ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

B.1.1.529 ಹರಡುವ ಭೀತಿ: ದಕ್ಷಿಣ ಆಫ್ರಿಕಾದಿಂದ ವಿಮಾನ ಪ್ರಯಾಣಕ್ಕೆ ತುರ್ತು ತಡೆ

|
Google Oneindia Kannada News

ಜೋಹಾನ್ಸ್ ಬರ್ಗ್, ನವೆಂಬರ್ 26: ಇನ್ನೇನು ಕೊರೊನಾ ಅರ್ಭಟ ಕಡಿಮೆಯಾಗಿದೆ ಎಂದು ಜನ ನಿಟ್ಟುಸಿರು ಬಿಡುತ್ತಿದ್ದಂತೆ ಮತ್ತೆ ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರ ಕೊರೊನಾ ರೂಪಾಂತರಿ ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ. ಇದರಿಂದಾಗಿ ದಕ್ಷಿಣ ಆಫ್ರಿಕಾದಿಂದ ಪ್ರಯಾಣ ಬೆಳೆಸುವವರಿಗೆ ನಿಷೇಧ ಹೇರಲಾಗಿದೆ. ಹೊಸ COVID-19 ರೂಪಾಂತರಿ ವೈರಸ್ ಹರಡುವುದನ್ನು ತಡೆಯಲು ಸರ್ಕಾರಗಳು ಹರಸಾಹಸ ಮಾಡುತ್ತಿರುವುದರಿಂದ ಜರ್ಮನಿ ಮತ್ತು ಇಟಲಿ ದೇಶಗಳು ಶುಕ್ರವಾರದಂದು ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಕರ ಪ್ರಯಾಣಕ್ಕೆ ತುರ್ತು ತಡೆ ಹೇರಿವೆ.

ಏಕಾಏಕಿ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ರೂಪಾಂತರಿ B.1.1.529 ಹೆಚ್ಚಳವಾಗಿದ್ದು ಇದನ್ನು ತಡೆಲು ತಜ್ಞರು ತಲೆ ಕೆಡಿಸಿಕೊಂಡಿದ್ದಾರೆ. ರೂಪಾಂತರ ವೈರಸ್ ಎಚ್ಚರಿಕೆಯ ಸಂಕೇತವಾಗಿದ್ದು ಯುರೋಪಿಯನ್ ಒಕ್ಕೂಟವು ಪ್ರತ್ಯೇಕವಾಗಿ ದಕ್ಷಿಣ ಆಫ್ರಿಕಾದಿಂದ ಪ್ರಯಾಣವನ್ನು ನಿಷೇಧಿಸುವ ಪ್ರಸ್ತಾಪವನ್ನು ಮಾಡಿದೆ.

"B.1.1.529 ಹರಡುವುದನ್ನು ತಡೆಯಲು ದಕ್ಷಿಣ ಆಫ್ರಿಕಾದ ಪ್ರದೇಶದಿಂದ ವಿಮಾನ ಪ್ರಯಾಣವನ್ನು ನಿಲ್ಲಿಸುವಂತೆ ತುರ್ತು ತಡೆ ಹೇರಲಾಗಿದೆ. ರಾಷ್ಟ್ರಗಳೊಂದಿಗೆ ಚರ್ಚಿಸಿ ಇದನ್ನು ನಿರ್ಧರಿಸಲಾಗಿದೆ " ಎಂದು ಇಯು ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

B.1.1.529 Fear of spreading: Emergency barriers to air travel from South Africa

ಶುಕ್ರವಾರ ರಾತ್ರಿಯಿಂದ ಜರ್ಮನಿಯ ಹೊಸ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿರುವ ವೈರಲ್ ನೆರೆಯ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಜರ್ಮನ್ ಆರೋಗ್ಯ ಸಚಿವ ಜೆನ್ಸ್ ಸ್ಪಾಹ್ನ್ ಹೇಳಿದ್ದಾರೆ. ಹೀಗಾಗಿ ಜರ್ಮನ್ ಪ್ರಜೆಗಳಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗಿದೆ. ಆದರೆ ಪ್ರಯಾಣಿಕರು ಲಸಿಕೆ ಹಾಕಿದ್ದರೂ ಸಹ ಅವರು ಆಗಮಿಸಿದ ನಂತರ 14 ದಿನಗಳವರೆಗೆ ಕ್ವಾರಂಟೈನ್ ಇರಬೇಕು ಎಂದು ಅವರು ತಿಳಿಸಿದ್ದಾರೆ.

