Baba Vanga Predictions: ಬಾಬಾ ವೆಂಗಾ ನುಡಿದ ಭಯಾನಕ ಭವಿಷ್ಯಗಳಿವು: ಈ ವರ್ಷ ಏನೆಲ್ಲಾ ಆಗಲಿದೆ ಗೊತ್ತಾ?
Baba Vanga Predictions: ಬಾಬಾ ವೆಂಗಾ ಎಂದೇ ಖ್ಯಾತಿ ಪಡೆದಿರುವ ವಾಂಗೆಲಿಯಾ ಪಾಂಡೆವಾ ಗುಸ್ಚೆರೋವಾ ಅವರ ಹಾಗಾಗ ಭಯಾನಕ ಭವಿಷ್ಯಗಳನ್ನು ನುಡಿಯುವ ಮೂಲಕ ಸುದ್ದಿಯಲ್ಲಿರುತ್ತಲೇ ಇದ್ದರು. ಹಾಗಾದರೆ ಅವರು ನುಡಿದಿರುವ 2025 ಹಾಗೂ ಮುಂದಿನ ಭವಿಷ್ಯಗಳಲ್ಲಿ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಬಾಬಾ ವೆಂಗಾ ಎಂದೇ ಖ್ಯಾತಿ ಪಡೆದಿರುವ ವಾಂಗೆಲಿಯಾ ಪಾಂಡೆವಾ ಗುಸ್ಚೆರೋವಾ ಮತ್ತೊಂದು ಭವಿಷ್ಯ ಇದೀಗ ಭಾರೀ ಚರ್ಚೆಗೆ ಕಾರಣ ಆಗಿದೆ. ಬಲ್ಗೇರಿಯಾ ಮೂಲದ ಬಾಬಾ ವೆಂಗಾ 1996ರಲ್ಲಿ 85ನೇ ವಯಸ್ಸಿಗೆ ಮೃತಪಟ್ಟಿದ್ದರು. ಜೀವತಾವಧಿಯಲ್ಲಿ ಅವರು ನುಡಿದ ಹಲವಾರು ಭವಿಷ್ಯಗಳು ನಿಜವಾಗಿದ್ದು, ಆಧುನಿಕ ನಾಸ್ಟ್ರಡಾಮಸ್ ಎಂದೇ ಖ್ಯಾತರಾಗಿದ್ದರು.

12ನೇ ವಯಸ್ಸಿಗೆ ದೃಷ್ಟಿ ಕಳೆದುಕೊಂಡಿದ್ದು, ಅಂದಿನಿಂದ ನನಗೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಉಡುಗೊರೆ ಸಿಕ್ಕಿತು ಎಂದು ಅವರು ಹೇಳಿಕೊಂಡಿದ್ದರು. ಅಮೆರಿಕದ ಮೇಲೆ 2001 ಸೆಪ್ಟೆಂಬರ್ 11ರಂದು ವಿಮಾನದ ಮೂಲಕ ದಾಳಿ ಮಾಡಲಿದ್ದಾರೆ ಎಂದು ನುಡಿದಿದ್ದ ಭವಿಷ್ಯ ನಿಜವಾದ ನಂತರ ಬಾಬಾ ವೆಂಗಾ ಅವರ ಭವಿಷ್ಯಕ್ಕೆ ಅಪಾರ ಅಭಿಮಾನಿಗಳು ಇದ್ದಾರೆ.
ಭವಿಷ್ಯಗಳು ಹೀಗಿವೆ
* 2025ರಲ್ಲಿ ಯುರೋಪ್‌ನಲ್ಲಿ ಪ್ರಮುಖ ಸಂಘರ್ಷದಿಂದ ಜನಸಂಖ್ಯೆಯಲ್ಲಿ ಭಾರೀ ಕುಸಿತವಾಗಲಿದೆ.
* 2028ರಲ್ಲಿ ಶುಕ್ರ ಗ್ರಹ ತಲುಪಿವ ಮನುಷ್ಯರು ಹೊಸ ಇಂಧನ ಶಕ್ತಿಯ ಆವಿಷ್ಕಾರ ಮಾಡಲಿದೆ.
* 2033ರಲ್ಲಿ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ಮಂಜುಗಡ್ಡೆಗಳ ಕರಗುವಿಕೆಯು ಸಮುದ್ರ ಮಟ್ಟದಲ್ಲಿ ಏರಿಕೆ ಆಗಿ ಹಲವು ನಗರಗಳು ಮುಳುಗಡೆಯಾಗಲಿವೆ.
* 2076ರಲ್ಲಿ ಕಮ್ಯುನಿಸಂ ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಪಡೆಯಲಿದೆ.
* 2130ರಲ್ಲಿ ಜಗತ್ತು ಅನ್ಯಗ್ರಹ ಜೀವಿಗಳ ಸಂಪರ್ಕ ಸಾಧಿಸಲಿದೆ.
* 2170ರಲ್ಲಿ ಜಾಗತಿಕ ಮಟ್ಟದಲ್ಲಿ ಭೀಕರ ಬರಗಾಲ ಉಂಟಾಗಲಿದೆ.
* 3005ರಲ್ಲಿ ಮಂಗಳದ ಮೇಲೆ ಯುದ್ಧ.
* 3797ರಲ್ಲಿ ಸೌರವ್ಯೂಹದೊಳಗೆ ಮತ್ತೊಂದು ಗ್ರಹಕ್ಕೆ ತೆರಳುವ ಸಾಮರ್ಥ್ಯ ಇರಲಿದ್ದು, ಭೂಮಿಯ ನಾಶವಾಗಲಿದೆ.
* 5079ರಲ್ಲಿ ಪ್ರಪಂಚದ ಅಂತ್ಯವಾಗಲಿದೆ ಎನ್ನುವ ಭಯಾನಕ ಭವಿಷ್ಯಗಳನ್ನು ನುಡುದಿದ್ದರು.












Click it and Unblock the Notifications