Chandrayaan-3: ಆಸ್ಟ್ರೇಲಿಯಾ ಕಡಲಿಗೆ ಬಿದ್ದ ‘ಚಂದ್ರಯಾನ-3’ ತುಣುಕು?

ಸಿಡ್ನಿ: ಭಾರತದ ಕೀರ್ತಿ ಪತಾಕೆಯನ್ನ ಮುಗಿಲೆತ್ತರಕ್ಕೆ ಹಾರಿಸಿದ್ದ 'ಚಂದ್ರಯಾನ-3' ಈಗ ವೇಗವಾಗಿ ತನ್ನ ಗುರಿಯತ್ತ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 23ರ ಸಂಜೆ ಚಂದ್ರನ ಮೇಲೆ ಇಸ್ರೋ ರೋವರ್ ಲ್ಯಾಂಡ್ ಮಾಡಲಿದೆ. ಆದ್ರೆ ಇದೇ ಸಂದರ್ಭದಲ್ಲಿ ಭಯ ಎದುರಾಗಿದ್ದು ಆಸ್ಟ್ರೇಲಿಯಾ ಕಡಲ ತೀರದಲ್ಲಿ ವಿಚಿತ್ರವಸ್ತು ಒಂದು ಸಿಕ್ಕಿದೆ. ಇದು 'ಚಂದ್ರಯಾನ-3'ರ ತುಣುಕು ಎಂಬ ಅನುಮಾನ ಕೂಡ ಮೂಡಿದೆ!

ಹೌದು, ಬೃಹತ್ ಗಾತ್ರದ ಲೋಹದ ಸಿಲಿಂಡರ್ ಪಶ್ಚಿಮ ಆಸ್ಟ್ರೇಲಿಯಾ ಕಡಲ ತೀರದಲ್ಲಿ ಪತ್ತೆ ಆಗಿದೆ. ಆದರೆ ಸಿಲಿಂಡರ್ ಆಕಾರದ ವಸ್ತು ಏನು ಎಂಬುದು ಯಾರಿಗೂ ತಿಳಿದಿಲ್ಲ. ಹೀಗಾಗಿ ವಿಚಿತ್ರ ವಿಚಿತ್ರ ಚರ್ಚೆ ನಡೆಯುತ್ತಿದ್ದು, ಇದು 'ಚಂದ್ರಯಾನ-3'ರ ರಾಕೆಟ್‌ನ ತುಣುಕು ಇರಬಹುದಾ? ಅಂತಿದ್ದಾರೆ ಜನ. ವಿಚಿತ್ರ ವಸ್ತು ರಾಕೆಟ್, ವಿಮಾನ ಅಥವಾ ಹಡಗಿನ ಬಿಡಿ ಭಾಗ ಇರಬಹುದಾ? ಅನ್ನೋ ಮಾತುಕತೆ ಕೂಡ ನಡೆಯುತ್ತಿದೆ. ಇನ್ನು ತಕ್ಷಣ ಅಲರ್ಟ್ ಆಗಿರುವ ಆಸಿಸ್ ನಾಡಿನ ಪೊಲೀಸರು, ವಿಚಿತ್ರ ವಸ್ತುವಿನ ಹತ್ತಿರ ಸುಳಿಯಬೇಡಿ ಎಂದು ಪ್ರವಾಸಿಗರಿಗೆ ಖಡಕ್ ಸೂಚನೆ ನೀಡಿದ್ದಾರೆ.

Chandrayaan-3

ಓಡೋಡಿ ಬರುತ್ತಿರುವ ಜನರ ಹಿಂಡು!

ಅಷ್ಟಕ್ಕೂ ಮೇಲ್ನೋಟಕ್ಕೆ ತಾಮ್ರದ ಗೋಳದಂತೆ ಕಾಣುತ್ತಿರುವ ಬೃಹತ್ ವಸ್ತು ಹಾನಿಯಾದ ರೀತಿ ಕಂಡು ಬಂದಿದೆ. ಹೀಗಾಗಿ ಈ ವಿಚಿತ್ರ ವಸ್ತುವಿನ ಫೋಟೋ ಹಾಗೂ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೇ ಕಾರಣಕ್ಕೆ ಈ ವಸ್ತು ನೋಡೋದಕ್ಕೆ ಅಂತಾ ಜನರು ಕೂಡ ಸಾಗರದಂತೆ ಹರಿದು ಬರ್ತಿದ್ದಾರೆ. ಆಸ್ಟ್ರೇಲಿಯಾ ಪಶ್ಚಿಮ ಕರಾವಳಿ ಗ್ರೀನ್ ಹೆಡ್ ಟೌನ್‌ ಪ್ರದೇಶ ಇದೇ ಕಾರಣಕ್ಕೆ ಈಗ ಹೈಲೈಟ್ ಆಗಿದೆ. ಮೇಲ್ನೋಟಕ್ಕೆ ಅರ್ಧ ಗೋಳದಂತ ಕಾಣುತ್ತಿರುವ ಈ ವಿಚಿತ್ರ ವಸ್ತು, ಯಾವುದೋ ಬೃಹತ್ ವಸ್ತುವಿನಿಂದ ಬೇರ್ಪಟ್ಟ ಭಾಗದಂತೆ ಕಂಡು ಬರ್ತಿದೆ. ಹೀಗಾಗಿ ಅನಾಮಿಕ ವಸ್ತುವಿನ ಬಳಿ ಹೋದ್ರೆ ಅಪಾಯ ಕೂಡ ಎದುರಾಗುವ ಅನುಮಾನವಿದ್ದು, ಪೊಲೀಸರು ವಸ್ತುವಿನ ಹತ್ತಿರಕ್ಕೆ ಯಾರನ್ನೂ ಬಿಡ್ತಿಲ್ಲ.

