾತಿ ನೀಡುವ ವಿಚಾರದ ಸಂಬಂಧ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿತ್ತು. ಈ ವಿಚಾರವನ್ನು ಕೂತು ಬಗೆಹರಿಸಲು ಸಾಧ್ಯವಿತ್ತು. ಆದರೆ ಆಗಿದ್ದೇ ಬೇರೆ, ಬಾಂಗ್ಲಾದೇಶವೇ ಹೊತ್ತಿ ಉರಿಯುವಂತೆ ಮಾಡಿದ್ದರು ಪ್ರತಿಭಟನಾಕಾರರು. ಹೀಗಿದ್ದಾಗ ಭಾರತದ ಜೊತೆಗೂ ಕಿರಿಕ್ ತೆಗೆಯಲು ಅಲ್ಲಿನ ವಿರೋಧ ಪಕ್ಷಗಳ ನಾಯಕರು ಕುತಂತ್ರ ನಡೆಸಿರುವ ಆರೋಪ ಈಗ ಕೇಳಿಬಂದಿದೆ.

ಬಾಂಗ್ಲಾ ಹೊಸ ಕಿರಿಕ್ ಏನು?
ಹೌದು, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಂದ್ರೆ ಬಿಎನ್‌ಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್ ಹೊಸ ಕಿರಿಕ್ ಶುರು ಮಾಡಿದ್ದಾರೆ. ಕಳೆದ ಹಲವಾರು ದಿನಗಳಿಂದ ಕೂಡ ಇದೇ ರೀತಿಯಾಗಿ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್ ಕಿರಿಕ್ ಮಾಡ್ತಾ ಇದ್ದಾರೆ. ಅದೇ ರೀತಿ ಈಗ ಮತ್ತೊಂದು ಹೇಳಿಕೆ ನೀಡಿರುವ ಆಲಂಗೀರ್, ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ಭಾರತ ತಕ್ಷಣ ಬಾಂಗ್ಲಾದೇಶಕ್ಕೆ ಹಸ್ತಾಂತರ ಮಾಡಬೇಕಿದೆ. ಈ ಮೂಲಕ ಎರಡೂ ದೇಶಗಳ ಬಾಂಧವ್ಯ ಮತ್ತೊಂದು ಹಂತಕ್ಕೆ ಹೋಗಬೇಕು ಎಂದಿದ್ದಾರೆ. ಕೆಲವು ದಿನಗಳ ಹಿಂದೆ ಕೂಡ ಇದೇ ರೀತಿ ಮಾತನಾಡಿ ಸಂಚಲನ ಸೃಷ್ಟಿ ಮಾಡಿದ್ದರು ಇದೇ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್.
ಸಂಬಂಧ ಉಳಿಸಿಕೊಳ್ಳಲು ಸಲಹೆ!
ಇದೀಗ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್ ನೀಡಿರುವ ವಿವರಣೆ ಪ್ರಕಾರ, ಶೇಖ್ ಹಸೀನಾ ಅವರು ಭಾರತದಲ್ಲಿ ಹೆಚ್ಚು ಕಾಲ ವಾಸ ಮಾಡಿದರೆ ಭಾರತ & ಬಾಂಗ್ಲಾ ಸಂಬಂಧ ಹಾಳಾಗಿ ಹೋಗುವ ಆತಂಕ ಇದೆ. ಹೀಗೆ ಎರಡೂ ದೇಶಗಳ ಸಂಬಂಧ ಹಾಳಾಗುವ ಬದಲು ಉಳಿಸಿಕೊಳ್ಳಲು ಭಾರತ ಗಟ್ಟಿ ನಿರ್ಧಾರ ಕೈಗೊಳ್ಳಬೇಕಿದೆ ಎಂದಿದ್ದಾರೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಪ್ರಧಾನ ಕಾರ್ಯದರ್ಶಿ.












Click it and Unblock the Notifications