ಕೇರಳ, ಕೊಡಗಿಗೆ 5 ಕೋಟಿ ರು ದೇಣಿಗೆ ನೀಡಿದ ಉದ್ಯಮಿ ಬಿ.ಆರ್ ಶೆಟ್ಟಿ
ಅಬುದಾಭಿ, ಆಗಸ್ಟ್ 29: ಕರ್ನಾಟಕ ಮೂಲದ ಉದ್ಯಮಿ, ಅಬುದಾಭಿಯ ಶ್ರೀಮಂತ ಡಾ ಬಿ. ಆರ್ ಶೆಟ್ಟಿ ಅವರು ಕೇರಳ, ಕೊಡಗಿನ ಪ್ರವಾಹ ಪರಿಹಾರಕ್ಕಾಗಿ 5 ಕೋಟಿ ರು ದೇಣಿಗೆ ನೀಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರು ಹಾಗೂ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 4 ಕೋಟಿ ರು ನೀಡಿದ್ದಾರೆ.
ಅಲ್ಲದೆ, ತಮ್ಮ ಯುಎಇ ಎಕ್ಸ್ ಛೇಂಜ್ ನ 500ಕ್ಕೂ ಅಧಿಕ ಉದ್ಯೋಗಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿದ್ದು, ಸಂತ್ರಸ್ತರಿಗೆ ನೆರವಾಗಲು ಸೂಚಿಸಿದ್ದಾರೆ. ಇದಲ್ಲದೆ ಖಲೀಫಾ ಬಿನ್ ಜಾಯೇದ್ ಅಲ್ ನಹ್ಯಾನ್ ಫೌಂಡೇಶನ್ ಗೆ 9.5 ಕೋಟಿ ರು ದೇಣಿಗೆ ನೀಡಿದ್ದು, ಯುಎಇನಿಂದ ಭಾರತಕ್ಕೆ ನೆರವು ರವಾನೆ ಮಾಡುವ ಯತ್ನದಲ್ಲಿದ್ದಾರೆ.

ಯುಎಇಯಲ್ಲಿ ಅನೇಕ ಮಂದಿ ಭಾರತೀಯರಿದ್ದೇವೆ. ಅದರಲ್ಲೂ ಮಲಯಾಳಿಗಳು ಅಧಿಕವಾಗಿದ್ದಾರೆ. ಈಗ ನಮ್ಮ ಜನ ಸಂಕಷ್ಟದಲ್ಲಿದ್ದಾರೆ. ನಾವು ನಮ್ಮ ಕೈಲಾದ ನೆರವು ನೀಡಬೇಕಿದೆ ಎಂದು ಬಿ.ಆರ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ಮೂಲದ ಡಾ. ಬಿ.ಆರ್ ಶೆಟ್ಟಿ ಅವರು ಯುಎಇಯಲ್ಲಿ ಎನ್ ಎಂ ಸಿ ಹೆಲ್ತ್ ಕೇರ್ ಹಾಗೂ ಯುಎಇ ಎಕ್ಸ್ ಚೇಂಜ್ ನ ಚೇರ್ಮನ್ ಆಗಿದ್ದಾರೆ.












Click it and Unblock the Notifications