ಆಸ್ಟ್ರೇಲಿಯಾ ಯುದ್ಧ ವಿಮಾನ ಹೊಡೆದು ಉರುಳಿಸಲು ಮುಂದಾಗಿತ್ತಾ ಚೀನಾ ಸೇನೆ?
ಚೀನಾ ಮತ್ತು ಆಸ್ಟ್ರೇಲಿಯಾ ನಡುವೆ ಬೆಂಕಿ ಹೊತ್ತಿಕೊಂಡಿದೆ. ಜಗತ್ತಿನಲ್ಲಿ ಬೇಡ, ಬೇಡ ಅಂದರೂ ಮತ್ತೆ ಮತ್ತೆ ಯುದ್ಧಗಳು ಶುರುವಾಗುತ್ತಿವೆ. ಇತ್ತೀಚಿಗೆ ನಿಂತು ಹೋಗಿದ್ದ ಗಾಜಾ & ಇಸ್ರೇಲ್ ಯುದ್ಧ ಕೂಡ ಮತ್ತೆ ಹಿಂಸಾಚಾರದ ಬೆಂಕಿಯಲ್ಲಿ ಬೆಂದು ಹೋಗುವಂತೆ ಆಗುತ್ತಿದೆ. ಹೀಗಿದ್ದಾಗ ಉಕ್ರೇನ್ & ರಷ್ಯಾ ಯುದ್ಧ ಕೂಡ ನಿಲ್ಲುವ ಲಕ್ಷಣ ಸದ್ಯಕ್ಕೆ ಗೋಚರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಭಯಾನಕ ಸುದ್ದಿ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ, ಆಸ್ಟ್ರೇಲಿಯಾ ಯುದ್ಧ ವಿಮಾನ ಹೊಡೆದು ಉರುಳಿಸಲು ಮುಂದಾಗಿತ್ತಾ ಚೀನಾ ಸೇನೆ?
ದಕ್ಷಿಣ ಚೀನಾ ಸಮುದ್ರ ಈಗ ಯುದ್ಧದ ಅಖಾಡವಾಗಿ ಬದಲಾಗಿದ್ದು, ಈ ಭಾಗದಲ್ಲಿ ಆಗಾಗ ಕಿಚ್ಚು ಹೊತ್ತಿಕೊಳ್ಳುತ್ತಿದೆ. ಇದೀಗ ದಿಢೀರ್ ಆಸ್ಟ್ರೇಲಿಯಾ ಜೆಟ್ ಗಸ್ತು ತಿರುಗುವ ಸಮಯದಲ್ಲಿ ಚೀನಾ ಸೇನೆ ದಾಳಿ ಮಾಡಲು ಪ್ರಯತ್ನ ಮಾಡಿದೆ, ಈ ಮೂಲಕ ಭಯ ಹುಟ್ಟಿಸುವ ವರ್ತನೆ ತೋರಿಸಿದೆ ಅಂತಾ ಇದೀಗ ಆಸ್ಟ್ರೇಲಿಯಾ ಆರೋಪ ಮಾಡಿದೆ. ಒಂದು ಕಡೆ ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಹತ್ವದ ಮಾತುಕತೆ ನಡೆಯುವ ಸಮಯದಲ್ಲೇ ಈ ರೀತಿ ಘಟನೆ ನಡೆದಿರುವುದು ಹಲವು ಅನುಮಾನ ಮೂಡಿಸಿದೆ.

ಚೀನಾ ಹೇಳಿದ್ದು ಏನು ಗೊತ್ತಾ?
ಆಸ್ಟ್ರೇಲಿಯಾ ಪ್ರಧಾನಿ ಆರೋಪ ಮಾಡಿರುವ ಪ್ರಕಾರ, ಚೀನಾ ಸೇನೆ ಇದೀಗ ಅಸುರಕ್ಷಿತ & ವೃತ್ತಿಪರ ಅಲ್ಲದ ರೀತಿಯಲ್ಲಿ ವರ್ತಿಸುತ್ತಿದೆ. ಹಾಗೇ ಬೇಕು ಅಂತಲೇ ಆಸ್ಟ್ರೇಲಿಯಾ ಜೆಟ್ ಮೇಲೆ ದಾಳಿ ಮಾಡಿ ಆತಂಕ ಹುಟ್ಟಿಸಿದೆ ಅಂತಾ ಹೇಳಿದ್ದಾರೆ ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್. ಹೀಗೆ ಆಸ್ಟ್ರೇಲಿಯಾದ ಪ್ರಧಾನಿ ಮಾಡಿದ ಆರೋಪಕ್ಕೆ ಚೀನಾ ಬೇರೆಯದ್ದೇ ಉತ್ತರ ನೀಡಿದೆ ಈಗ.
ಮತ್ತೊಂದು ಭೀಕರ ಯುದ್ಧ ಶುರು?
ಆಸ್ಟ್ರೇಲಿಯಾ ಜೆಟ್ ಚೀನಾ ವಾಯು ಪ್ರದೇಶಕ್ಕೆ ಅಕ್ರಮವಾಗಿ ನುಸುಳಿತ್ತು ಎಂದಿದ್ದಾರೆ ಚೀನಾ ಮಿಲಿಟರಿ ಅಧಿಕಾರಿಗಳು. ಅಲ್ಲದೆ ನಮ್ಮ ಸಾರ್ವಭೌಮತ್ವ ಉಲ್ಲಂಘನೆ ಮಾಡಿದೆ ಆಸ್ಟ್ರೇಲಿಯಾ ಎಂಬ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ ಚೀನಾ ಸೇನಾ ಅಧಿಕಾರಿಗಳು. ಹೀಗಾಗಿ ಮತ್ತೊಂದು ರೌಂಡ್ ಯುದ್ಧದ ಭಯ ಇದೀಗ ದಿಢೀರ್ ಸೃಷ್ಟಿಯಾಗಿದೆ. ಯಾವಾಗ ಇಬ್ಬರ ನಡುವೆ ನೇರ ಯುದ್ಧ ಶುರುವಾಗುತ್ತೆ? ಅನ್ನೋ ಚರ್ಚೆ ನಡೆಯುತ್ತಿದೆ. ಆದರೆ ಇದೆಲ್ಲಾ ಆದಷ್ಟು ಬೇಗ ತಣ್ಣಗೆ ಆಗಲಿ, ಮತ್ತೊಂದು ಯುದ್ಧ ಶುರುವಾಗುವುದು ಬೇಡ ಎಂಬ ಆಗ್ರಹ ಕೂಡ ಜಗತ್ತಿನಾದ್ಯಂತ ಕೇಳಿಬರುತ್ತಿದೆ. ಯಾಕೆ ಎಂದರೆ ಈಗಾಗಲೇ ರಷ್ಯಾ & ಉಕ್ರೇನ್ ಹಾಗೂ ಗಾಜಾ & ಇಸ್ರೇಲ್ ನಡುವೆ ವಾರ್ ನಡೆಯುತ್ತಿದೆ.












Click it and Unblock the Notifications