"ಹಿಂದಿನ ವೈರಸ್ ಗಳಿಗಿಂತ ಹೊಸ ರೂಪಾಂತರ ವೈರಸ್ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ" ಎಂದು ಸ್ಪ್ಯಾನ್ ಹೇಳಿದ್ದಾರೆ. ಜರ್ಮನಿಯು ಸದ್ಯ ನಾಲ್ಕನೇ ಅಲೆಯ ಹಿಡಿತದಲ್ಲಿದೆ. ರೋಮ್‌ನಲ್ಲಿ ಕಳೆದ ಹದಿನೈದು ದಿನಗಳಲ್ಲಿ ದಕ್ಷಿಣ ಆಫ್ರಿಕಾ, ಲೆಸೊಥೋ, ಬೋಟ್ಸ್‌ವಾನಾ, ಜಿಂಬಾಬ್ವೆ, ಮೊಜಾಂಬಿಕ್, ನಮೀಬಿಯಾ ಅಥವಾ ಇಸ್ವಾಟಿನಿಯಲ್ಲಿದ್ದವರಿಗೆ ಪ್ರವೇಶವನ್ನು ನಿಷೇಧಿಸುವುದಾಗಿ ಸರ್ಕಾರ ಶುಕ್ರವಾರ ಘೋಷಿಸಿತು.

ವಿಜ್ಞಾನಿಗಳು ಹೊಸ B.1.1.529 ರೂಪಾಂತರವನ್ನು ಅಧ್ಯಯನ ಮಾಡುತ್ತಿದ್ದಾರೆ. ಈ ವೇಳೆ ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವ ರಾಬರ್ಟೊ ಸ್ಪೆರಾನ್ಜಾ ಹೇಳಿದ್ದಾರೆ. ಶುಕ್ರವಾರ 1200 GMT ಯಿಂದ ದಕ್ಷಿಣ ಆಫ್ರಿಕಾ ಮತ್ತು ಅದರ ನೆರೆಹೊರೆಯಿಂದ ಎಲ್ಲಾ ವಿಮಾನಗಳನ್ನು ನಿಷೇಧಿಸಲಾಗುವುದು ಎಂದು ಬ್ರಿಟನ್ ಘೋಷಿಸಿತು. ಆದರೆ ಬ್ರಿಟನ್ ನಿರ್ಧಾರವನ್ನು ದಕ್ಷಿಣ ಆಫ್ರಿಕಾ ತೀವ್ರವಾಗಿ ಖಂಡಿಸಿದೆ.

"ತಮ್ಮ ಪ್ರಜೆಗಳನ್ನು ರಕ್ಷಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಎಲ್ಲಾ ದೇಶಗಳು ಕ್ರಮ ಕೈಗೊಳ್ಳುವಂತೆ ದಕ್ಷಿಣ ಆಫ್ರಿಕಾ ಕೂಡ ಮಾಡುತ್ತಿದೆ. ಇದು ಹಕ್ಕನ್ನು ಕಿತ್ತುಕೊಂಡಂತೆ. ದಕ್ಷಿಣ ಆಫ್ರಿಕನ್ನರನ್ನು ಯುಕೆಗೆ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸುವ ಯುಕೆ ನಿರ್ಧಾರವನ್ನು ಸ್ವೀಕಾರ್ಹವಲ್ಲ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಇನ್ನೂ ಸಲಹೆ ನೀಡಿಲ್ಲ. ಅದಾಗಲೇ ಈ ತೀರ್ಮಾನ ಕೈಗೊಳ್ಳಲಾಗಿದೆ" ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

B.1.1.529 ರ ಮೊದಲ ಪ್ರಕರಣ ನವೆಂಬರ್ 11 ರಂದು ಬೋಟ್ಸ್ವಾನಾದಲ್ಲಿ ವರದಿಯಾಗಿದೆ. ಮೂರು ದಿನಗಳ ನಂತರ, ದಕ್ಷಿಣ ಆಫ್ರಿಕಾದಲ್ಲಿ ಅದೇ ರೂಪಾಂತರವನ್ನು ದೃಢಪಡಿಸಲಾಯಿತು. ಇವುಗಳ ಹೊರತಾಗಿ, ಇಲ್ಲಿಯವರೆಗೆ ಈ ರೂಪಾಂತರವು ಹಾಂಗ್ ಕಾಂಗ್‌ನಲ್ಲಿ 36 ವರ್ಷದ ವ್ಯಕ್ತಿಯಲ್ಲಿ ಮಾತ್ರ ಕಂಡುಬಂದಿದೆ. ಇವರು ದಕ್ಷಿಣ ಆಫ್ರಿಕಾದಲ್ಲಿ ಅಕ್ಟೋಬರ್ 22 ರಿಂದ ನವೆಂಬರ್ 11 ರವರೆಗೆ ಇರುವುದು ಕಂಡು ಬಂದಿದೆ. ನವೆಂಬರ್ 13 ರಂದು, ಅವರ ಮಾದರಿಯಲ್ಲಿ ಹೊಸ ರೂಪಾಂತರ ಪತ್ತೆಯಾಗಿದೆ ಮತ್ತು ಅಂದಿನಿಂದ ಅವರು ಕ್ವಾರಂಟೈನ್‌ನಲ್ಲಿದ್ದಾರೆ.

English summary
Germany and Italy on Friday joined Britain in banning most travel from South Africa as governments scramble to prevent the spread of a new COVID-19 variant with a large number of mutations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X