ಬಾಂಗ್ಲಾದೇಶ ಧಗಧಗ, ಹಿಂದೂಗಳೇ ಟಾರ್ಗೆಟ್ ಆಗಿರುವುದು ಏಕೆ? Bangladesh Hindu
ಬಾಂಗ್ಲಾದೇಶ ಧಗಧಗ ಅಂತಾ ಹೊತ್ತಿ ಉರಿಯುತ್ತಿದೆ, ತಿನ್ನಲು ಅನ್ನ ಸಿಗದಿದ್ದರೂ ಹಿಂಸಾಚಾರ ಕಡಿಮೆ ಆಗುತ್ತಿಲ್ಲ. ಭಾರತದ ಸಹಾಯ ಪಡೆದು ಸ್ವಾತಂತ್ರ್ಯ ಪಡೆದ ದೇಶ ಇದೀಗ ಭಾರತವನ್ನೇ ದ್ವೇಷ ಮಾಡುತ್ತಾ ಎದುರು ಹಾಕಿಕೊಳ್ಳುವ ಹಂತಕ್ಕೆ ಬಂದಿದೆ. ಅದರಲ್ಲೂ ಬಾಂಗ್ಲಾದೇಶ ನೆಲ ಇದೀಗ ಹಿಂದೂಗಳಿಗೆ ಸೇಫ್ ಅಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ಸಮಯದಲ್ಲೇ ಮತ್ತೆ ಮತ್ತೆ ಹಿಂದೂಗಳ ಮೇಲೆ ಅಟ್ಯಾಕ್ ಆಗುತ್ತಿದೆ. ಈಗಲೂ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದ್ದು, ಶಾಂತಿ ಕಾಪಾಡಬೇಕಿದ್ದ ಸರ್ಕಾರ ಮಾತ್ರ ಕೈಕಟ್ಟಿ ಕುಳಿತಂತೆ ಕಾಣುತ್ತಿದೆ.
ಹೌದು, ಬಾಂಗ್ಲಾದೇಶ ಈ ಹಿಂದೆ ಪಾಕಿಸ್ತಾನದ ಕೈಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಾ ತೀವ್ರ ತೊಂದರೆಯಲ್ಲಿ ಇತ್ತು. ಇಂತಹ ಸಮಯದಲ್ಲಿ ಭಾರತವೇ ಮುಂದೆ ಬಂದು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸಿತ್ತು. ಆದರೆ ಆ ನಂತರ ಭಾರತದ ಜೊತೆಗೆ ಚನ್ನಾಗಿ ಇದ್ದ ಬಾಂಗ್ಲಾದೇಶದ ರಾಜಕೀಯ ನಾಯಕರಿಗೆ ತಲೆ ಕೆಟ್ಟು ಹೋಗಿದೆ ಅಂತಾ ಕಾಣುತ್ತಿದೆ. ಈ ಕಾರಣಕ್ಕೆ ಭಾರತದ ವಿರುದ್ಧ ಪದೇ ಪದೇ ವಿಷ ಕಾರುತ್ತಿರುವ ಬಾಂಗ್ಲಾದೇಶ ಸರ್ಕಾರ, ಅಲ್ಲಿರುವ ಜನರನ್ನು ಕೂಡ ರೊಚ್ಚಿಗೆಬ್ಬಿಸಿದೆ. ಇದರ ಪರಿಣಾಮ ಇದೀಗ ಬಾಂಗ್ಲಾದೇಶ ಕೋಮು ಗಲಭೆಯ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದು, ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿರುವ ಆರೋಪ ಇಡೀ ಜಗತ್ತಿನಾದ್ಯಂತ ತಲ್ಲಣ ಎಬ್ಬಿಸಿದೆ.

ಪದೇ ಪದೇ ಹಿಂದೂಗಳ ಹತ್ಯೆ
ಕೆಲವು ದಿನಗಳ ಹಿಂದಷ್ಟೇ ಬಾಂಗ್ಲಾ ನೆಲದಲ್ಲಿ ಭೀಕರವಾಗಿ ಹಿಂದೂಗಳ ಹತ್ಯೆ ನಡೆದಿದೆ ಎಂದು ಇಡೀ ಜಗತ್ತಿನಲ್ಲಿ ಆಕ್ರೋಶ ಮೊಳಗಿತ್ತು. ಇಷ್ಟೆಲ್ಲದರ ನಡುವೆ ಇದೀಗ ಬಾಂಗ್ಲಾದೇಶದ ನರಸಿಂಗ್ಡಿ ನಗರದ ದಿನಸಿ ಅಂಗಡಿಯ ಮಾಲೀಕ 40 ವರ್ಷ ವಯಸ್ಸಿನ ಹಿಂದೂ ಪ್ರಜೆಯನ್ನು ಹತ್ಯೆ ಮಾಡಿದ ಆರೋಪ ಕೇಳಿ ಬಂದಿದೆ. ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿದ ಬಗ್ಗೆ ಬಾಂಗ್ಲಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದರ ಜೊತೆಗೆ ಮೋನಿ ಚಕ್ರವರ್ತಿ ಎಂಬುವವರನ್ನು ಕೂಡ ಹತ್ಯೆ ಮಾಡಿರುವುದು ಕಿಚ್ಚು ಹೊತ್ತಿಸಿದೆ. ಜನವರಿ 6 ಮಂಗಳವಾರ ಈ ಘಟನೆ ನಡೆದು ಇಡೀ ಬಾಂಗ್ಲಾ ನೆಲದಲ್ಲಿ ಮತ್ತಷ್ಟು ತಲ್ಲಣ ಸೃಷ್ಟಿಯಾಗುವಂತೆ ಮಾಡಿದೆ.
ನಿರಂತರ ನಡೆಯುತ್ತಿರುವ ದಾಳಿ
ಒಟ್ನಲ್ಲಿ ಬಾಂಗ್ಲಾ ಸರ್ಕಾರ ಬಾಯಿ ಮುಚ್ಚಿಕೊಂಡು ಕೂತಿರುವ ಕಾರಣ ಅಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದ್ದು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈಗಾಗಲೇ ಭಾರತದಲ್ಲಿ ಕೂಡ ಈ ಘಟನೆಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿ ಹೋರಾಟಗಳು ನಡೆದಿವೆ. ಮತ್ತೊಂದು ಕಡೆ ಬಾಂಗ್ಲಾ ಸರ್ಕಾರ ಇದೇ ರೀತಿ ವರ್ತನೆ ತೋರಿಸುತ್ತಾ ಹೋದರೆ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಎದುರಿಸುವುದು ಗ್ಯಾರಂಟಿ.












Click it and Unblock the Notifications