'ಚಂದ್ರಯಾನ-3'ರ ರಾಕೆಟ್ ತುಣುಕು ಇರಬಹುದಾ?

ನೋಡಿ ಭಾರತದ 'ಚಂದ್ರಯಾನ-3'ರ ಖದರ್ ಹೇಗಿದೆ ಅಂತಾ. ಕೆಲವರು ವಿಚಿತ್ರ ವಸ್ತು ಭಾರತದ ಚಂದ್ರಯಾನ-3ರ ಗಗನ ನೌಕೆಯನ್ನು ಉಡಾಯಿಸಿದ ರಾಕೆಟ್‌ನ ಬಿಡಿಭಾಗ? ಎಂದು ಅನುಮಾನಿಸಿದ್ದಾರೆ. ಇದರ ಜೊತೆಗೆ ಇನ್ನೂ ಒಂದು ಅನುಮಾನ ಶುರುವಾಗಿದ್ದು, 2014ರ ಮಾರ್ಚ್‌ 8ರಂದು ಕಣ್ಮರೆಯಾಗಿದ್ದ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್‌ 370ನದ್ದಾ? ಎಂಬ ಮಾತು ಕೇಳಿಬರುತ್ತಿದೆ. ಈ ವಸ್ತು ಸುಮಾರು 2.5 ಮೀಟರ್ ಅಗಲ ಹಾಗೂ 3 ಮೀಟರ್ ಉದ್ದ ಇದೆ.

Chandrayaan-3

ಭಾರತದ ಸಾಧನೆಗೆ ಜಗತ್ತೇ ಫಿದಾ!

ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ 'ಚಂದ್ರಯಾನ-3' ರಾಕೆಟ್ ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ ಮತ್ತು ರೋವರ್ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿದೆ. ಭೂಮಿಯಿಂದ 3,84,000 ಕಿಮೀ ದೂರದಲ್ಲಿರುವ ಚಂದ್ರನತ್ತ ಭಾರತದ ಯಾತ್ರೆ ಹೊರಟಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದು, ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಯೋಜನೆ ಟಾರ್ಗೆಟ್. ಹೀಗೆ ಇಡೀ ಜಗತ್ತೇ ಮೆಚ್ಚುವ ಕೆಲಸವನ್ನ ಭಾರತದ ಇಸ್ರೋ ಮಾಡಿದ್ದು, ಎಲ್ಲೆಲ್ಲೂ ಈ ಕುರಿತು ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾದಲ್ಲಿ ಸಿಕ್ಕ ವಿಚಿತ್ರ ವಸ್ತು ಚರ್ಚೆಯನ್ನ ಮತ್ತಷ್ಟು ಹೆಚ್ಚು ಮಾಡಿದೆ.

ಚಂದ್ರನ ಮೇಲೆ ನೀರು ಹುಡುಕುವ ಕೆಲಸ ಸೇರಿ, ಸಾಕಷ್ಟು ಅಧ್ಯಯನವನ್ನ ನಡೆಸಲು ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಅಷ್ಟಕ್ಕೂ ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರಬಿಂದು ಚಂದ್ರ. ಹೀಗಾಗಿ ಚಂದ್ರನ ಮೇಲೆ ಮನುಷ್ಯನಿಗೆ ಸಾಕಷ್ಟು ಸೆಳೆತ ಇದ್ದೇ ಇದೆ. ಇಸ್ರೋ ಈ ಎಲ್ಲಾ ಕುತೂಹಲಗಳಿಗೆ ಉತ್ತರವನ್ನು ಹುಡುಕಿ ಚಂದ್ರನತ್ತ ಹೊರಟಿದೆ. ಇನ್ನೇನು 'ಚಂದ್ರಯಾನ -3' ಕೆಲವೇ ತಿಂಗಳಲ್ಲಿ ತನ್ನ ಗುರಿ ತಲುಪಿ, ಚಂದ್ರನ ಮೇಲೆ ರೋವರ್ ಇಳಿಸಲಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ 2008ರಲ್ಲಿ ಇಸ್ರೋ ಸಂಸ್ಥೆ ಚಂದ್ರನ ಮೇಲೆ ನೀರು ಪತ್ತೆ ಮಾಡಿತ್ತು. ಈಗ ಎಲ್ಲ ಪ್ರಶ್ನೆಗೂ ಚಂದ್ರನ ಮೇಲೆ ಇಳಿದು ಉತ್ತರ ಕಂಡುಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+